ಆ್ಯಪ್ನಗರ

Episode 26 Highlights: ಎರಡನೇ ಮದುವೆ ಬಗ್ಗೆ ಹೇಳಿದ ಆರ್‌ ಜೆ ಪೃಥ್ವಿ

ನನಗೆ ಎರಡು ಮದುವೆಯಾಗಿದೆ. ಮೂರು ಮೂರುವರೆ ವರ್ಷ ಒಟ್ಟಿಗೆ ಇದ್ದೆವು. ಟೆನ್ನಿಸ್ ಆಡಬೇಕಾದಾಗಲೆ ಮೊದಲನೆ ಹೆಂಡತಿ ಸಿಕ್ಕಿದಳು. ಆದರೆ ನಮ್ಮ ದಾಂಪತ್ಯ ಜೀವನ ಬಹಳ ದಿನಗಳ ಕಾಲ ಉಳಿಯಲಿಲ್ಲ ಎಂದಿದ್ದಾರೆ ಆರ್ ಜೆ ಪೃಥ್ವಿ.

Vijaya Karnataka Web 8 Nov 2019, 6:54 pm
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಆರ್‌ಜೆ ಪೃಥ್ವಿ ತಮ್ಮನ್ನು ತಾವು ಮನೆಯ ಸದಸ್ಯರ ಜೊತೆಗೆ ಪರಿಚಯಿಸಿಕೊಂಡರು. "ನಾನು ಹುಟ್ಟಿದ್ದು ಚಿಕ್ಕಮಕ್ಕಳೂರು. ಬೆಳೆದದ್ದು, ಹಾಳಾಗಿದ್ದು ಎಲ್ಲ ಬೆಂಗಳೂರಿನಲ್ಲಿ. ನಾನು ಮೂಲತಃ ಲಾನ್ ಟೆನ್ನಿಸ್ ಆಟಗಾರ. ಸುಮಾರು 12 ವರ್ಷಗಳ ಕಾಲ ಆಟ ಆಡಿದೆ. ನನ್ನ ಬೆನ್ನಿಗೆ ನಿಂತಿದ್ದವರು ನನ್ನ ತಂದೆ ತಾಯಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದೇನೆ. ಕೊನೆಗೆ ಗೊತ್ತಾಗಿದ್ದೇನೆಂದರೆ ಇದು ನನಗೆ ಆಗಿಬರಲ್ಲ ಅಂತ". ಎಂದರು.
Vijaya Karnataka Web ಆರ್ ಜೆ ಪೃಥ್ವಿ


"ಯಾಕೆಂದರೆ ತುಂಬಾ ಖರ್ಚು ಆಗುತ್ತಿತ್ತು. ಹಾಗಾಗಿ ಅದನ್ನು ನಿಲ್ಲಿಸಿದೆ. ಆಮೇಲೆ ನನ್ನ ಶಿಕ್ಷಣವೂ ಸರಿಯಾಗಿ ನಡೆಯಲಿಲ್ಲ. ತುಂಬಾ ಗ್ಯಾಪ್ ಕೊಟ್ಟುಕೊಳ್ತಾ ಸಾಗಿತು. ಕೆಲವೊಂದು ಆಡ್ ಜಾಬ್ಸ್ ಮಾಡುತ್ತಿದ್ದೆ. ಒಮ್ಮೆ ಪ್ರಚಾರ ಮಾಡುವ ಕೆಲಸ ಸಿಕ್ಕಿತು. ಕೈಗೆ ಮೈಕ್ ಸಿಕ್ಕಿದ್ದೇ ತಡ ಇದೇ ನನ್ನ ವೃತ್ತಿ ಎಂಬಂತಾಗಿ ರೇಡಿಯೋ ಜಾಕಿ ಆದೆ ಎಂದರು ಆರ್ ಜೆ ಪೃಥ್ವಿ.

Episode 25 Highlights: ಚೈತ್ರಾ ಕೋಟೂರ್ ಹುಚ್ಚು ಬಿಡಿಸಿದ ಶೈನ್ ಶೆಟ್ಟಿ

ಮೂರು ಸಿನಿಮಾಗಳಲ್ಲೂ ಆಕ್ಟ್ ಮಾಡಿದ್ದೇನೆ. ಆ ಮೂರೂ ಸೂಪರ್ ಫ್ಲಾಪ್ ಎಂದರು. ನನಗೆ ಎರಡು ಮದುವೆಯಾಗಿದೆ. ಮೂರು ಮೂರುವರೆ ವರ್ಷ ಒಟ್ಟಿಗೆ ಇದ್ದೆವು. ಟೆನ್ನಿಸ್ ಆಡಬೇಕಾದಾಗಲೆ ಮೊದಲನೆ ಹೆಂಡತಿ ಸಿಕ್ಕಿದಳು. ಆದರೆ ನಮ್ಮ ದಾಂಪತ್ಯ ಜೀವನ ಬಹಳ ದಿನಗಳ ಕಾಲ ಉಳಿಯಲಿಲ್ಲ.

ಎರಡನೇ ಮದುವೆ ಒಟ್ಟಿಗೆ ಏಳು ವರ್ಷ ಇದ್ದೆವು. ಈಗಲೂ ನಿತ್ಯ ಮಾತನಾಡುತ್ತೇವೆ. ಕೊನೆಗೆ ನಾವು ಸ್ನೇಹಿತರಾಗಿಯೇ ಇರುವುದೇ ವಾಸಿ ಎಂದು ಡಿಸೈಡ್ ಮಾಡಿದೆವು. ಈಗಲೂ ತುಂಬಾ ಖುಷಿಯಾಗಿದ್ದೇವೆ ಎಂದರು. ಫೋನ್‌ನಲ್ಲಿ ಮಾತನಾಡಿಕೊಳ್ಳುತ್ತೇವೆ. ಸದ್ಯಕ್ಕೆ ಒಂಟಿಯಾಗಿದ್ದೇನೆ, ಖುಷಿಯಾಗಿದ್ದೀನಿ, ನೆಮ್ಮದಿಯಾಗಿದ್ದೀನಿ. ನೋಡಮ್ಮ ಚಂದನಾ ಎಂದು ಹೇಳಿ ಎಲ್ಲರನ್ನೂ ನಗಿಸಿದರು.

'ಬಿಗ್ ಬಾಸ್‌' ಶೋ ನಿರೂಪಣೆ ಮಾಡಿದ್ದಕ್ಕೆ ನೀಡುವ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್‌ನ ಲಗ್ಜುರಿ ಬಜೆಟ್ ಟಾಸ್ಕ್ ’ರಣರಂಗ’ ಇಂದೂ ಮುಂದುವರೆಯಿತು. ಅದರಂತೆ ನಾನಾ ರೀತಿಯ ಟಾಸ್ಕ್‌ಗಳನ್ನು ಸ್ಪರ್ಧಿಗಳಿಗೆ ನೀಡಲಾಯಿತು. ಸಪ್ತಾಶ್ವ ಹಾಗೂ ಸಿಡಿಲು ತಂಡಗಳ ನಡುವೆ ಹಣಾಹಣಿ ನಡೆಯಿತು.

ಕೊನೆಗೂ ಈ ಟಾಸ್ಕ್‌ನಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ಒಂಟಿ ಕಾಲಲ್ಲಿ ನಿಂತು ಭೂಮಿ ಶೆಟ್ಟಿ ಗೆದ್ದಿದ್ದಾರೆ. ಭೂಮಿ ಮತ್ತು ದೀಪಿಕಾ ದಾಸ್ ಒಂಟಿ ಕಾಲಲ್ಲಿ ಮೂರೂವರೆ ಗಂಟೆಗಳ ಕಾಲ ನಿಂತಿದ್ದು ನಿಜಕ್ಕೂ ದಾಖಲೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ