ಆ್ಯಪ್ನಗರ

Episode 52 Highlights: ಟೈಂ ಬಾಂಬ್ ಟಾಸ್ಕ್‌ನಲ್ಲಿ 'ಸ್ಫೋಟ'ಗೊಂಡ ಚಂದನ್-ರಾಜು

ಸದಾ ಸಂಯಮದಿಂದ ಇರುವ ಕುರಿ ಪ್ರತಾಪ್ ಸಹ ತಾಳ್ಮೆ ಕಳೆದುಕೊಂಡರು. ಚಂದನ್ ಆಚಾರ್ ಮೇಲೆ ಗುಡುಗಿದರು. ನೀನು ಮಾತನಾಡಬೇಕು ಎಂದರೆ ಹೋಗಿ ಕ್ಯಾಮೆರಾ ಮುಂದೆ ನಿಂತುಕೊಂಡು ಮಾತಾಡು ಎಂದರು. ಜೋರಾಗಿ ಬಾಲನ್ನು ಎಸೆದು ವಾಸುಕಿ ತಲೆಗೆ ತಗಲುವಂತೆ ಮಾಡಿದರು.

Vijaya Karnataka Web 4 Dec 2019, 12:29 pm

ಬಿಗ್ ಬಾಸ್ 7ನೇ ಸೀಸನ್ ಏಳು ಪಟ್ಟು ಮಜಾ ಎಂಬ ಮಾತಿಗೆ ಈಗ ಅರ್ಥ ಸಿಕ್ಕಂತಿದೆ. ಐವತ್ತು ದಿನಗಳನ್ನು ಪೂರೈಸಿದ ಬಳಿಕ ಮನೆಯ ಸದಸ್ಯರು ಅಲರ್ಟ್ ಆಗಿದ್ದಾರೆ. ಒಬ್ಬರ ಬಗ್ಗೆ ಮತ್ತೊಬ್ಬರು ಚರ್ಚಿಸುವಂತಾಗಿದೆ. ನಿಜವಾದ ಮುಖಗಳು ಈಗ ಗೊತ್ತಾಗುತ್ತಿವೆ.
Vijaya Karnataka Web ಬಿಗ್ ಬಾಸ್ ಕನ್ನಡ


ಚೈತ್ರಾ ಕೋಟೂರ್ ಎಲ್ಲಾ ಎಪಿಸೋಡ್‌ಗಳನ್ನು ಪಕ್ಕಾ ನೊಡಿಕೊಂಡು ಬಂದಿದ್ದಾರೆ ಎಂಬುದು ಅವರ ಆಟ ನೋಡಿದರೆ ಗೊತ್ತಾಗುತ್ತದೆ. ಈಗ ಎಲ್ಲರನ್ನು ತರಾಟೆಗೆ ತೆಗೆದುಕೊಳ್ಳುವುದು, ಅವರ ಬಣ್ಣ ಬಯಲು ಮಾಡಲು ಮುಂದಾಗಿದ್ದಾರೆ.

ಹೌದು ಸ್ವಾಮಿ ಟಾಸ್ಕ್‌ನಲ್ಲಿ ಪ್ರಶ್ನೆಗಳನ್ನು ಕೇಳಿದಾಗ ಹೌದು ಸ್ವಾಮಿ ಎನ್ನಬೇಕು ಎಂದು ಸೂಚನೆ ನೀಡಿದರು. ಅದರ ಪ್ರಕಾರ ಕುರಿ ಪ್ರತಾಪ್‌ಗೆ ಇನ್ನೊಂದು ಒಗಟು ನೀಡಬೇಕು ಅಂತೀರಾ? ಎಂದು ಕೇಳಿದ್ದಕ್ಕೆ ಎಲ್ಲರೂ ಹೌದು ಸ್ವಾಮಿ ಎಂದರು.
ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಪ್ರೇಮ ಕಹಾನಿ; ಇಲ್ಲೇ ಇರೋದು ಟ್ವಿಸ್ಟ್

ಅದರಂತೆ ಬಿಗ್ ಬಾಸ್ ಹೊಸ ಗಾದೆಯನ್ನು ನೀಡಿದ್ದಾರೆ. "ಚೆಲ್ಲೋದುಂಟು ಕುಯ್ಯೋದುಂಟು ತಿನ್ನೋದಿಲ್ಲ" ಎಂಬ ಒಗಟನ್ನು ನೀಡಿದ್ದಾರೆ. ಇದನ್ನು ಇಂಗ್ಲಿಷ್‌ನಲ್ಲಿ ಹೇಳಿ ಮನೆಯ ಸದಸ್ಯರಿಂದ ಉತ್ತರ ಪಡೆಯಬೇಕು. ಆ ಪ್ರಕಾರ ಚೈತ್ರಾ ಕೋಟೂರ್ ಸರಿಯಾಗಿ ಉತ್ತರ ನೀಡಿದರು. ಉತ್ತರ 'ಕೂದಲು'.

ಇನ್ನೊಂದು ಚಟುವಟಿಕೆ ಟೈಂ ಬಾಂಬ್‌ನಲ್ಲಿ ಚಂದನ್ ಆಚಾರ್ ಹಾಗೂ ರಾಜು ತಾಳಿಕೋಟೆ ನಡುವೆ ಮಾತಿನ ಚಕಮಕಿ ನಡೆಯಿತು. ಇಬ್ಬರೂ ಬಾಯಿಗೆ ಬಂದಂತೆ ಕಿತ್ತಾಡಿದರು. ಬಿಗ್ ಬಾಸ್ ನೀಡಿರುವ ಚಟುವಟಿಕೆಯಲ್ಲಿ ಚಂದನ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅವರೊಂದಿಗೆ ವಾಗ್ವಾದಕ್ಕೆ ಇಳಿದರು.

ನಾಲ್ಕೇ ವಾರಕ್ಕೆ ಮನೆಯಿಂದ ಹೊರಬಿದ್ದ 'ನೈಟಿ' ಖ್ಯಾತಿಯ ಪೃಥ್ವಿ

ಇದರಿಂದ ರೊಚ್ಚಿಗೆದ್ದ ಚಂದನ್, ಮೊನ್ನೆಯಿಂದ ನೋಡ್ತಾ ಇದ್ದೀನಿ. ನನ್ನನ್ನು ಟಾರ್ಗೆಟ್ ಮಾಡ್ತಿದ್ದೀರಿ ಎಂದು ರಾಜು ತಾಳಿಕೋಟೆ ವಿರುದ್ಧ ತಿರುಗಿಬಿದ್ದರು. ಥೂ.. ನಿನ್ನ ಜನ್ಮಕ್ಕೆ ಬೆಂಕಿಹಾಕ ಥೂ ಥೂ ಎಂದು ಉಗಿದರು ರಾಜು ತಾಳಿಕೋಟೆ.

ಇದೇ ವಿಚಾರವಾಗಿ ಮನೆಯಲ್ಲಿ ಬಹಳಷ್ಟು ಚರ್ಚೆಯೂ ನಡೆಯಿತು. ಟಾಸ್ಕ್‌ನಲ್ಲಿ ನನ್ನನ್ನು ಥೂ ಅಂತ ಶೈನ್ ಶೆಟ್ಟಿ ಬೈದ ಅಂತ ಕಿಶನ್ ಸಹ ಬೇಸರಗೊಂಡಿದ್ದ. ಒಟ್ಟಾರೆ ಈ ಟಾಸ್ಕ್‌ನಲ್ಲಿ ಮನೆಯ ಸದಸ್ಯರು ಕಿತ್ತಾಟ, ಅರಚಾಟದಲ್ಲೇ ತಳ್ಳಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ರಾಜು ತಾಳಿಕೋಟೆ ಟಾಸ್ಕನ್ನು ಸುಸೂತ್ರವಾಗಿ ಮುನ್ನಡೆಸುವಲ್ಲಿ ವಿಫಲರಾದರು ಎಂದೇ ಹೇಳಬೇಕು.

ಸದಾ ಸಂಯಮದಿಂದ ಇರುವ ಕುರಿ ಪ್ರತಾಪ್ ಸಹ ತಾಳ್ಮೆ ಕಳೆದುಕೊಂಡರು. ಚಂದನ್ ಆಚಾರ್ ಮೇಲೆ ಗುಡುಗಿದರು. ನೀನು ಮಾತನಾಡಬೇಕು ಎಂದರೆ ಹೋಗಿ ಕ್ಯಾಮೆರಾ ಮುಂದೆ ನಿಂತುಕೊಂಡು ಮಾತಾಡು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ