ಆ್ಯಪ್ನಗರ

Episode 69 Highlights: ಯೋಗರಾಜ್ ಭಟ್ ಜೊತೆಗಿನ ಬಾಂಧವ್ಯ ಬಿಚ್ಚಿಟ್ಟ ಚೈತ್ರಾ ಕೋಟೂರ್

ಒಮ್ಮೆ ರಾತ್ರಿ ಕಚೇರಿಯಿಂದ ರಾತ್ರಿ ನಾನೊಬ್ಬಳೇ ಹೋಗಬೇಕಾಗಿತ್ತು. ಆಗ ರಾತ್ರಿ ಸುಮಾರು 11 ಗಂಟೆಯಾಗಿತ್ತು. ಸ್ವಲ್ಪ ದೂರ ಹೋದ ಬಳಿಕ ಅವರೇ ನನ್ನ ಫಾಲೋ ಮಾಡಿಕೊಂಡು ಬಂದು ಮನೆತನಕ ಡ್ರಾಪ್ ನೀಡಿದ್ದರು.

Vijaya Karnataka Web 21 Dec 2019, 11:33 am
ಬಿಗ್ ಬಾಸ್ ಮನೆಯಲ್ಲಿ ಈಗ ಭಾಗ್ಯದ ಲಕ್ಷ್ಮಿ ಬಾರಮ್ಮ ಟಾಸ್ಕ್ ಮುಗಿದಿದ್ದು ಹೆಚ್ಚು ಪಾಯಿಂಟ್ಸ್ ಪಡೆಯುವ ಮೂಲಕ ಪ್ರಿಯಾಂಕಾ ಮತ್ತು ಕಿಶನ್ ಜೋಡಿ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ಬಹುಮಾನದ ಮೊತ್ತವನ್ನು ಗ್ರ್ಯಾಂಡ್ ಫಿನಾಲೆಯ ದಿನ ವೇದಿಕೆ ಮೇಲೆ ವಿತರಿಸಲಾಗುತ್ತದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ.
Vijaya Karnataka Web ಚೈತ್ರಾ ಕೋಟೂರ್


ಇದಕ್ಕೂ ಮುನ್ನ ಅತ್ಯುತ್ತಮ ಪ್ರದರ್ಶನ ನೀಡಿದ ಜೋಡಿಯಾಗಿಯೂ ಪ್ರಿಯಾಂಕಾ ಹಾಗೂ ಕಿಶನ್ ಜೋಡಿ ಹೊರಹೊಮ್ಮಿದೆ. ಹಾಗಾಗಿ ಈ ಜೋಡಿಗೆ ಮೆಡಲ್ ಸಹ ಸಿಕ್ಕಿದೆ. ಹಾಗಾಗಿ ಡಬಲ್ ಸಂಭ್ರಮ ಎನ್ನಬಹುದು. ಇದಿಷ್ಟೇ ಅಲ್ಲದೆ ಈ ಸಲ ಮನೆಯ ಕ್ಯಾಪ್ಟನ್ ಆಗಲು ಎರಡು ಜೋಡಿಗಳನ್ನು ಸೂಚಿಸಿದ್ದಾರೆ ಸದ್ಯದ ಕ್ಯಾಪ್ಟನ್ ವಾಸುಕಿ ವೈಭವ್.

ಪ್ರಿಯಾಂಕಾ-ಕಿಶನ್ ಹಾಗೂ ಹರೀಶ್ ರಾಜ್ - ಭೂಮಿ ಶೆಟ್ಟಿ ಜೋಡಿ ನಡುವೆ ಹೊಸ ಕ್ಯಾಪ್ಟನ್ ಆಗಿ ಒಬ್ಬರು ಆಯ್ಕೆಯಾಗಲಿದ್ದಾರೆ. ಇದಕ್ಕೂ ಮುನ್ನ ಬಿಗ್ ಬಾಸ್ ಮನೆಗೆ ಕಿಶನ್ ತಂದೆ ಭೇಟಿ ನೀಡಿದ್ದರು. ಒಟ್ಟಾರೆ ಕಿಶನ್‌ಗೆ ಒಂದಾದ ಮೇಲೊಂದರಂತೆ ಖುಷಿಯ ಸಂಗತಿಗಳು ಈ ವಾರ ಸಿಕ್ಕಿವೆ.

ಭಾಗ್ಯದ ಲಕ್ಷ್ಮಿ ಬಾರಮ್ಮ ಟಾಸ್ಕ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಶೈನ್ ಶೆಟ್ಟಿ ಹಾಗೂ ಚೈತ್ರಾ ಕೋಟೂರ್ ಅವರ ಕೊರಳಿಗೆ ಕಳಪೆ ಬೋರ್ಡ್ ಬಿದ್ದಿದೆ. ಅಷ್ಟೇ ಅಲ್ಲದೆ ಈ ಜೋಡಿಯನ್ನು ಜೈಲಿಗೂ ಕಳುಹಿಸಲಾಗಿದೆ. ಜೈಲಿನಲ್ಲಿ ಶೈನ್ ಹಾಗೂ ಚೈತ್ರಾ ನಡುವೆ ಒಂದಷ್ಟು ತಮಾಷೆ ಪ್ರಸಂಗಗಳೂ ನಡೆದವು. ಚೈತ್ರಾರನ್ನು ಶೈನ್ ಬೆದರಿಸುವಂತೆ ನಟಿಸಿ ಬೆಚ್ಚಿ ಬೀಳಿಸಿದ್ದಾರೆ.

ಟಾಸ್ಕ್ ಒಂದರಲ್ಲಿ ಯೋಗರಾಜ್ ಭಟ್ ಜೊತೆಗಿನ ಒಡನಾಡದ ಬಗ್ಗೆ ಹೇಳಿದ್ದಾರೆ ಚೈತ್ರಾ ಕೋಟೂರ್. "ನನ್ನ ಜೀವನದಲ್ಲಿ ನನ್ನೆಲ್ಲ ಗೊಂದಲಗಳನ್ನು ಬಗೆಹರಿಸಿದ ಗುರುಗಳು ಎಂದರೆ ನಿರ್ದೇಶಕರಾದ ಯೋಗರಾಜ್ ಭಟ್ ಸರ್. ಸಿಕ್ಕಾಪಟ್ಟೆ ಪರಿಶುದ್ಧ ವ್ಯಕ್ತಿಗೆ ಧನ್ಯವಾದ ಅರ್ಪಿಸುವ ಟಾಸ್ಕ್‌ನಲ್ಲಿ ಮಾತನಾಡುತ್ತಾ, ತನ್ನ ಜೀವನದಲ್ಲಿನ ಪರಿಶುದ್ಧ ವ್ಯಕ್ತಿ ಯಾರು, ಕಾರಣ ಯಾಕೆ ಎಂಬುದನ್ನು ತಿಳಿಸಬೇಕಾಗಿತ್ತು.

ಇವರನ್ನು ನಾನು ಗುರು ಎಂದು ಕರೆದರೆ ಅವರಿಗೆ ಇಷ್ಟವಾಗಲ್ಲ. ಅವರನ್ನು ನಾನು ಪರಿಶುದ್ಧ ವ್ಯಕ್ತಿ ಎಂದು ಹೇಳುತ್ತೇನೆ. ಅವರ ಹೃದಯ ತುಂಬಾ ಪರಿಶುದ್ಧವಾಗಿದೆ. ಅವರು ಬೇರೆ ಯಾರೂ ಅಲ್ಲ ಯೋಗರಾಜ್ ಭಟ್ ಸಾರ್. ಆಗ ನಾನು ಸೀರಿಯಲ್ ಮಾಡುತ್ತಿದ್ದೆ, ಒಂದಷ್ಟು ಬರವಣೆಗೆಯೂ ಇತ್ತು.

ಅದನ್ನು ನೋಡಿದ ಯೋಗರಾಜ್ ಭಟ್, ನಿಮ್ಮಲ್ಲಿ ಆ ಶಕ್ತಿ ಇದೆ, ಆ ಸಾಮರ್ಥ್ಯ ಇದೆ. ಹೆಣ್ಮಕ್ಕಳು ನಿರ್ದೇಶನ ವಿಭಾಗದಲ್ಲಿ ತುಂಬಾ ಕಡಿಮೆ ಇದ್ದಾರೆ. ಬನ್ನಿ ಎಂದು ಪ್ರೋತ್ಸಾಹಿಸಿದರು. ಹೆಣ್ಣು ಮಕ್ಕಳು ಎಂದರೆ ಅವರಿಗೆ ತುಂಬಾ ಕಾಳಜಿ. ರಾತ್ರಿ ತಡವಾದರೆ ಅವರೇ ಬಂದು ಮನೆಗೆ ಡ್ರಾಪ್ ಮಾಡುತ್ತಿದ್ದರು.

ಒಮ್ಮೆ ರಾತ್ರಿ ಕಚೇರಿಯಿಂದ ರಾತ್ರಿ ನಾನೊಬ್ಬಳೇ ಹೋಗಬೇಕಾಗಿತ್ತು. ಆಗ ರಾತ್ರಿ ಸುಮಾರು 11 ಗಂಟೆಯಾಗಿತ್ತು. ಸ್ವಲ್ಪ ದೂರ ಹೋದ ಬಳಿಕ ಅವರೇ ನನ್ನ ಫಾಲೋ ಮಾಡಿಕೊಂಡು ಬಂದು ಮನೆತನಕ ಡ್ರಾಪ್ ನೀಡಿದ್ದರು.

ಸುಮಾರು ಕನ್ಫೂಶನ್ ಇತ್ತು, ಕನ್ಫೂಶನ್ ಈಸ್ ಹ್ಯಾಪಿನೆಸ್ ಎಂದು ಹೇಳಿ ನನ್ನೆಲ್ಲಾ ಗೊಂದಲಗಳಿಗೆ ತೆರೆ ಎಳೆದರು. ನನ್ನ ಬದುಕಿನ ವಿಶೇಷ ವ್ಯಕ್ತಿ ಎಂದಿದ್ದಾರೆ ಚೈತ್ರಾ ಕೋಟೂರ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ