ಆ್ಯಪ್ನಗರ

Episode 73 Highlights: ಬಿಗ್ ಬಾಸ್ ಮನೆಗೆ ಮಾರುವೇಷದಲ್ಲಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್!

ಇದೇ ಮೊದಲ ಬಾರಿಗೆ ಮಾರುವೇಷದಲ್ಲಿ ಬಂದು ಸದಸ್ಯರೊಂದಿಗೆ ಕಾಲ ಕಳೆದಿದ್ದಾರೆ. ಆದರೆ ಮನೆಯ ಸದಸ್ಯರಿಗೆ ಮಾತ್ರ ಜೋಕರ್ ಗೆಟಪ್‌ನಲ್ಲಿರುವವರು ಸುದೀಪ್ ಎಂಬುದು ಮಾತ್ರ ಗೊತ್ತಾಗಿಲ್ಲ. ಎಪ್ಪತ್ತ ಮೂರನೇ ದಿನ ಈ ಸಂಗತಿಯನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ತಿಳಿಸಲಿದ್ದು ಅಂದು ಮನೆಯ ಸದಸ್ಯರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗುವುದಂತೂ ಗ್ಯಾರಂಟಿ.

Vijaya Karnataka Web 24 Dec 2019, 11:30 pm

ಈ ಫೋಟೋದಲ್ಲಿರುವ ವ್ಯಕ್ತಿ ಯಾರು ಅಂತ ಊಹಿಸುವುದು ಕಷ್ಟ ಅಲ್ಲವೇ? ಹೌದು ಬಿಗ್ ಬಾಸ್ ಮನೆಯ ಸದಸ್ಯರಿಗೂ ಇವರು ಯಾರು ಎಂದು ಗೊತ್ತೇ ಆಗಲಿಲ್ಲ. ಊಹಿಸಲೂ ಆಗಲಿಲ್ಲ. ಎಲ್ಲರಂತೆ ಮನೆಯ ಒಳಗೆ ಬಂದಿರುವ ವ್ಯಕ್ತಿ ಇವರು ಎಂದು ಅವರ ಜೊತೆ ಆಡಿ ನಲಿದರು. ಆದರೆ ಅವರು ಸುದೀಪ್ ಎಂಬ ಸಂಗತಿ ಮಾತ್ರ ಯಾರಿಗೂ ಗೊತ್ತೇ ಆಗಲಿಲ್ಲ.
Vijaya Karnataka Web ಬಿಗ್ ಬಾಸ್ ಕನ್ನಡ 7


ಬಿಗ್ ಬಾಸ್ ಮನೆಗೆ ಮಾರುವೇಷದಲ್ಲಿ ಪ್ರವೇಶಿಸಿದ್ದ ಕಿಚ್ಚ ಸುದೀಪ್ ಕಿರುತೆರೆ ವೀಕ್ಷಕರಿಗೆ ಸರ್ಪೈಸ್ ನೀಡಿದರು. ಅವರನ್ನು ಮನೆಯ ಸದಸ್ಯರು ಕಂಡುಹಿಡಿಯಲು ಸಾಧ್ಯವಾಗಲೇ ಇಲ್ಲ. ಜೋಕರ್ ವೇಷದಲ್ಲಿ ಬಂದಿದ್ದ ಅವರೊಂದಿಗೆ ಆಡಿ ನಲಿದ ಸದಸ್ಯರಿಗೆ ಅವರು ಸುದೀಪ್ ಎಂಬುದು ಗೊತ್ತೇ ಆಗಲಿಲ್ಲ.

ಬಹಳ ಸಮಯದ ತನಕ ಮನೆಯ ಸದಸ್ಯರ ಜೊತೆಗೆ ಅವರು ಕಾಲ ಕಳೆದರು. ಬರೀ ಮೂಕಾಭಿನಯದ ಮೂಲಕ ಮನೆಯ ಸದಸ್ಯರ ಜೊತೆಗೆ ಸಂಭಾಷಿಸುತ್ತಾ, ಅವರನ್ನು ಆಗಾಗ ಕಾಡಿಸಿ, ಪೀಡಿಸುತ್ತಿದ್ದ ಅವರನ್ನು ಯಾರೂ ಗುರುತು ಹಿಡಿಯಲೇ ಇಲ್ಲ. ಆದರೆ ಬಿಗ್ ಬಾಸ್ ವೀಕ್ಷಕರಿಗೆ ಮಾತ್ರ ಈ ಎಪಿಸೋಡ್ ಸಖತ್ ಥ್ರಿಲ್ಲಿಂಗ್ ಆಗಿತ್ತು.

ಆಗಾಗ ಮನೆಯ ಸದಸ್ಯರ ಬಳಿ ಕಿಸ್ ಕೇಳಿತ್ತಾ, ಆಟ ಆಡಿಸುತ್ತಿದ್ದ ಜೋಕಲ್ ಗೆಟಪ್‌ನಲ್ಲಿದ್ದ ಸುದೀಪ್‌ಗೆ ಚುಂಬಿಸಲು ಕೆಲವರು ಹಿಂಜರಿದರೂ ಬಳಿಕ ಅವರೊಂದಿಗೆ ಹೆಚ್ಚು ಸಲುಗೆ ಬೆಳಸಿಕೊಂಡಿದ್ದರು. ಜಾತ್ರೆ ಸೆಟ್‌ನಲ್ಲಿರುವ ವ್ಯಕ್ತಿಗಳೊಂದಿಗೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ ಎಂಬ ಬಿಗ್ ಬಸ್ ಕಟ್ಟಾಜ್ಞೆಯನ್ನು ಯಾರೂ ಮೀರಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಹಿಂದೆ ಬಿದ್ದಿರುವ ಇಬ್ಬರು ಸ್ಪರ್ಧಿಗಳು

ಬಿಗ್ ಬಾಸ್ ಮನೆಗೆ ಸುದೀಪ್ ಈ ರೀತಿ ಎಂದೂ ಭೇಟಿ ನೀಡರಲಿಲ್ಲ. ಇದೇ ಮೊದಲ ಬಾರಿಗೆ ಮಾರುವೇಷದಲ್ಲಿ ಬಂದು ಸದಸ್ಯರೊಂದಿಗೆ ಕಾಲ ಕಳೆದಿದ್ದಾರೆ. ಆದರೆ ಮನೆಯ ಸದಸ್ಯರಿಗೆ ಮಾತ್ರ ಜೋಕರ್ ಗೆಟಪ್‌ನಲ್ಲಿರುವವರು ಸುದೀಪ್ ಎಂಬುದು ಮಾತ್ರ ಗೊತ್ತಾಗಿಲ್ಲ. ಎಪ್ಪತ್ತ ಮೂರನೇ ದಿನ ಈ ಸಂಗತಿಯನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ತಿಳಿಸಲಿದ್ದು ಅಂದು ಮನೆಯ ಸದಸ್ಯರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗುವುದಂತೂ ಗ್ಯಾರಂಟಿ.

ಮನೆಯ ಕ್ಯಾಪ್ಟನ್ ಆಗಿರುವ ಹರೀಶ್ ರಾಜ್ ಅವರು ಮೀಸೆ ಬೋಳಿಸಿಕೊಂಡು ಹೊಸ ಗೆಟಪ್‌ನಲ್ಲಿ ಗೋವಿಂದಪ್ಪನಾಗಿ ಟಾಸ್ಕ್‌ಗಳನ್ನು ನಿಭಾಯಿಸಲು ಮುಂದಾದರು. ಬಿಗ್ ಬಾಸ್ 'ಹಲೋ ಮಿಂಚಿನ ಓಟ' ಲಗ್ಜುರಿ ಟಾಸ್ಕ್ ನೀಡಿದ್ದಾರೆ. ಶೈನ್ ಶೆಟ್ಟಿ ತಂಡಕ್ಕೆ ಪಂಜಾ ಫ್ಯಾಕ್ಟರಿ ಎಂದೂ ಕಿಶನ್ ತಂಡಕ್ಕೆ ಪುಟಾಣಿ ಪಂಟ್ರು ಎಂದು ಹೆಸರಿಡಲಾಗಿತ್ತು. ತೆಂಗಿನಕಾಯಿ ಸಿಪ್ಪೆ ಸುಲಿದು ಲಾರಿಗೆ ಲೋಡ್ ಮಾಡುವ ಟಾಸ್ಕ್‌ನಲ್ಲಿ ಶೈನ್ ಶೆಟ್ಟಿನ ಪಂಜಾ ಫ್ಯಾಕ್ಟರಿ ಗೆದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ