ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಆರಂಭದಿಂದಲೂ ಸಖತ್ ಹೈಲೈಟ್ ಆಗಿರುವುದು ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ! ಎಲ್ಲರನ್ನೂ ನಗಿಸುತ್ತ ಮನೆ ತುಂಬ ಸಖತ್ ಆ್ಯಕ್ಟೀವ್ ಆಗಿರುವ ಸ್ಪರ್ಧಿ ಎಂದೇ ಮಂಜು ಹೆಸರಾಗಿದ್ದರು. ಆದರೆ ಅದ್ಯಾಕೋ ಈಚೆಗೆ ಒಂದಲ್ಲ ಒಂದು ವಿಚಾರಕ್ಕೆ ತಪ್ಪು ಮಾಡಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಮಂಜು. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ವಾರವಿಡೀ ಮಂಜು ಮಾಡಿದ ಮಿಸ್ಟೇಕ್ಗಳನ್ನು ಹೇಳಲಾಯ್ತು. ಅದರಲ್ಲೂ ಮಂಜು ಹೇಳಿದ ಒಂದು ಮಾತು ಸುದೀಪ್ ಕಣ್ಣು ಕೆಂಪಾಗಿಸಿತು! ಮಂಜು ಹೇಳಿದ್ದೇನು?
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಚಕ್ರವರ್ತಿ ಚಂದ್ರಚೂಡ್ ಎಂಟ್ರಿಯಾಗಿದೆ. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಪ್ರಶ್ನೆ ಮಾಡಿದರು. ಚಕ್ರವರ್ತಿ ಬಂದಿರುವುದರ ಬಗ್ಗೆ ಮನೆಯ ಸದಸ್ಯರ ಬಳಿ ಸುದೀಪ್ ಅಭಿಪ್ರಾಯ ಕೇಳಿದರು. ಈ ಮಧ್ಯೆ ಮಾತನಾಡಿದ ಮಂಜು, 'ಯಾರಾದ್ರೂ ಹುಡುಗಿ ಬರಬಹುದಾಗಿತ್ತಾ..' ಎಂದು ಹೇಳಿದರು. ಇದಕ್ಕೆ ಖಡಕ್ ಆಗಿಯೇ ಉತ್ತರ ಕೊಟ್ಟ ಸುದೀಪ್, 'ಹೇಗೆ ಕಾಣಿಸುತ್ತಿದೆ ನಿಮಗೆ ಬಿಗ್ ಬಾಸ್ ಮನೆ' ಎಂದು ತಿರುಗೇಟು ನೀಡಿದರು! ಮುಂದೆ ಸುದೀಪ್-ಮಂಜು ಮಾತುಕತೆ ಹೇಗಿತ್ತು? ನೀವೆ ಓದಿ.
ಮಂಜು: ಆ ರೀತಿ ಅಲ್ಲ, ಇಲ್ಲಿ ಬರೀ 5-6 ಹುಡುಗಿಯರೇ ಇದ್ರಲ್ವಾ? ಒಂದು ಹುಡುಗಿ, ಹೊರಗಡೆಯಿಂದ ಬಂದಿದ್ರೆ, ಇಲ್ಲಿ ಅಲ್ಲೋಲ ಕಲ್ಲೋಲ ಆಗೋದು ಅಂತ ಹೇಳಿದೆ.
ಸುದೀಪ್: ಅದನ್ನು ಹುಡುಗಿಯರೇ ಮಾತನಾಡಿಕೊಳ್ಳುತ್ತಾರೆ ಬಿಡಿ. ಅದುಬಿಟ್ಟು, ನಿಮ್ಮಾಸೆಯನ್ನು ಅವರ ಮೇಲೆ ಹೇಳೋದು...
ಮಂಜು: ಮನೆಯಲ್ಲಿ ಹೆಣ್ಮಕ್ಕಳು ಇದ್ದರೆ, ಓಡಾಡಿಕೊಂಡು ಚೆನ್ನಾಗಿರ್ತಾರೆ.. ನೋಡೋಕೆ ಚೆನ್ನಾಗಿರುತ್ತದೆ ಅಂತ ಸಾರ್...
ಸುದೀಪ್: ಮನೆಯಲ್ಲಿರುವ ಇಷ್ಟು ಜನರಲ್ಲಿ ಯಾರು ಓಡಾಡಿಕೊಂಡು ಇದ್ದರೆ ನಿಮಗೆ ತುಂಬ ಖುಷಿಯಾಗುತ್ತದೆ?
ಮಂಜು: ದಿವ್ಯಾ ಸುರೇಶ್!
ಸುದೀಪ್: ಇದ್ದಾರಲ್ಲ ಬಿಡಿ ಒಬ್ಬರು..
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ 'ಉಡಾಫೆ ವರ್ತನೆ' ಬಗ್ಗೆ 'ಕಿಚ್ಚ' ಸುದೀಪ್ ಖಡಕ್ ಮಾತು!
ಕ್ಯಾಪ್ಟನ್ ಆಗಿ ತಪ್ಪು ಮಾಡಿದ್ದ ಮಂಜು!
ಮಂಜು ಪಾವಗಡ ಈಗ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಈಚೆಗೆ ಮಧ್ಯರಾತ್ರಿಯಲ್ಲಿ ಕ್ಯಾಪ್ಟನ್ಗಾಗಿ ನೀಡಿರುವ ವಿಶೇಷ ಕೋಣೆಯಲ್ಲಿ ದಿವ್ಯಾ ಸುರೇಶ್, ವಿಶ್ವನಾಥ್, ಶುಭಾ, ದಿವ್ಯಾ ಉರುಡುಗ ಜೊತೆಗೆ ಜೋರಾಗಿ ಮಂಜು ಮಾತನಾಡುತ್ತಿದ್ದರು. ಇದರಿಂದ ಚಕ್ರವರ್ತಿ ಮತ್ತು ಅರವಿಂದ್ ನಿದ್ದೆಗೆ ತೊಂದರೆಯಾಯಿತು. ಹಾಗಾಗಿ, ಅವರು ಹೊರಗಡೆ ಸೋಫಾದ ಮೇಲೆ ಹೋಗಿ ಮಲಗಿದ್ದರು. ಈ ಬಗ್ಗೆ ಪ್ರಸ್ತಾಪಿಸಿದ ಸುದೀಪ್, 'ನಿಮ್ಮ ಮಾತುಗಳಿಂದ ತೊಂದರೆ ಅನುಭವಿಸಿದ ಅರವಿಂದ್ ಮತ್ತು ಚಕ್ರವರ್ತಿ ಹೊರಗಡೆ ಸೋಫಾದ ಮೇಲೆ ಮಲಗುತ್ತಾರೆ. ಕ್ಯಾಪ್ಟನ್ ಆಗಿರುವ ನಿಮ್ಮ ಗಮನಕ್ಕೆ ಇದು ಬರುತ್ತದೆ. ಆಗ ನೀವು ತೋರಿದ ವರ್ತನೆಯನ್ನು ಕನ್ನಡದಲ್ಲಿ ಉಡಾಫೆ ಅಂತಾರೆ. ನೀವು ಉಡಾಫೆಯಲ್ಲಿ, 'ಮಲ್ಕೊಂಡರೆ ಮಲ್ಕೋತಾರೆ ಬಿಡು..' ಅಂತೀರಿ.. ನೀವೊಬ್ಬ ಸ್ಪರ್ಧಿಯಾಗಿ ಈ ಮಾತು ಹೇಳುವ ಅಧಿಕಾರ ನಿಮಗೆ ಇದೆ ಮಂಜು, ಆದರೆ, ಒಬ್ಬ ನಾಯಕನಾಗಿ ಅಲ್ಲ! ಆ ಮನೆಯನ್ನು ನಿಭಾಯಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಅಂದಾಗ, ನೀವು ಹೇಳಿದ ಮಾತು ಉಡಾಫೆಯ ಮಾತಾಗುತ್ತದೆ' ಎಂದು ಸುದೀಪ್ ಎಚ್ಚರಿಕೆ ನೀಡಿದರು.
ಈ ವಾರ ಮನೆಯಿಂದ ಯಾರೂ ಔಟ್ ಆಗಲ್ಲ! ಸ್ಪರ್ಧಿಗಳಿಗೆ ಸುಮ್ನೆ ಟೆನ್ಷನ್ ಕೊಟ್ರಾ 'ಬಿಗ್ ಬಾಸ್'?