ಆ್ಯಪ್ನಗರ

ಬಿಗ್ ಬಾಸ್ ಮನೆಗೆ ವಯಸ್ಸಾಗಿರೋರು ಹೋಗೋದು ತಪ್ಪಾ? ಮುದುಕರಾಗೋದು ಅಪರಾಧವೇ?

ಬಿಗ್ ಬಾಸ್ ಶೋನಲ್ಲಿ ಹೊಸ ವರಸೆ ಶುರು ಆಗಿದೆ. ಸ್ಪರ್ಧಿಗಳು ಜಗಳ ಆಡುವಾಗ, ಸಿಟ್ಟು ಮಾಡಿಕೊಂಡಾಗ, ಗಾಸಿಪ್ ಮಾಡುವಾಗಲೆಲ್ಲ ವಯಸ್ಸನ್ನು ನಮೂದಿಸಲು ಆರಂಭಿಸಿದ್ದಾರೆ. ವಯಸ್ಸಾಗಿದೆ ಎಂಬುದನ್ನೇ ಇಟ್ಟುಕೊಂಡು ಸ್ಪರ್ಧಿಗಳು ಜಗಳ ಆಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ.

Vijaya Karnataka Web 20 Oct 2021, 12:21 pm

ಹೈಲೈಟ್ಸ್‌:


  • ಬಿಗ್ ಬಾಸ್ ಶೋನಲ್ಲಿ ವಯಸ್ಸಿನ ಕುರಿತು ಚರ್ಚೆ
  • ಅಫ್ಸಾನಾರನ್ನು ತರಾಟೆಗೆ ತೆಗೆದುಕೊಂಡ ಸಲ್ಮಾನ್ ಖಾನ್
  • ಸಿದ್ದಾರ್ಥ್ ಶುಕ್ಲಾ ವಯಸ್ಸನ್ನೂ ಹಂಗಿಸಲಾಗಿತ್ತು
  • ರಾಖಿ ಸಾವಂತ್‌ಗೆ ಅತ್ತೆ ಎನ್ನಲಾಗಿತ್ತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bigg boss
ಬಿಗ್ ಬಾಸ್ ಶೋನಲ್ಲಿ ವಿವಿಧ ರಂಗದ ವಿಭಿನ್ನ ವ್ಯಕ್ತಿತ್ವವಿರುವ ಸ್ಪರ್ಧಿಗಳು ಭಾಗವಹಿಸುತ್ತಾರೆ. ಅದೇ ಬಿಗ್ ಬಾಸ್ ಆಟ. ಹೀಗಿರುವಾಗ ವಯಸ್ಸಾಗಿರೋರು (Age Shaming) ಬಿಗ್ ಬಾಸ್ ಮನೆಗೆ ಬರೋದು ತಪ್ಪಾ? ಈ ಹಿಂದೆ ಹಿಂದಿಯ 'ಬಿಗ್ ಬಾಸ್ 13'ರಲ್ಲಿ ಸಿದ್ದಾರ್ಥ್ ಶುಕ್ಲಾಗೆ 40 ವರ್ಷ ಆಗಿದೆ ಅಂತ ಪದೇ ಪದೇ ಹಂಗಿಸಲಾಗಿತ್ತು. ಜಗಳ ಆಗುವಾಗಲೆಲ್ಲ ಸಿದ್ದಾರ್ಥ್ ಶುಕ್ಲಾಗೆ ವಯಸ್ಸಾಗಿದೆ ಅಂತಲೇ ಹೇಳಲಾಗುತ್ತಿತ್ತು. ಈಗ ಮತ್ತೆ ಬಿಗ್ ಬಾಸ್ 15ರಲ್ಲಿಯೂ ಅದೇ ಪದ್ಧತಿ ಮುಂದುವರಿದಿದೆ.
ಬೇಸರ ಹೊರಹಾಕಿದ್ದ ಸಿದ್ದಾರ್ಥ್ ಶುಕ್ಲಾ
ಬಿಗ್ ಬಾಸ್ ಮನೆಯಲ್ಲಿದ್ದಾಗ ಎಲ್ಲರೂ ವಯಸ್ಸಾಗಿದೆ ಅಂತ ಹೇಳಿದ್ದಕ್ಕೆ ಬೇಸರ ಮಾಡಿಕೊಂಡಿದ್ದ ಸಿದ್ದಾರ್ಥ್ ಶುಕ್ಲಾ ಅವರು "ನನಗೆ ವಯಸ್ಸಾಗಿದೆ, ನಿಮಗಿಂತ ನಾನು ಹಿರಿಯವನು. ನಿಮಗೂ ಕೂಡ ಕೆಲ ವರ್ಷಗಳ ನಂತರ ನನಗೆ ಈಗ ಆಗಿರುವಷ್ಟು ವಯಸ್ಸಾಗುತ್ತದೆ ಎಂಬುದನ್ನು ಮರೆಯಬೇಡಿ" ಎಂದು ಸಹಸ್ಪರ್ಧಿಗಳಿಗೆ ಬೇಸರದಿಂದ ಹೇಳಿದ್ದರು.

ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ರೊಮ್ಯಾನ್ಸ್; ಕ್ಲಾಸ್ ತೆಗೆದುಕೊಂಡ ನಟ ಸಲ್ಮಾನ್ ಖಾನ್

ತರಾಟೆಗೆ ತೆಗೆದುಕೊಂಡ ಸಲ್ಮಾನ್ ಖಾನ್
ನಟಿ ಶಮಿತಾ ಶೆಟ್ಟಿಗೆ ದೊಡ್ಮನೆಯಲ್ಲಿ ಕರಣ್ ಕುಂದ್ರಾ ಅವರು ಆಂಟಿ ಅಂತ ಕರೆದಿದ್ದರು. ಬಿಗ್ ಬಾಸ್ ಓಟಿಟಿಯಲ್ಲಿಯೂ ಕೂಡ ಶಮಿತಾ ಶೆಟ್ಟಿಗೆ ಆಂಟಿ ಎಂದು ಕರೆಯಲಾಗಿತ್ತು. ಬಿಗ್ ಬಾಸ್ 14ರಲ್ಲಿ ಅಲಿ ಗೋನಿ ಅವರು ರಾಖಿ ಸಾವಂತ್‌ಗೆ ಅತ್ತೆ ಅಂತ ಕರೆದಿದ್ದರು. ಅಫ್ಸಾನಾ ಎಂಬುವವರು ಶಮಿತಾಗೆ ಬುಡ್ಡಿ ಅಂತ ಕರೆದಿದ್ದಾರೆ. ಅಫ್ಸಾನಾ ಅವರನ್ನು ವೀಕೆಂಡ್ ಎಪಿಸೋಡ್‌ನಲ್ಲಿ ನಟ ಸಲ್ಮಾನ್ ಖಾನ್ ತರಾಟೆಗೆ ತೆಗೆದುಕೊಂಡಿದ್ದು, ನನಗೂ ಕೂಡ ವಯಸ್ಸಾಗಿದೆ ಎಂದಿದ್ದಾರೆ. ಕೆಟ್ಟ ಮಹಿಳೆ, ಕ್ಯಾರ್‌ಕ್ಟರ್ ಲೆಸ್ ಎಂಬ ಮಾತುಗಳು ಬಿಗ್ ಬಾಸ್‌ ಶೋನ ಪ್ರತಿ ಸೀಸನ್‌ಲ್ಲಿಯೂ ಕೂಡ ಕೇಳಬಹುದು.

ಗಂಟೆಗೆ 200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ ಬಿಗ್ ಬಾಸ್ ಕೆಪಿ ಅರವಿಂದ್, ದಿವ್ಯಾ ಉರುಡುಗ

ರಾಖಿ ಸಾವಂತ್‌ಗೆ ಅತ್ತೆ ಎನ್ನಲಾಗಿತ್ತು
ರಾಖಿ ಸಾವಂತ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಬಿಗ್ ಬಾಸ್ ಮನೆಯಲ್ಲಿದ್ದಾಗ ಅಲಿ ಗೋನಿ ಅವರು ನನ್ನನ್ನು ಅತ್ತೆ ಅಂತ ಕರೆದರು. ಆಗ ನಾನು ಚಿಂತಾಕ್ರಾಂತಳಾಗದೆ ಅವನಿಗೆ ಟಿಆರ್‌ಪಿ ಗಳಿಸಲು ಬಿಡಲಿಲ್ಲ. ನಿನಗೂ ಕೂಡ ಅಕ್ಕ ಇದ್ದಾಳೆ ಅಂತ ಅವನಿಗೆ ಹೇಳಿದೆ, ಅಲಿ ಗೋನಿ ಅವರ ತಾಯಿ-ಅಕ್ಕನಿಗೆ ಬುಡ್ಡಿ ಅಂತ ಕರೆಯುತ್ತಾರಾ?" ಎಂದಿದ್ದಾರೆ.

ಮುದುಕ ಯಾವ ವಯಸ್ಸಿನ ಮಹಿಳೆಯನ್ನೂ ಮದುವೆಯಾಗಬಹುದು: ರಾಖಿ ಸಾವಂತ್
"ನಾವೆಲ್ಲರೂ ತೆರಿಗೆ ಕಟ್ಟುತ್ತೇವೆ. ಆದರೆ ಮಹಿಳೆಯನ್ನು ಮಾತ್ರ ಬುಡ್ಡಿ ಅಂತ ಕರೆದು ನಿರ್ಧಾರಕ್ಕೆ ಬರುತ್ತೇವೆ. ಮುದುಕ ಯಾವ ವಯಸ್ಸಿನ ಮಹಿಳೆಯನ್ನು ಬೇಕಾದರೂ ಮದುವೆ ಆಗಬಹುದು. ಆದರೆ ಮಹಿಳೆ ಮಾತ್ರ ಹಾಗೆ ಮಾಡೋಕೆ ಆಗಲ್ಲ. ಮಹಿಳೆಗಿಂತ ಪತಿ ವಯಸ್ಸು ಕಡಿಮೆ ಆಗಿದ್ದರೆ ಜನರು ಕಾಮೆಂಟ್ ಮಾಡಲು ಆರಂಭಿಸುತ್ತಾರೆ. ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿಷಯದಲ್ಲಿಯೂ ಹೀಗೆ ಆಯ್ತು. ನನ್ನ ಪ್ರಕಾರ ವಯಸ್ಸು ಕೇವಲ ನಂಬರ್ ಮಾತ್ರ" ಎಂದು ರಾಖಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ