'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮದಲ್ಲಿ ಬೈಕ್ ರೇಸರ್ ಅರವಿಂದ್ ಹಾಗೂ ದಿವ್ಯಾ ಉರುಡುಗ ವೀಕ್ಷಕರ ಕಣ್ಣು ಕುಕ್ಕುತ್ತಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆದಿದೆ ಅಂತಲೇ ಇತರೆ ಸ್ಪರ್ಧಿಗಳು ಭಾವಿಸಿದ್ದಾರೆ. ಹೀಗಿರುವಾಗಲೇ, ತಮ್ಮ ತಂದೆ ಕೊಟ್ಟಿದ್ದ ಉಂಗುರವನ್ನು ಅರವಿಂದ್ಗೆ ನೀಡಿ ದಿವ್ಯಾ ಉರುಡುಗ ಎಲ್ಲರ ಹುಬ್ಬೇರಿಸಿದ್ದರು. ಇದೀಗ ದಿವ್ಯಾ ಉರುಡುಗಗೆ ಅರವಿಂದ್ ಪ್ರೇಮ ಪತ್ರ ಬರೆದಿದ್ದಾರೆ. 'ಬಿಗ್ ಬಾಸ್' ಕೊಟ್ಟಿದ್ದಾರೆ ಸ್ಪೆಷಲ್ ಟಾಸ್ಕ್
'ಬಿಗ್ ಬಾಸ್' ಮನೆಯಲ್ಲಿ ಈ ವಾರ ಹಾಸ್ಟೆಲ್ ಟಾಸ್ಕ್ ಚಾಲ್ತಿಯಲ್ಲಿದೆ. ಇದರ ಅನುಸಾರ, 'ಬಿಗ್ ಬಾಸ್' ಮನೆ ಬಾಯ್ಸ್ ಹಾಸ್ಟೆಲ್ ಹಾಗೂ ಗರ್ಲ್ಸ್ ಹಾಸ್ಟೆಲ್ ಎಂದು ಡಿವೈಡ್ ಆಗಿದೆ. ಈ ಟಾಸ್ಕ್ನಲ್ಲಿ ಗೆದ್ದು ಕ್ಯಾಪ್ಟನ್ಸಿ ಕಂಟೆಂಡರ್ ಆಗಬೇಕು ಅಂದ್ರೆ ಮಹಿಳಾ ಸ್ಪರ್ಧಿಗಳಿಗೆ ಪುರುಷ ಸ್ಪರ್ಧಿಗಳು ಪ್ರೇಮ ಪತ್ರ ಬರೆಯಬೇಕು. ಚಟುವಟಿಕೆಯ ಅಂತ್ಯದಲ್ಲಿ ಅತಿ ಹೆಚ್ಚು ಪ್ರೇಮ ಪತ್ರ ಬರೆದವರು, ಅತಿ ಹೆಚ್ಚು ಪ್ರೇಮ ಪತ್ರವನ್ನು ಪಡೆದು ಕಾಪಾಡಿಕೊಂಡವರು, ಅತಿ ಹೆಚ್ಚು ಪ್ರೇಮ ಪತ್ರಗಳನ್ನು ವಶಕ್ಕೆ ಪಡೆದ ವಾರ್ಡನ್ ಕ್ಯಾಪ್ಟನ್ ರೇಸ್ಗೆ ಆಯ್ಕೆ ಆಗುತ್ತಾರೆ. ಈ ಟಾಸ್ಕ್ ಅನ್ವಯ ದಿವ್ಯಾ ಉರುಡುಗಗೆ ಅರವಿಂದ್ ಪ್ರೇಮ ಪತ್ರ ಬರೆದಿದ್ದಾರೆ.
ಎಲ್ಲಾ ಪ್ರೇಮ ಪತ್ರಗಳೂ ದಿವ್ಯಾ ಉರುಡುಗಗೆ!
ಚಟುವಟಿಕೆ ಅನ್ವಯ ಪುರುಷ ಸ್ಪರ್ಧಿಗಳು ಯಾವ ಮಹಿಳಾ ಸ್ಪರ್ಧಿಗಾದರೂ ಪ್ರೇಮ ಪತ್ರ ಬರೆಯಬಹುದಿತ್ತು. ಆದರೆ, ಅರವಿಂದ್.. ದಿವ್ಯಾ ಉರುಡುಗಗೆ ಮಾತ್ರ ಪ್ರೇಮ ಪತ್ರಗಳನ್ನು ಬರೆದಿದ್ದಾರೆ. ಬೇರೆ ಯಾರಿಗೂ ಅರವಿಂದ್ ಪತ್ರ ನೀಡಿಲ್ಲ.
ಖುಷಿ ಪಟ್ಟ ದಿವ್ಯಾ ಉರುಡುಗ
''ನೀವು ನನಗೆ ಮಾಡುತ್ತಿರುವ ಚಿಕ್ಕ ಚಿಕ್ಕ ವಿಷಯಗಳು ತುಂಬಾ ದೊಡ್ಡದು. ಇದರಲ್ಲಿ ನನಗೆ ಸಿಗುತ್ತಿರುವ ಇಂಪಾರ್ಟೆನ್ಸ್ ಬಗ್ಗೆ ತುಂಬಾ ಫೀಲ್ ಆಗುತ್ತೆ'' ಎಂದು ಅರವಿಂದ್ ಬಳಿ ದಿವ್ಯಾ ಉರುಡುಗ ಹೇಳಿದ್ದಾರೆ. ಬಳಿಕ ''ಬೇರೆಯವರಿಗೆ ಯಾಕೆ ಬರೆದಿಲ್ಲ?'' ಎಂದು ಅರವಿಂದ್ರನ್ನು ದಿವ್ಯಾ ಉರುಡುಗ ಪ್ರಶ್ನಿಸಿದರು. ಆಗ, ''ಬೇರೆಯವರಿಗೆ ಬರೆಯೋಕೆ ಟೈಮ್ ಸಿಕ್ಕಿಲ್ಲ. ಅದು ನ್ಯಾಚುರಲ್ ಆಗಿ ಬರಲ್ಲ. ಬೇರೆಯವರಿಗೆಲ್ಲ ಸುಮ್ಮನೆ ಬರೀಬೇಕು ಅಂತ ಬರೀಬೇಕು ಅಷ್ಟೇ'' ಎಂದು ಅರವಿಂದ್ ಹೇಳಿದ್ದಾರೆ. ಅಲ್ಲಿಗೆ, ಟಾಸ್ಕ್ ಒಂದು ನೆಪವಾಗಿದ್ದರೂ.. ತಮ್ಮ ಮನಸ್ಸಿನ ಮಾತುಗಳನ್ನು ದಿವ್ಯಾ ಉರುಡುಗಗೆ ಪತ್ರಗಳ ಮುಖಾಂತರ ಅರವಿಂದ್ ಹೇಳಿದ್ದಾರೆ ಅಂತಲೇ ಅರ್ಥ ಅಲ್ಲವೇ?
ನಿನ್ನ ಕೈ ಹಿಡಿದುಕೊಳ್ಳಲಾ..?
ಇನ್ನೂ ಟಾಸ್ಕ್ ಚಾಲ್ತಿಯಲ್ಲಿ ಇರುವಾಗಲೇ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಧ್ಯೆ ರೊಮ್ಯಾಂಟಿಕ್ ಮಾತುಕತೆ ನಡೆದಿದೆ. ''ನೀನೆಂದ್ರೆ ನನಗೆ ಇಷ್ಟ, ನಿನ್ನ ಕೈ ಹಿಡಿದುಕೊಳ್ಳಲಾ.. ನಿನ್ನ ಕೈ ಕ್ಯೂಟ್ ಆಗಿದೆ..'' ಅಂತೆಲ್ಲಾ ದಿವ್ಯಾ ಉರುಡುಗಗೆ ಅರವಿಂದ್ ಹೇಳಿದ್ದಾರೆ. ''ಇದು ನೀವು ಕ್ಯಾರೆಕ್ಟರ್ ನಲ್ಲಿ ಹೇಳಿದ್ರಾ?'' ಅಂತ ದಿವ್ಯಾ ಉರುಡುಗ ಪ್ರಶ್ನೆ ಮಾಡಿದಾಗ, ''ಕ್ಯಾರೆಕ್ಟರ್ನಲ್ಲಿ ಇರ್ಲಿಲ್ಲ. ರಿಯಲ್ಆಗೇ ಹೇಳಿದೆ'' ಎಂದು ಅರವಿಂದ್ ಸ್ಪಷ್ಟ ಪಡಿಸಿದ್ದಾರೆ.