'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಶ್ಲೀಲ ಸನ್ನೆ ತೋರಿಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿ 'ಬಿಗ್ ಬಾಸ್' ಮನೆಯಿಂದ ಆಚೆ ಹೋಗುವಾಗ ಚಕ್ರವರ್ತಿ ಚಂದ್ರಚೂಡ್ರನ್ನ ನೇರವಾಗಿ ನಾಮಿನೇಟ್ ಮಾಡಿದ್ದರು. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಅಶ್ಲೀಲ ಸನ್ನೆ ತೋರಿಸಿದ್ದರು. ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ ಚಂದ್ರಚೂಡ್ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಅರವಿಂದ್ರವರ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಟದ ವೇಳೆ ಅರವಿಂದ್ ಕೂಡ ಅಶ್ಲೀಲ ಸನ್ನೆ ತೋರಿಸಿದ್ದಾರೆ ಎಂದು ಕೆಲ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ವಾದಕ್ಕಿಳಿದರು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ವಿಡಿಯೋ 'ಬಿಗ್ ಬಾಸ್' ಸಂಚಿಕೆಯಲ್ಲಿ ಪ್ರಸಾರ ಆಗಿರಲಿಲ್ಲ.
ಹಾಗಾದ್ರೆ, 'ಬಿಗ್ ಬಾಸ್' ಮನೆಯಲ್ಲಿ ಆಟದ ವೇಳೆ ಅರವಿಂದ್ ಅಶ್ಲೀಲ ಸನ್ನೆ ತೋರಿಸಿದ್ದು ನಿಜವೇ? ಈ ಬಗ್ಗೆ ರಿಯಾಲಿಟಿ ಶೋ ಡೈರೆಕ್ಟರ್ ಜಯದೇವ್ ಕಪ್ಪಣ್ಣ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಜಯದೇವ್ ಕಪ್ಪಣ್ಣ ಹೇಳಿರುವುದೇನು?
''ಸನ್ನಿವೇಶಗಳು ಮತ್ತು ಸಂದರ್ಭಗಳು ಬೇರೆ ಬೇರೆ ಇತ್ತು. ಎವಿಕ್ಷನ್ ನಡೆಯುವ ಟೈಮ್ನಲ್ಲಿ ಕ್ಯಾಮರಾಗಳ ಮುಂದೆ ಚಕ್ರವರ್ತಿ ಸನ್ನೆ ತೋರಿಸಿದರು. ಆದರೆ, ಆಟ ನಡೆಯುವಾಗ ಎಲ್ಲೋ ಒಂದು ಕಡೆ ಅರವಿಂದ್ ಕೈ ಹಾಗೆ ಬಂದಿರುವುದಕ್ಕೆ ಟ್ರೋಲ್ ಮಾಡುತ್ತಿದ್ದಾರೆ. ಅದರ ಸಂದರ್ಭವೇ ಬೇರೆ, ಸನ್ನಿವೇಶವೇ ಬೇರೆ. ಅದು ಎಪಿಸೋಡ್ನಲ್ಲೂ ಬಂದಿಲ್ಲ. ವೂಟ್ ಲೈವ್ನಲ್ಲಿ ಬಂದಿತ್ತು ಅಷ್ಟೇ. ಅವರು ಏನು ಮಾಡ್ತಾರೆ ಅಂತಲೂ ಗೊತ್ತಾಗುವುದಿಲ್ಲ, ಕೈ ಎತ್ತಿದ್ದಾರೆ. ಆದರೆ, ಚಕ್ರವರ್ತಿಯದ್ದು ಸೋಫಾ ಮೇಲೆ ಕೂತುಕೊಂಡು ನಡೆದಂತಹ ವಿಷಯ. ಎರಡೂ ಬೇರೆ ಬೇರೆ ವಿಷಯಗಳು''
''ಟ್ರೋಲ್ ಆಗಿರುವ ಅರವಿಂದ್ ವಿಡಿಯೋ ವೈಡ್ ಆಂಗಲ್ನಲ್ಲಿದೆ. ಬಾಲ್ ಹಿಡಿದ ಮೇಲೆ ಕೈ ಏನೋ ಮಾಡ್ತಾರೆ. ಅದು ಕ್ಲಾರಿಟಿನೂ ಇಲ್ಲ ನಮಗೆ. ಆ ಶಾಟ್ ಸಿಕ್ಕಿಲ್ಲ ನಮಗೆ. ನಾವು ಯಾರನ್ನೋ ಟಾರ್ಗೆಟ್ ಮಾಡ್ತಿದ್ದೀವಿ ಅನ್ನೋದು ಸುಳ್ಳು. ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಚಕ್ರವರ್ತಿ ಕ್ಷಮೆ ಕೇಳಿದ್ದನ್ನೂ ನಾವು ತೋರಿಸಿದ್ದೀವಿ'' ಎಂದು ರಿಯಾಲಿಟಿ ಶೋ ಡೈರೆಕ್ಟರ್ ಜಯದೇವ್ ಕಪ್ಪಣ್ಣ ಹೇಳಿದ್ದಾರೆ.
ಡೇಂಜರ್ ಝೋನ್ನಲ್ಲಿ ಏಳು ಮಂದಿ
ಈ ವಾರ ಡೇಂಜರ್ ಝೋನ್ನಲ್ಲಿ ಅರವಿಂದ್, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್, ಶುಭಾ ಪೂಂಜಾ ಹಾಗೂ ವೈಷ್ಣವಿ ಇದ್ದಾರೆ. ಏಳು ಮಂದಿ ಪೈಕಿ ಈ ವಾರಾಂತ್ಯದಲ್ಲಿ ಯಾರು ಔಟ್ ಆಗ್ತಾರೋ, ಕಾದುನೋಡೋಣ.