ಆ್ಯಪ್ನಗರ

ಶುರುವಾಯ್ತು 'ಬಿಗ್ ಬಾಸ್' ಮನೆಯಲ್ಲಿ ಜಗಳ: ನಿರ್ಮಲಾ-ಚಂದ್ರಕಲಾ ಮಧ್ಯೆ ಬೆಂಕಿ ಧಗಧಗ.!

ಅಂತೂ 'ಬಿಗ್ ಬಾಸ್' ಮನೆಯಲ್ಲಿ ಮೊದಲ ಜಗಳ ನಡೆದೇಬಿಟ್ಟಿದೆ. ಇಷ್ಟು ದಿವಸ ಶಾಂತವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಈಗ ಬೆಂಕಿ ಹೊತ್ತಿಕೊಂಡಿದೆ.

Vijaya Karnataka Web 6 Mar 2021, 10:44 am

ಹೈಲೈಟ್ಸ್‌:

  • ಮೊದಲ ಜಡೆ ಜಗಳಕ್ಕೆ ಸಾಕ್ಷಿಯಾದ ಈ ಬಾರಿಯ 'ಬಿಗ್ ಬಾಸ್' ಮನೆ
  • ಚಂದ್ರಕಲಾ ಮೋಹನ್ ಮತ್ತು ನಿರ್ಮಲಾ ನಡುವೆ ವಾಕ್ಸಮರ
  • ಅಡುಗೆ ಮನೆ ವಿಚಾರಕ್ಕೆ ಇಬ್ಬರ ಮಧ್ಯೆ ಹೊತ್ತಿಕೊಂಡ ಬೆಂಕಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bigg boss kannada 8 fight between nirmala and chandrakala mohan
ಶುರುವಾಯ್ತು 'ಬಿಗ್ ಬಾಸ್' ಮನೆಯಲ್ಲಿ ಜಗಳ: ನಿರ್ಮಲಾ-ಚಂದ್ರಕಲಾ ಮಧ್ಯೆ ಬೆಂಕಿ ಧಗಧಗ.!
'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮ ಆರಂಭವಾಗಿ ಹತ್ತತ್ರ ವಾರ ಆಗುತ್ತಾ ಬಂತು. ಇಷ್ಟು ದಿನ 'ಬಿಗ್ ಬಾಸ್' ಮನೆ ಬಹುತೇಕ ಶಾಂತವಾಗಿತ್ತು. ಮಂಜು ಪಾವಗಡ ಕಾಮಿಡಿ ಟೈಮಿಂಗ್ ನಿಂದ ಎಲ್ಲರೂ ಕಿಲಕಿಲ ಅಂತ ನಗುತ್ತಿದ್ದರು. ಕೆಲವೊಂದು ವಿಚಾರಗಳಲ್ಲಿ ಕೆಲ ಸ್ಪರ್ಧಿಗಳ ನಡುವೆ ಅಸಮಾಧಾನ ಇದ್ದರೂ, ಈವರೆಗೂ ವಾಕ್ಸಮರ ನಡೆದಿರಲಿಲ್ಲ. ವಾಗ್ವಾದ, ವಾಗ್ಯುದ್ದ ಜರುಗಿರಲಿಲ್ಲ. ಆದ್ರೀಗ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಜಗಳ ನಡೆದೇ ಹೋಗಿದೆ.
'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮನೆ ವಿಚಾರಕ್ಕೆ ಜಡೆ ಜಗಳ ನಡೆದಿದೆ. 'ಅಜ್ಜಮ್ಮ' ಖ್ಯಾತಿಯ ಚಂದ್ರಕಲಾ ಮೋಹನ್ ಹಾಗೂ ನಿರ್ಮಲಾ ನಡುವೆ ಮಾತಿನ ಯುದ್ಧ ಸಂಭವಿಸಿದೆ.

ಕಿರಿಕಿರಿಗೊಂಡಿದ್ದ ಚಂದ್ರಕಲಾ
ಮೊದಲೇ ನಿರ್ಮಲಾ ಬಗ್ಗೆ ಚಂದ್ರಕಲಾ ಕಿರಿಕಿರಿಗೊಂಡಿದ್ದರು. ''ಎಲ್ಲರೂ ಅವಳ (ನಿರ್ಮಲಾ) ಮೇಲೆ ಫೋಕಸ್ ಮಾಡಬೇಕು ಅನ್ನೋದು ಅವಳ ಇನ್ಟೆನ್ಷನ್. ಅದು ನನಗೆ ಇರಿಟೇಟ್ ಆಗ್ತಿದೆ. ನಾವು ಒಬ್ಬರ ಬಗ್ಗೆ ಜಾಸ್ತಿ ಕಾನ್ಸನ್ಟ್ರೇಟ್ ಮಾಡಿದಷ್ಟು ಹೈಪ್ ಆಗುತ್ತಾರೆ'' ಅಂತ ಚಂದ್ರಕಲಾ ಇತ್ತೀಚೆಗಷ್ಟೇ ಹೇಳಿದ್ದರು. ಈಗ ನೋಡಿದರೆ, ಅದೇ ಚಂದ್ರಕಲಾ ಮತ್ತು ನಿರ್ಮಲಾ ನಡುವೆ ಕಿತ್ತಾಟ ನಡೆದಿದೆ.

ಜಗಳ ಯಾಕೆ.?
ಚಂದ್ರಕಲಾ ಮೋಹನ್ ಮತ್ತು ನಿರ್ಮಲಾ ನಡುವೆ ಜಗಳ ನಡೆಯಲು ಅಸಲಿ ಕಾರಣ ಏನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಅಡುಗೆ ಮನೆಯ ಜವಾಬ್ದಾರಿ ವಿಷಯವಾಗಿ ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಇದು ಸ್ಪಷ್ಟವಾಗಿದೆ.

ನಿರ್ಮಲಾ ಗೇಮ್ ಪ್ಲಾನ್ ನ ಬಯಲು ಮಾಡಿಬಿಟ್ರಾ ಚಂದ್ರಕಲಾ.?
ಪ್ರೋಮೋದಲ್ಲಿ ಏನಿದೆ.?
''ಅಡುಗೆ ಮನೆ ಡಿಪಾರ್ಟ್ಮೆಂಟ್ ಮೂರು ಜನ ವಹಿಸಿಕೊಂಡಿದ್ದೇವೆ. ನಿನ್ನ ಪಾಡಿಗೆ ನೀನು ಬರ್ತೀಯಾ, ಏನೋ ಹೇಳ್ತೀಯಾ, ಎಲ್ಲೋ ಕೂತುಕೊಳ್ತೀಯಾ'' ಅಂತ ನಿರ್ಮಲಾಗೆ ಚಂದ್ರಕಲಾ ಹೇಳುತ್ತಾರೆ. ''ಇವತ್ತು ನಂದು ಸಾರಿ'' ಅಂತ ನಿರ್ಮಲಾ ಹೇಳಿದಾಗ, ''ಇವತ್ತಲ್ಲ, ಮೂರು ದಿನ ಆಯ್ತು'' ಅಂತ ಹೇಳಿ ಚಂದ್ರಕಲಾ ಮೋಹನ್ ಬೇಸರಗೊಳ್ಳುತ್ತಾರೆ. ಆಗ ''ಕೆಲಸ ಮಾಡೋಕೆ ಬರದೆ ಬಿಟ್ಟಿದ್ದಲ್ಲ. ಇನ್ನೊಬ್ಬರಿಗೆ ಬೇಜಾರು ಆಗಬಾರದು ಅಂತ ಬಿಟ್ಟಿದ್ದು. ಈ ಕ್ಷಣದಿಂದ ನೋಡಿ ಅಡುಗೆ ಮನೆ ಡಿಪಾರ್ಟ್ಮೆಂಟ್ ನನ್ನದು. ಇಲ್ಲಿ ಯಾರೂ ಬರೋ ಹಾಗಿಲ್ಲ'' ಅಂತ ನಿರ್ಮಲಾ ಗುಡುಗಿದ್ದಾರೆ.

ಆ ಒಂದು ಕಾರಣಕ್ಕೆ ನಿರ್ಮಲಾ ಚೆನ್ನಪ್ಪರನ್ನು ಟಾರ್ಗೆಟ್ ಮಾಡಿದ 'ಬಿಗ್ ಬಾಸ್' ಸ್ಪರ್ಧಿಗಳು!
ಹೆಚ್ಚು 'ಡಿಸ್ ಲೈಕ್' ಪಡೆದಿದ್ದ ನಿರ್ಮಲಾ
ನಿರ್ಮಲಾ ಬಗ್ಗೆ ಮೊದಲೇ ಬಹುತೇಕ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರತ್ಯೇಕವಾಗಿ ಇರುವುದು, ಕ್ಯಾಮರಾ ಜೊತೆಗೆ ಜಾಸ್ತಿ ಹೊತ್ತು ಮಾತನಾಡುವುದು, ಯಾರೊಂದಿಗೂ ಬೆರೆಯದ ನಿರ್ಮಲಾ ಬಗ್ಗೆ ಇತರೆ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿ 'ಡಿಸ್ ಲೈಕ್ ಬ್ಯಾಡ್ಜ್' ಕೊಟ್ಟಿದ್ದರು.

ಎಲ್ಲರೂ ಮಲಗೋ ಟೈಮ್‌ನಲ್ಲಿ ಸೀರೆಯುಟ್ಟು ಒಬ್ಬೊಬ್ಬರೇ ಮಾತನಾಡುವ ನಿರ್ಮಲಾ ಚೆನ್ನಪ್ಪ ನೋಡಿ ಹೆದರಿದ ಶಮಂತ್ ಗೌಡ!
ಭಯಗೊಂಡಿದ್ದ ಕೆಲ ಸ್ಪರ್ಧಿಗಳು
ರಾತ್ರಿ ವೇಳೆ ಸೀರೆ ತೊಟ್ಟು, ಮೇಕಪ್ ಮಾಡಿಕೊಂಡಿದ್ದ ನಿರ್ಮಲಾ ಒಂಟಿಯಾಗಿ ಕೂತಿದ್ದನ್ನು ನೋಡಿದ ಕೆಲ ಸ್ಪರ್ಧಿಗಳು ಭಯಗೊಂಡು ಆತಂಕ ವ್ಯಕ್ತಪಡಿಸಿದ್ದರು.

ನಿರ್ಮಲಾ ನಿಜವಾಗಿಯೂ ಯಾವುದೋ ವಿಷಯಕ್ಕೆ ಬೇಸರಗೊಂಡಿದ್ದಾರಾ.. ಅಥವಾ ಎಲ್ಲರ ಗಮನ ಸೆಳೆಯಲು ಹೀಗೆಲ್ಲ ಮಾಡ್ತಿದ್ದಾರಾ.. ಗೊತ್ತಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್' ಮನೆಯೊಳಗೆ ಮತ್ತು ಹೊರಗೆ ನಿರ್ಮಲಾ ಟಾಕ್ ಕ್ರಿಯೇಟ್ ಮಾಡಿರೋದಂತೂ ಸತ್ಯ.!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ