'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮದ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಸೆಕೆಂಡ್ ಇನ್ನಿಂಗ್ಸ್ನ ಆರಂಭದಲ್ಲೇ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಇದರಲ್ಲಿ ಏಳು ಮಂದಿ ನಾಮಿನೇಟ್ ಆದರು. ದಿವ್ಯಾ ಸುರೇಶ್, ಮಂಜು ಪಾವಗಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ರಘು, ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಡೇಂಜರ್ ಝೋನ್ನಲ್ಲಿದ್ದರು. ಏಳು ಮಂದಿ ಪೈಕಿ ವಾರಾಂತ್ಯದಲ್ಲಿ ಯಾರು ಔಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ವೀಕೆಂಡ್ ಎಪಿಸೋಡ್ನಲ್ಲಿ 'ಬಿಗ್ ಬಾಸ್' ದೊಡ್ಡ ತಿರುವನ್ನೇ ನೀಡಿದರು. 'ಬಿಗ್ ಬಾಸ್' ಮನೆಯಿಂದ ಈ ವಾರ ಯಾರನ್ನೂ ಔಟ್ ಮಾಡಿಲ್ಲ. ಕಳೆದ ವಾರ ನಾಮಿನೇಟ್ ಆಗಿದ್ದ ಮಂದಿಯೇ ಈ ವಾರವೂ ನಾಮಿನೇಷನ್ನಲ್ಲಿ ಮುಂದುವರೆಯಲಿದ್ದಾರೆ.
ಎಲಿಮಿನೇಷನ್ ಇಲ್ಲ
'ಸೂಪರ್ ಸಂಡೇ ವಿತ್ ಸುದೀಪ್' ಸಂಚಿಕೆಯ ಆರಂಭದಲ್ಲೇ ಎಲಿಮಿನೇಷನ್ ಇಲ್ಲ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಜೊತೆಗೆ ಈಗಾಗಲೇ ನಾಮಿನೇಟ್ ಆಗಿರುವ ಮಂದಿ ಮುಂದಿನ ವಾರವೂ ನಾಮಿನೇಷನ್ನಲ್ಲಿ ಮುಂದುವರೆಯಲಿದ್ದಾರೆ ಎಂದು ಕಿಚ್ಚ ಸುದೀಪ್ ತಿಳಿಸಿದರು.
ಪ್ರಶಾಂತ್ ಸಂಬರಗಿ ಮೇಲೆ ಪ್ರಾಂಕ್!
'ಎಲಿಮಿನೇಷನ್ ಇಲ್ಲ' ಎಂಬ ಸಂಗತಿಯನ್ನು ಸ್ಪರ್ಧಿಗಳಿಗೆ ಸುದೀಪ್ ನೇರವಾಗಿ ತಿಳಿಸಲಿಲ್ಲ. ಬದಲು ಏಳು ಮಂದಿ ಪೈಕಿ ಒಬ್ಬೊಬ್ಬರನ್ನೇ ಸೇಫ್ ಮಾಡಿ, ಕೊನೆಗೆ ''ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆಗಿದ್ದಾರೆ'' ಎಂದು ಸುದೀಪ್ ಹೇಳಿದರು. 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಡಲು ಪ್ರಶಾಂತ್ ಸಂಬರಗಿ ಕೂಡ ತಯಾರಾದರು. ಕೆಲ ಹೊತ್ತಿನ ಬಳಿಕ ''ಪ್ರಶಾಂತ್ ಸಂಬರಗಿ ಔಟ್ ಆಗಿಲ್ಲ. ನಾವು ಮಾಡಿದ್ದು ಕೇವಲ ಪ್ರಾಂಕ್'' ಎಂದು ಸುದೀಪ್ ತಿಳಿಸಿದರು.
ಹೊಸ ಟಾಸ್ಕ್
ಪ್ರಶಾಂತ್ ಸಂಬರಗಿ ಸೇಫ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಬಂದ್ಮೇಲೆ ಇತರೆ ಸ್ಪರ್ಧಿಗಳು ಅವರಿಗೆ ಪ್ರತಿಕ್ರಿಯಿಸುವಂತಿಲ್ಲ. ಅವರು ಇದ್ದಾರೆ ಎಂದು ಯಾರೂ ಭಾವಿಸುವಂತಿಲ್ಲ. ಪ್ರಶಾಂತ್ ಸಂಬರಗಿಗೆ ಯಾರೂ ರಿಯಾಕ್ಟ್ ಮಾಡಬಾರದು ಎಂದು ಸುದೀಪ್ ತಿಳಿಸಿದ್ದಾರೆ.
ಈ ವಾರ ಡೇಂಜರ್ ಝೋನ್ನಲ್ಲಿ ಯಾರ್ಯಾರು?
ಕಳೆದ ವಾರದ ನಾಮಿನೇಷನ್ ಈ ವಾರವೂ ಮುಂದುವರೆದಿರುವುದರಿಂದ ದಿವ್ಯಾ ಸುರೇಶ್, ಮಂಜು ಪಾವಗಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ರಘು, ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಡೇಂಜರ್ ಝೋನ್ನಲ್ಲಿದ್ದಾರೆ. ಈ ಏಳು ಮಂದಿ ಪೈಕಿ ಕಡಿಮೆ ವೋಟ್ಸ್ ಪಡೆದುಕೊಂಡ ಸ್ಪರ್ಧಿ ಔಟ್ ಆಗಲಿದ್ದಾರೆ.