ಆ್ಯಪ್ನಗರ

Bigg Boss 7: ಬಿಗ್‌ ಬಾಸ್ ಕನ್ನಡ ಮೂರನೇ ಸ್ಪರ್ಧಿ ರವಿ ಬೆಳಗೆರೆ ಬಗ್ಗೆ ನಿಮಗೂ ಗೊತ್ತಿರದ ವಿಚಾರವಿದು

ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಗ್ರ್ಯಾಂಡ್ ಓಪನಿಂಗ್ ಶುರು ಆಗಿದೆ. ಅಭ್ಯರ್ಥಿಗಳೆಲ್ಲರೂ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ಮೂರನೇ ಅಭ್ಯರ್ಥಿ ರವಿ ಬೆಳಗೆರೆ.

Vijaya Karnataka Web 13 Oct 2019, 7:34 pm
ರವಿ ಬೆಳಗೆರೆ ಪ್ರಖ್ಯಾತ ಪತ್ರಕರ್ತರು. 'ಹಾಯ್ ಬೆಂಗಳೂರು, ಓ ಮನಸೆ' ಮ್ಯಾಹಜೀನ್ ಸಂಪಾದಕರು ಅವರು. ಅವರ ಹೆಸರನ್ನು ಕರ್ನಾಟಕದಲ್ಲಿ ಕೇಳದಿರುವವರು ಇಲ್ಲವೇ ಇಲ್ಲ. ಬರವಣಿಗೆ ಮೂಲಕ ಪಾಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಎಷ್ಟೋ ಜನರ ಮುಖವಾಡವನ್ನು ಲೇಖನಿ ಮೂಲಕ ಹೊರತಂದ ಡೇರಿಂಗ್ ಜರ್ನಲಿಸ್ಟ್
Vijaya Karnataka Web ravi belagere bigg boss


ಹುಟ್ಟೂರು, ಶಿಕ್ಷಣ
ಬಳ್ಳಾರಿ ಸತ್ಯನಾರಾಯಣಪೇಟೆಯಲ್ಲಿ ರವಿ ಬೆಳಗೆರೆ ಹುಟ್ಟಿದ್ದರು. ತುಮಕೂರಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದ್ದರು. ಆದರೆ ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದನ್ನು ಮರೆಯುವಂತಿಲ್ಲ. ತದನಂತರದಲ್ಲಿ ಬಳ್ಳಾರಿಯಲ್ಲಿ ಹಿಸ್ಟರಿ ಮತ್ತು ಆರ್ಕೋಲಜಿಯಲ್ಲಿ ಮಾಸ್ಟರ್ಸ್ ಮುಗಿಸಿದ್ದಾರೆ.

2 ಮದುವೆ ಮತ್ತು ಮಕ್ಕಳು
ಇವರ ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ. ಯಶೋಮತಿ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಸಹೋದ್ಯೋಗಿ ಆಗಿದ್ದವರು. ಇವರ ಮೊದಲ ಪತ್ನಿಗೆ ಮೂರು ಮಕ್ಕಳು ಚೇತನಾ ಬೆಳಗೆರೆ, ಭಾವನಾ ಬೆಳಗೆರೆ, ಕರ್ಣ. ಇವರ ಎರಡನೇ ಪತ್ನಿಯ ಮಗ ಹಿಮವಂತ್. ಭಾವನಾ ಬೆಳಗೆರೆ ಕೂಡ ತಂದೆಯ ಕೆಲಸಗಳಿಗೆ ಸಹಾಯ ಮಾಡುತ್ತಾರೆ, ಅಷ್ಟೇ ಅಲ್ಲದೆ ಈ ಹಿಂದೆ ಭಾವನಾ ಬಿಗ್‌ಬಾಸ್‌ ಕನ್ನಡ ಸೀಸನ್‌ಗೆ ಎಂಟ್ರಿ ಕೊಟ್ಟಿದ್ದರು. ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಭಾವನಾ. ಚೇತನಾ ಬೆಳಗೆರೆ ಕೂಡ ಪತ್ರಕರ್ತೆ.

'ಬಿಗ್‌ಬಾಸ್‌' ಮನೆಯಲ್ಲಿ ಸಿಗರೇಟ್‌ಗೆ ಬೇಡಿಕೆ ಇಟ್ಟ ರವಿ ಬೆಳಗೆರೆ!! Video ನೋಡಿ

ರವಿ ಬೆಳಗೆರೆ ಮಾಡಿದ್ದು ಕೇವಲ ಒಂದೋ, ಎರಡೋ ಕೆಲಸ ಅಲ್ಲ.

ಬಳ್ಳಾರಿ, ಹಾಸನ, ಹುಬ್ಬಳ್ಳಿಯಲ್ಲಿ ಇತಿಹಾಸ ಪ್ರಧ್ಯಾಪಕರಾಗಿದ್ದವರು. ರೂಮ್ ಬಾಯ್ ಆಗಿ, ರಿಸೆಪ್ಶನಿಸ್ಟ್, ನ್ಯೂಸ್‌ಪೇಪರ್ ಬಾಯ್, ಹಾಲು ಮಾರಾಟಗಾರ, ಮೆಡಿಕಲ್ ರೆಪ್ರಿಸಂಟೇಟಿವ್,ಪ್ರಿಂಟಿಂಗ್ ಪ್ರೆಸ್ ಓನರ್, ಥಿಯೇಟರ್ ಗೇಟ್ ಕೀಪರ್ ಹೀಗೆ ನಾನಾ ರೀತಿಯ ಕೆಲಸಗಳನ್ನು ರವಿ ಮಾಡಿದ್ದರು. ಬೆಂಗಳೂರಿಗೆ ಬಂದಮೇಲೆ 1995ರಲ್ಲಿ ಆರ್.ಟಿ.ವಿಠ್ಠಲಮೂರ್ತಿ, ರಾ.ಸೋಮನಾಥ, ಜೋಗಿ, ಎಚ್.ಸಂಗಮ್ ದೇವ ಜೊತೆಗೂಡಿ 'ಹಾಯ್ ಬೆಂಗಳೂರು' ಸ್ಥಾಪಿಸಿದರು. ಲವ್ ಲವಿಕೆ, ಬಾಟಮ್ ಐಟಮ್, ಖಾಸ್ ಬಾತ್, ಪಾಪಿಗಳ ಲೋಕದಲ್ಲಿ ಮುಂತಾದ ಕಾಲಂಗಳು ಕೆಲವೇ ವರ್ಷಗಳಲ್ಲಿ ಬಹಳ ಮೆಚ್ಚುಗೆ ಪಡೆದವು. ಅಷ್ಟೇ ಅಲ್ಲದೆ 5 ವರ್ಷಗಳಲ್ಲಿ ಅತಿ ಹೆಚ್ಚು ಸರ್ಕುಲೇಶನ್ ಹೊಂದಿದ ಪತ್ರಿಕೆಯಾಗಿ 'ಹಾಯ್ ಬೆಂಗಳೂರು' ಬೆಳೆಯಿತು. 'ಪಾಪಿಗಳ ಲೋಕದಲ್ಲಿ' ಕಾಲಂ ಭೂಗತ ಲೋಕದ ಬಗ್ಗೆ ತೆರೆದಿಟ್ಟ ಕಾಲಂ ಆಗಿತ್ತು. ಯುವ ಮನಸ್ಸುಗಳ ತೊಂದರೆ, ತೊಳಲಾಟದ ಬಗ್ಗೆ ಹೇಳುತ್ತಿದ್ದ 'ಓ ಮನಸೇ' ಮ್ಯಾಗಜೀನ್ ಕೂಡ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಖ್ಯಾತಿ ಪಡೆಯಿತು.

ಈ ಬಾರಿಯ 'ಬಿಗ್‌ ಬಾಸ್' ಮನೆ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ರವಿ ಬೆಳಗೆರೆಯವರ ಪುಸ್ತಕಗಳು
1980ರಿಂದ ಇಲ್ಲಿಯವರೆಗೆ ರವಿ ಬೆಳಗೆರೆಯವರು ಬರೆದ ಪುಸ್ತಕಗಳಿಗೆ ಬರವಿಲ್ಲ, ಅವರ ಸಾಹಿತ್ಯ ಕೃಷಿ ಕಂಡು ಅವರ ಅಭಿಮಾನಿಗಳಾದವರು ಹಲವರು. ಹೀಗಾಗಿಯೇ ಅವರನ್ನು 'ಅಕ್ಷರ ಲೋಕದ ಮಾಂತ್ರಿಕ' ಎಂದು ಕರೆಯುವುದು. ಗೋಲಿಬಾರ್, ರಾಜೀವ್ ಹತ್ಯೆ ಏಕಾಯ್ತು? ಏನಾಯ್ತು?, ಖಾಸ್‌ಬಾತ್ 1996, ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ಮುಸ್ಲಿಂ, ಹಂತಕಿ ಐ ಲವ್ ಯೂ ಮುಂತಾದ ಹಲವು ಪುಸ್ತಕಗಳನ್ನು ರವಿ ಬೆಳಗೆರೆ ಬರೆದಿದ್ದಾರೆ.

ಪ್ರಾರ್ಥನಾ ಶಾಲೆ
ರವಿ ಬೆಳಗೆರೆ ಒಡೆತನದಲ್ಲಿ ಪ್ರಾರ್ಥನಾ ಶಾಲೆ 2002ರಿಂದ ನಡೆಯುತ್ತಿದೆ. ಬೇರೆ ಶಾಲೆಗಳಿಗಿಂತ ಈ ಶಾಲೆ ಭಿನ್ನ. ಈ ಶಾಲೆಯ ಮಕ್ಕಳ ಪ್ರೊಫೈಲ್‌ನಲ್ಲಿ ಜಾತಿ ಹೆಸರು ನಮೂದಿತವಾಗಿದೆ.

ಬಿಗ್‌ ಬಾಸ್ ಕನ್ನಡಕ್ಕೆ ಬರುವ ಮೂರನೇ ಸ್ಪರ್ಧಿ ಹೆಸರನ್ನು ರಿವೀಲ್ ಮಾಡಿತು ಈ ವಿಡಿಯೋ; ಯಾರು ಅವರು?

ನಟ, ನಿರೂಪಕನಾಗಿ ರವಿ ಬೆಳಗೆರೆ

ನಟ ಕೂಡ ಆಗಿರುವ ರವಿ ಬೆಳಗೆರೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡೆಡ್ಲಿ ಸೋಮ, ಎಂದೂ ಮರೆಯದ ಹಾಡು ಕಾರ್ಯಕ್ರಮದ ನಿರೂಪಕರಾಗಿದ್ದವರು ಅವರು. ಗಂಡ ಹೆಂಡತಿ, ಮಾದೇಶ ಸಿನಿಮಾಗಳಲ್ಲಿ, ಮುಕ್ತ..ಮುಕ್ತ ಧಾರಾವಾಹಿಯಲ್ಲಿ ಅವರು ನಟಿಸಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ರವಿ ಬೆಳಗೆರೆ ಅಲ್ಲಿ ಬೆಳ್ ಬೆಳಿಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ವಿವಾದಗಳು
ಸಿನಿಮಾ, ಬರವಣಿಗೆ ವಿಚಾರದಲ್ಲಿ ರವಿ ಬೆಳಗೆರೆ ಸಾಕಷ್ಟು ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದಾರೆ. ಇದ್ದದ್ದನ್ನು ಇದ್ದಹಾಗೆ ನೇರವಾಗಿ, ಮುಖಕ್ಕೆ ಹೊಡೆದ ಹಾಗೆ ಹೇಳುವ ಸ್ವಭಾವ ಇವರದ್ದು. ಹೀಗಾಗಿ ರವಿ ಬೆಳಗೆರೆ ಸುತ್ತ ಕಾಮಟ್ರವರ್ಸಿಗಳು ಸುತ್ತುತ್ತಿರುತ್ತವೆ.

ಬಿಗ್‌ ಬಾಸ್ ಕನ್ನಡ ಸೀಸನ್‌ನ ಮೊದಲ ಸ್ಪರ್ಧಿ ಕುರಿ ಪ್ರತಾಪ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿ

ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಅವಾರ್ಡ್, ಶಿವರಾಮ್ ಕಾರಂತ್ ಪ್ರಶಸ್ತಿ, ಕರ್ನಾಟಕ ಮೀಡಿಯ ಅಕಾಡೆಮಿ ಅವಾರ್ಡ್ ಫಾರ್ ಲೈಫ್‌ಟೈಮ್ ಅಚೀವ್‌ಮೆಂಟ್, ರಾಜ್ಯೋತ್ಸವ ಅವಾರ್ಡ್, ಕೆಂಪೇಗೌಡ ಪ್ರಶಸ್ತಿಗಳು ಇವರ ಬರೆವಣಿಗೆಗೆ ಸಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ