ಭೂಮಿ ಶೆಟ್ಟಿ ಆಟದಿಂದ ಔಟ್
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯ ಮೊದಲ ಸುತ್ತಿನ ಎಲಿಮಿನೇಶನ್ನಲ್ಲಿ ಭೂಮಿ ಶೆಟ್ಟಿ ಔಟ್ ಆಗಿದ್ದಾರೆ. ಭೂಮಿ ಒಳ್ಳೆಯ ಆಟಗಾರ್ತಿ. ಫಿಸಿಕಲ್ ಟಾಸ್ಕ್ ಇದ್ದಾಗ ಬಿಗ್ ಬಾಸ್ ಮನೆಯ ಗಂಡುಮಕ್ಕಳಿಗೂ ಕೂಡ ಟಪ್ ಕಾಂಪಿಟೇಶನ್ ಕೊಟ್ಟಿದ್ದರು. ಈ ಬಗ್ಗೆ ಕುರಿ ಪ್ರತಾಪ್ ಕೂಡ ಹೇಳಿದ್ದರು. ಊಟ-ತಿಂಡಿ ವಿಚಾರದಲ್ಲಿ ಭೂಮಿ ಬಾಲಿಶವಾಗಿ ವರ್ತಿಸಿದ್ದು ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಯ್ತು.
ಎರಡನೇ ಸುತ್ತಿನ ಎಲಿಮಿನೇಶನ್ನಲ್ಲಿ ಔಟ್ ಆದ ದೀಪಿಕಾ ದಾಸ್
ಈ ಸೀಸನ್ನ ಗ್ರ್ಯಾಂಡ್ ಫಿನಾಲೆಯಲ್ಲಿ ನಡೆದ ಎರಡನೇ ಸುತ್ತಿನ ಎಲಿಮಿನೇಶನ್ನಲ್ಲಿ ದೀಪಿಕಾ ದಾಸ್ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವರು ತುಂಬ ಚೆನ್ನಾಗಿ ಅಡುಗೆ ಮಾಡುತ್ತಿದ್ದರು.