ಆ್ಯಪ್ನಗರ

Bigg Boss 8: ಬಿಗ್ ಬಾಸ್ ಮನೆಗೆ ಕಾಲಿಟ್ಟ ರಾಜ್ಯ ಪ್ರಶಸ್ತಿ ವಿಜೇತೆ, ನಟಿ, ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ!

ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಎಂಟ್ರಿ ನೀಡಿದ ಸ್ಪರ್ಧಿಗಳಲ್ಲಿ ನಟಿ, ನಿರ್ದೇಶಕಿ, ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ಮಲಾ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Vijaya Karnataka Web 28 Feb 2021, 10:52 pm
ನಿರ್ಮಲಾ ಚೆನ್ನಪ್ಪ ಅವರು ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಆರಂಭದಲ್ಲಿ ನಟನೆ ಮಾಡುತ್ತಿದ್ದ ಅವರು ಈಗ ಧಾರಾವಾಹಿ, ರಿಯಾಲಿಟಿ ಶೋ ನಿರ್ಮಾಣ ಮಾಡುತ್ತಿದ್ದಾರೆ.
Vijaya Karnataka Web bigg boss kannada season 8 contestant number 17 actress producer nirmala chennappa
Bigg Boss 8: ಬಿಗ್ ಬಾಸ್ ಮನೆಗೆ ಕಾಲಿಟ್ಟ ರಾಜ್ಯ ಪ್ರಶಸ್ತಿ ವಿಜೇತೆ, ನಟಿ, ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ!


ನಿರ್ಮಲಾ ಅವರು 'ಪದ್ಮಾವತಿ' ಧಾರಾವಾಹಿಯ ನಿರ್ಮಾಣ ಮಾಡಿದ್ದರು. 'ತಲ್ಲಣ' ಸಿನಿಮಾದ ನಟನೆಗಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿ ನಿರ್ಮಲಾ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡಿದ್ದಾರೆ. 'ಸಾಯಿ ನಿರ್ಮಲಾ ಪ್ರೊಡಕ್ಷನ್ಸ್' ಮೂಲಕ ಅವರು ಧಾರಾವಾಹಿ, ಶೋ ನಿರ್ಮಾಣ ಮಾಡುತ್ತಿದ್ದಾರೆ. ಅವರ ಪತಿ ಸರದಾರ್ ಸತ್ಯ ಕೂಡ ನಟರು.

ಕಬಡ್ಡಿ ಆಟಗಾರ್ತಿಯಾಗಿದ್ದ ನಿರ್ಮಲಾ ಅವರು ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದರು. ಪಿಯುಸಿ ಓದುತ್ತಿದ್ದಾಗ ಅವರು ನಟನೆಯ ಕೋರ್ಸ್‌ ಸೇರಿಕೊಂಡರು. ಟಿ ಎಸ್ ನಾಗಾಭರಣ ಅವರ 'ಬೆನಕ' ತಂಡ ಸೇರಿಕೊಂಡು ನಟನೆಯ ಬಗ್ಗೆ ಇನ್ನುಷ್ಟು ವಿಷಯ ತಿಳಿದುಕೊಂಡರು. ನಿರ್ಮಲಾ ತಂದೆ ಕೆಎಸ್‌ಆರ್‌ಟಿಸಿ ಡ್ರೈವರ್ ಆಗಿದ್ದರು. ಬೆನಕದಲ್ಲಿಯೃ ಸರದಾರ್ ಸತ್ಯ ಅವರ ಪರಿಚಯ ನಿರ್ಮಲಾಗೆ ಆಗಿತ್ತು.

'ರಂಗಾಯಣ', 'ರಂಗ ಶಂಕರ'ದಲ್ಲಿ ನಿರ್ಮಲಾ ಭಾಗವಹಿಸಿದ್ದರು. 25 ಧಾರಾವಾಹಿಗಳಲ್ಲಿ ನಿರ್ಮಲಾ ನಟಿಸಿದ್ದಾರೆ. 7 ವರ್ಷಗಳ ಕಾಲ ಪ್ರಸಾರವಾಗಿದ್ದ 'ಪಾರ್ವತಿ ಪರಮೇಶ್ವರ'ದಲ್ಲಿ ಅವರು ನಟಿಸಿದ್ದರು. 'ಕನ್ನಡ ಕೋಗಿಲೆ', 'ಹಾಡು ಕರ್ನಾಟಕ' ರಿಯಾಲಿಟಿ ಶೋಗಳ ನಿರ್ಮಾಣವನ್ನೂ ಕೂಡ ಮಾಡಿದ್ದರು. ನಿರ್ಮಲಾಗೆ ಓರ್ವ ಮಗನಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ