ಆ್ಯಪ್ನಗರ

Bigg Boss 8: 'ಬ್ರಹ್ಮಗಂಟು' ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಬಿಗ್ ಬಾಸ್ ಮನೆಯ 9ನೇ ಸ್ಪರ್ಧಿ

'ಬ್ರಹ್ಮಗಂಟು' ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಅವರು ಬಿಗ್‌ ಬಾಸ್ ಕನ್ನಡ ಸೀಸನ್ 8 ಶೋನ ಸ್ಪರ್ಧಿಗಳಲ್ಲಿ ಒಬ್ಬರು. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಕನ್ನಡ ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗೀತಾ ಭಾರತಿ ಭಟ್ ಅವರು ಸಕ್ರಿಯರಾಗಿದ್ದಾರೆ.

Vijaya Karnataka Web 28 Feb 2021, 9:04 pm
ಕಾರ್ಕಳದ ಹುಡುಗಿ ಗೀತಾ ಭಾರತಿ ಭಟ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಸಂಗೀತದಲ್ಲಿ ಅಭಿರುಚಿ ಹೆಚ್ಚಿಸಿಕೊಂಡ, ಗೀತಾ ಚೆನ್ನಾಗಿ ಹಾಡುತ್ತ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದರು. ಶಾಲಾ, ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು.
Vijaya Karnataka Web bigg boss kannada season 8 contestant number 9 brahmagantu serial actress geetha bharathi bhat
Bigg Boss 8: 'ಬ್ರಹ್ಮಗಂಟು' ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಬಿಗ್ ಬಾಸ್ ಮನೆಯ 9ನೇ ಸ್ಪರ್ಧಿ


ಗೀತಾ ಅವರು ಇನ್ವೆಸ್ಟ್‌ಮೆಂಟ್ ಬ್ಯಾಕಿಂಗ್‌ನಲ್ಲಿ 2 ವರ್ಷ ಕೆಲಸ ಮಾಡಿದ್ದಾರೆ. ಅಕಾಸ್ಮಾತ್ ಆಗಿ ಅವರಿಗೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ದಪ್ಪಗಿರುವ ಹುಡುಗಿಯ ಕಥೆಯೇ 'ಬ್ರಹ್ಮಗಂಟು'. ಗೀತಾ ಕೂಡ ದಪ್ಪಗಿರೋದಕ್ಕೆ ಈಗಾಗಲೇ ಸಾಕಷ್ಟು ಅವಮಾನ, ನೋವು ಅನುಭವಿಸಿದ್ದಾರೆ. ಹೀಗಂತ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ವೈಯಕ್ತಿಕ ಬದುಕಲ್ಲಿ ಗೀತಾ ತುಂಬ ಭಾವಜೀವಿ.

ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಗೀತಾ ಡಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿದ್ದಾಗ ಬಾಸ್ಕೆಟ್ ಬಾಲ್ ಆಡುತ್ತಿದ್ದಾಗ ಗೀತಾ ಕಾಲು ಜಾರಿ ಬಿದ್ದರು. ಆಮೇಲೆ ವೈದ್ಯರು ಆಪರೇಶನ್ ಮಾಡಿದ್ದಾರೆ. ನಾಲ್ಕು ತಿಂಗಳು ಬೆಡ್‌ ಮೇಲಿದ್ದ ಗೀತಾ ತೂಕ ಇನ್ನಷ್ಟು ಜಾಸ್ತಿಯಾಯ್ತು. ಆನಂತರದಲ್ಲಿ ಅವರ ತೂಕ ಇಳಿಕೆಯಾಗಲಿಲ್ಲ.

ನಟನೆ ಜೊತೆಗೆ ಗೀತಾ ಸಂಗೀತ ಕ್ಷೇತ್ರದಲ್ಲಿಯೂ ಮುಂದುವರಿಯಲಿದ್ದಾರೆ. ಸಂಗೀತವೇ ಅವರಿಗೆ ಮೊದಲ ಆದ್ಯತೆ. ವ್ಯಾಲೆಂಟೈನ್‌ ಡೇ ಪ್ರಯುಕ್ತ ಅವರೊಂದು ಮ್ಯೂಸಿಕ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. 'ಸ್ವೀಟೂ' ಎಂದು ಈ ಮ್ಯೂಸಿಕ್‌ ವಿಡಿಯೋಗೆ ಶೀರ್ಷಿಕೆ ಇಡಲಾಗಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ 'ಲವ್ ಮಾಕ್ಟೇಲ್' ಸಿನಿಮಾದಲ್ಲಿ ಗೀತಾ ಅತಿಥಿ ಪಾತ್ರ ಮಾಡಿದ್ದರು. ಇನ್ನು ತೆಲುಗಿಗೆ ರಿಮೇಕ್ ಆಗುತ್ತಿರುವ ಈ ಸಿನಿಮಾದಲ್ಲಿ ಗೀತಾ ನಟಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ