ಆ್ಯಪ್ನಗರ

Bigg Boss 6, 17th November, Day 27: ನಾಲ್ಕನೇ ವಾರ ಬಿಗ್‌ಬಾಸ್‌ ಮನೆಯಿಂದ ಆದಮ್‌ ಪಾಶಾ ಹೊರಕ್ಕೆ

ಶನಿವಾರ ಎಲಿಮಿನೇಷನ್‌ ರೌಂಡ್‌ ಇರುವ ಕಾರಣ ಬಿಗ್‌ಬಾಸ್‌ ಮನೆಯಲ್ಲಿ ಸಹಜವಾಗೇ ಬಿಗುವಿನ ವಾತಾವರಣ ಮೂಡಿತ್ತು. ಈ ವಾರದ ಟಾಸ್ಕ್‌ಗಳ ಬಗ್ಗೆ ಹಾಗೂ ನಾಲ್ಕನೇ ವಾರದ ಪ್ರಮುಖ ಘಟನಾವಳಿಗಳ ಬಗ್ಗೆ ಕಿಚ್ಚ ಸುದೀಪ್ ಬಿಗ್‌ಬಾಸ್‌ ಸದಸ್ಯರೊಂದಿಗೆ ಮಾತನಾಡಿದರು.

Vijaya Karnataka Web 17 Nov 2018, 9:58 pm
ನೋಡು ನೋಡುತ್ತಿದ್ದಂತೆ ಬಿಗ್ ಬಾಸ್ ಆರನೇ ಆವೃತ್ತಿ ನಾಲ್ಕು ವಾರ ಪೂರೈಸಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಆದಮ್‌ ಹೊರ ನಡೆದಿದ್ದಾರೆ.
Vijaya Karnataka Web 17


ಶನಿವಾರ ಎಲಿಮಿನೇಷನ್ ರೌಂಡ್ ಇರುವ ಕಾರಣ ಸಹಜವಾಗಿ ಬಿಗ್‌ ಬಾಸ್ ಮನೆಯಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಆವರಿಸಿತ್ತು. ಬಿಸಿ ಬಿಸಿ ಚರ್ಚೆಗಳು ನಡೆದವು. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದವರು ಆಂಡಿ, ರಾಕೇಶ್, ರಶ್ಮಿ, ಶಶಿ, ಕವಿತಾ, ಆನಂದ್, ಧನರಾಜ್, ನಯನಾ ಮತ್ತು ಆದಮ್ ಪಾಶಾ. ಕಳೆದ ವಾರ ಸ್ನೇಹಾ ಬಿಗ್‌ಬಾಸ್‌ ಮನೆಯಿಂದ ಹೊರ ನಡೆದಿದ್ದರು.

ಚಿನ್ನು ಎಂದು ಖ್ಯಾತಿ ಪಡೆದಿರುವ ಕವಿತಾ


ಸುದೀಪ್‌ ಬರುವ ಮುನ್ನ ಮನೆಯಲ್ಲಿ ಗ್ಯಾಸ್ ಆಫ್‌ ಮಾಡದ ವಿಚಾರವಾಗಿ ಚರ್ಚೆಗಳು ನಡೆದವು. ಬೆಳಗ್ಗೆ ಕಿಚನ್‌ ತಂಡದ ಮನೆಯ ಸದಸ್ಯರು ಗ್ಯಾಸ್‌ ಆಫ್‌ ಮಾಡದ ಕಾರಣದಿಂದಾಗಿ ಮಧ್ಯಾಹ್ನದ ಊಟಕ್ಕಾಗಿ ಅಡುಗೆ ಮಾಡಿಕೊಳ್ಳಲು ಪರದಾಡಿದರು. ಬಳಿಕ ಅಡುಗೆ ಮನೆಯ ಕ್ಯಾಪ್ಟನ್‌ ನಯನಾ ಹಾಗೂ ಜಯಶ್ರೀ ಬಿಗ್‌ ಬಾಸ್‌ಗೆ ಕ್ಷಮೆ ಕೋರಿ ಗ್ಯಾಸ್‌ ಆನ್‌ ಮಾಡುವಂತೆ ಮನವಿ ಮಾಡಿಕೊಂಡರು.

ಅಕ್ಷತಾಗೆ ಚಿನ್ನು ಎಂದಿದ್ದ ರಾಕೇಶ್‌


ಪ್ರತಿ ವಾರದಂತೆ ಬಿಗ್‌ ಬಾಸ್ ಮನೆಗೆ ಆಗಮಿಸಿರುವ ಕಿಚ್ಚ ಸುದೀಪ್, ಉಭಯ ಕುಶಲೋಪರಿ ವಿಚಾರಿಸಿದರು. ಪನಿಶ್‌ಮೆಂಟ್‌ ನೀಡಿದ ಬಳಿಕವೂ ಕೆಟ್ಟ ಮಾತುಗಳನ್ನು ಮಾತನಾಡುವ ವಿಚಾರದಲ್ಲಿ ಬುದ್ಧಿ ಕಲಿತಿಲ್ಲ ಎಂದು ಆ್ಯಂಡಿಗೆ ಕಿಚ್ಚ ಸೂಕ್ಷ್ಮವಾಗಿ ತಿಳಿಸಿದರು. ಈ ವಾರ ಶಶಿ ಕ್ಯಾಪ್ಟನ್ ಆಗಿದ್ದು, ಅವರು ಬಂದ ಬಳಿಕ ಈ ವಾರ ಸೈಲೆಂಟ್ ಆಗಿದ್ದ ರಶ್ಮಿ ಮತ್ತೆ ಜೋರಾಗಿದ್ದಾರೆ ಎಂಬಂತಹ ಚರ್ಚೆಗಳು ನಡೆದವು. ಅಲ್ಲದೆ, ಚಿನ್ನು ಎಂಬ ವಿಷಯದ ಬಗ್ಗೆಯೂ ಚರ್ಚೆ ನಡೆದಿದೆ.

ಸುದೀಪ್‌


ಇನ್ನು, ಈ ಮೊದಲು ನಾಮಿನೇಟ್ ಆದವರ ಪೈಕಿ ಧನರಾಜ್‌, ಶಶಿ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸೇಫ್‌ ಆದ ಬಳಿಕ ತಿಳಿಸಿದರು. ಬಳಿಕ ನಯನಾ, ರಶ್ಮಿ ಹಾಗೂ ಕವಿತಾ ಸೇಫ್‌ ಜೋನ್‌ ತಲುಪಿದ ಬಳಿಕ ಮೂವರು ಮಹಿಳಾ ಮಣಿ ಸದಸ್ಯರು ಮತ ನೀಡಿದವರಿಗೆ ಧನ್ಯವಾದ ತಿಳಿಸಿದರು. ಕೊನೆಗಳಿಗೆಯಲ್ಲಿ, ಆದಮ್, ಆನಂದ್ ಹಾಗೂ ಆ್ಯಂಡಿ ಕೊನೆಯ ಮೂವರಾಗಿ ಉಳಿದುಕೊಂಡಿದ್ದರು.

ಬಳಿಕ ಆನಂದ್ ಸೇಫ್‌ ಆಗುತ್ತಿದ್ದಂತೆ ''ನನಗೆ ಮತ ಹಾಕಿದ ಎಲ್ಲ ಕನ್ನಡಿಗರಿಗೂ ಧನ್ಯವಾದಗಳು'' ಎಂದು ತಮ್ಮ ಎಂದಿನ ಶೈಲಿಯಲ್ಲಿ ಹೇಳಿ ಕೈ ಮುಗಿಯುವುದಷ್ಟೇ ಅಲ್ಲದೆ, ದೀರ್ಘ ದಂಡ ನಮಸ್ಕಾರವನ್ನೂ ಹಾಕಿದರು.

ಕೊನೆಗಳಿಗೆಯಲ್ಲಿ ಆ್ಯಂಡಿ ಸೇಫ್ ಆದರೆ, ಆದಮ್ ಮನೆಯಿಂದ ಹೊರ ನಡೆಯಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ