ಆ್ಯಪ್ನಗರ

Bigg Boss 6, 4th January, Day 75: ನಾಯಕ ಪಟ್ಟ ಏರಲು ನಾನಾ ಕಸರತ್ತು

ರಶ್ಮಿಯನ್ನು ಜೈಲಿಗೆ ಕಳುಹಿಸಬಾರದಿತ್ತು ಎಂದು ಬಹುತೇಕ ಎಲ್ಲರೂ ಹೇಳಿದರು. ಆದರೂ ಆಂಡಿಯ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತವಾಯಿತು. ಇನ್ನು ವೈಲ್ಡ್‌ ಕಾರ್ಡ್‌ನಲ್ಲಿ ಬಂದಿದ್ದರಿಂದ ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಜೀವಿತಾ ಕಣ್ಣೀರು ಹಾಕಿದರು.

Vijaya Karnataka Web 4 Jan 2019, 9:26 pm
ಬಿಗ್‌ ಬಾಸ್‌ ಆರನೇ ಆವೃತ್ತಿಯಲ್ಲಿ ಚಲನಚಿತ್ರೋತ್ಸವದ ಗುಂಗಿನಿಂದ ಹೊರ ಬಂದರು.
Vijaya Karnataka Web ತೊಟ್ಟಿಲು
ತೊಟ್ಟಿಲು


ಸ್ಪರ್ಧಿಗಳ ಇಬ್ಬರಿಗೆ ಶಾಕ್‌ ಕಾದಿತ್ತು. ಕಳಪೆ ಪ್ರದರ್ಶನ ನೀಡಿದ ಇಬ್ಬರನ್ನು ಜೈಲಿಗೆ ಕಳುಹಿಸುವ ನಿರ್ಧಾರ ಕೈಗೊಳ್ಳಬೇಕೆಂದು ಕ್ಯಾಪ್ಟನ್‌ ಆಂಡಿಗೆ ಬಿಗ್ ಬಾಸ್‌ ಟಾಸ್ಕ್‌ ನೀಡಿದರು.

ಅದರಂತೆ ಆಂಡಿ ಕೆಲವು ಕಾರಣ ರಶ್ಮಿ, ಜೀವಿತಾ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಘೋಷಿಸಿದರು.

ಈ ಕುರಿತು ಸ್ಪರ್ಧಿಗಳು ಹಾಗೂ ಆಂಡಿ ನಡುವೆ ವಾದ-ಪ್ರತಿವಾದವೇ ನಡೆಯಿತು.

ರಶ್ಮಿಯನ್ನು ಜೈಲಿಗೆ ಕಳುಹಿಸಬಾರದಿತ್ತು ಎಂದು ಬಹುತೇಕ ಎಲ್ಲರೂ ಹೇಳಿದರು. ಆದರೂ ಆಂಡಿಯ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.

ಇನ್ನು ವೈಲ್ಡ್‌ ಕಾರ್ಡ್‌ನಲ್ಲಿ ಬಂದಿದ್ದರಿಂದ ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಜೀವಿತಾ ಕಣ್ಣೀರು ಹಾಕಿದರು.

ಇದರ ಬೆನ್ನಲ್ಲೇ ಸ್ಪರ್ಧಿಗಳಿಗೆ ಲಕ್ಷುರಿ ಬಜೆಟ್‌ ಟಾಸ್ಕ್‌ ನೀಡಲಾಯಿತು. ಶಶಿ ಈಜುಕೊಳಕ್ಕೆ ಧುಮಕಿ ಕಾರ್ಡ್‌ ತೆಗೆದು ನವೀನ್ ಕೊಟ್ಟರು. ನವೀನ್‌ ಅದರ ಹೆಸರು ಮತ್ತು ದರವನ್ನು ಪ್ರಕಟಿಸಿದ ಕೂಡಲೇ ರಾಕೇಶ್‌ ಬೋರ್ಡ್‌ ಮೇಲೆ ಬರೆದರು.

2000 ಪಾಯಿಂಟ್‌ಗೆ ಸ್ಪರ್ಧೀಗಳು ಖರೀದಿಸಿದ್ದು, ಮೀನು, ಮಟನ್‌, ಪನ್ನೀರ್‌ ಮತ್ತು ಜಿಂಜರ್‌ ಗಾರ್ಲಿಕ್‌ ಪೇಸ್ಟ್‌.


ಆ ನಂತರ ಬಿಗ್‌ ಬಾಸ್‌ ಮುಂದಿನ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದರು.

ಮಗುವನ್ನು ತೊಟ್ಟಿಲಿನಲ್ಲಿ ಇಟ್ಟುಕೊಂಡು ಓಡಿ ಹೋಗಿ ಸ್ಟಾಂಡ್‌ಗೆ ತಂದು ನಿಲ್ಲಿಸಬೇಕಾಯಿತು.

ಕೊನೆಯದಾಗಿ ಕವಿತಾ ಈ ಟಾಸ್ಕ್‌ನಲ್ಲಿ ಮೊದಲಿಗರಾದರು. ಆದರೆ ಇದರಲ್ಲಿ ಟ್ವಿಸ್ಟ್‌ ಇಟ್ಟಿದ್ದ ಬಿಗ್‌ ಬಾಸ್‌ ಕವಿತಾ ಒಯ್ದ ತೊಟ್ಟಿಲಿನಲ್ಲಿದ್ದ ನವೀನ್‌ ಈ ವಾರದ ಕ್ಯಾಪ್ಟನ್‌ ಆದರು.

ದಿನದ ಕೊನೆಯಲ್ಲಿ ಶಶಿ ಜನ್ಮದಿನವನ್ನು ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ