ಆ್ಯಪ್ನಗರ

Bigg Boss 6, 8th January, Day 79: ಬಿಗ್‌ ಮನೆಗೆ ಕಳೆ ತಂದ ಕುಟುಂಬ ಸದಸ್ಯರು

ಬೆಳಗ್ಗೆ ಎದ್ದು ದಿನದ ಚಟುವಟಿಕೆಯಲ್ಲಿ ತೊಡಗಿದ್ದ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ರಿಮೋಟ್‌ ಕಂಟ್ರೋಲ್‌ ಲಕ್ಸುರಿ ಟಾಸ್ಕ್‌ ನೀಡಿದರು.

Vijaya Karnataka Web 8 Jan 2019, 10:19 pm
ಬಿಗ್‌ ಬಾಸ್‌ ಮನೆಯಲ್ಲಿ ಹಲವಾರು ಸಂಕಷ್ಟ, ಕಷ್ಟ ಕೋಟಲೆ, ಖುಷಿ, ದುಃಖ, ಸಿಟ್ಟು, ಬೇಸರದ ಸಮಯವನ್ನು ಕಳೆದಿದ್ದ ಸ್ಪರ್ಧಿಗಳಿಗೆ 79ನೇ ದಿನ ಸುದಿನ. ಏಕೆಂದರೆ ಕುಟುಂಬ ಸದಸ್ಯರು ಮನೆಗೆ ಎಂಟ್ರಿ ಕೊಟ್ಟ ದಿನವಾಗಿತ್ತು.
Vijaya Karnataka Web BIgg


ಬೆಳಗ್ಗೆ ಎದ್ದು ದಿನದ ಚಟುವಟಿಕೆಯಲ್ಲಿ ತೊಡಗಿದ್ದ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ರಿಮೋಟ್‌ ಕಂಟ್ರೋಲ್‌ ಲಕ್ಸುರಿ ಟಾಸ್ಕ್‌ ನೀಡಿದರು.

ಅದರಂತೆ ಪಾಸ್‌ ಪ್ಲೇ ಆಟಕ್ಕೆ ಬಿಗ್‌ ಬಾಸ್‌ ಚಾಲನೆ ನೀಡಿತು.

ಅದರಂತೆ ಬಿಗ್‌ ಮನೆಗೆ ಮೊದಲಿಗೆ ಎಂಟ್ರಿ ಕೊಟ್ಟವರು ನವೀನ್‌ ತಾಯಿ ಸುಮಿತ್ರಾ. ಬಂದ ಸಮಯದಿಂದಲೂ ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿ ಇದ್ದ ಸುಮಿತ್ರಾ ಲವಲವಿಕೆಯಿದ್ದ ಇದ್ದರು.

ತಾಯಿಯ ಮೇಲಿನ ಹಾಡು ಹಾಡಿ ನವೀನ್‌ ಎಲ್ಲರ ಕಣ್ಣಿನಲ್ಲೂ ನೀರು ತರಿಸಿದರು.

ನಂತರ ಬೆಳ್ಳಿ ಮೂಡಿತೋ ಹಾಡನ್ನು ಸುಮಿತ್ರಾ ಅವರು ಸ್ಪರ್ಧಿಗಳೊಂದಿಗೆ ಹಾಡಿ ಸಂಭ್ರಮಿಸಿದರು.


ನಂತರ ಬಿಗ್‌ ಮನೆಗೆ ಎಂಟ್ರಿಕೊಟ್ಟವರು ಶಶಿ ಸಹೋದರ ಸತೀಶ್‌ ಮತ್ತು ಧ್ರುವ.

ಮಗುವಿನ ಜತೆ ಎಲ್ಲರೂ ಮುದ್ದಾಡಿದರು. ಶಶಿ ಮಾತ್ರ ಮಗುವನ್ನು ಎತ್ತಿಕೊಂಡೇ ಇದ್ದುದು ಇಬ್ಬರ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿತ್ತು.

ನಂತರ ಮನೆಗೆ ಬಂದವರು ಅಕ್ಷತಾ ತಾಯಿ ಅಂಬುಜಮ್ಮ. ಸ್ವಲ್ಪ ಹೊತ್ತು ಆಟ ಆಡಿಸಿದ ನಂತರ ಬಿಗ್‌ ಮನೆಗೆ ಬಂದು ಮಗಳನ್ನು ತಬ್ಬಿಕೊಂಡು ಅತ್ತರು ಅಂಬುಜಮ್ಮ.

ನಂತರ ಅಂಬುಜಮ್ಮ ಅವರೇ ಎಲ್ಲರಿಗೂ ಮಟನ್‌ ತಿಂಡಿಯೊಂದನ್ನು ಮಾಡಿ ಸ್ಪರ್ಧಿಗಳಿಗೆ ಉಣಬಡಿಸಿದರು.

ನಮ್ಮ ಸರದಿಯೂ ಬರಲಿದೆ ಎಂದು ಇತರೆ ಸ್ಪರ್ಧಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ