ಆ್ಯಪ್ನಗರ

12ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನಾಗೆ ಸಿಕ್ಕ ಸಂಭಾವನೆ ಎಷ್ಟು?

'ಬಿಗ್ ಬಾಸ್ ಕನ್ನಡ ಸೀಸನ್ 7' ರಿಯಾಲಿಟಿ ಶೋದಲ್ಲಿ ಪಾಲ್ಗೊಂಡು ಗೆದ್ದರೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಸಿಗುತ್ತದೆ. ಹಣಕಾಸಿನ ಸಮಸ್ಯೆಗಳ ನಿವಾರಣೆಗಾಗಿಯೋ ಅಥವಾ ಪ್ರಾಮುಖ್ಯತೆ ಪಡೆಯಲೋ ಅಥವಾ ತಾವೇನು, ತಮ್ಮ ವ್ಯಕ್ತಿತ್ವ ಏನು ಎಂದು ಬೇರೆಯವರಿಗೆ ತಿಳಿಸಲೋ, ತಾವೇನು ಎಂಬುದನ್ನು ಅವರೇ ಅರಿಯಲು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿರುತ್ತಾರೆ. ವಾರಕ್ಕೆ ಇಷ್ಟು ಎಂದು ಸ್ಪರ್ಧಿಗಳಿಗೆ ಸಂಭಾವನೆ ಸಿಕ್ಕಿರುತ್ತದೆ.

Vijaya Karnataka Web 8 Jan 2020, 6:22 pm
'ಬಿಗ್ ಬಾಸ್ ಕನ್ನಡ ಸೀಸನ್ 7' ರಿಯಾಲಿಟಿ ಶೋದಲ್ಲಿ ಪಾಲ್ಗೊಂಡು ಗೆದ್ದರೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಸಿಗುತ್ತದೆ. ಹಣಕಾಸಿನ ಸಮಸ್ಯೆಗಳ ನಿವಾರಣೆಗಾಗಿಯೋ ಅಥವಾ ಪ್ರಾಮುಖ್ಯತೆ ಪಡೆಯಲೋ ಅಥವಾ ತಾವೇನು, ತಮ್ಮ ವ್ಯಕ್ತಿತ್ವ ಏನು ಎಂದು ಬೇರೆಯವರಿಗೆ ತಿಳಿಸಲೋ, ತಾವೇನು ಎಂಬುದನ್ನು ಅವರೇ ಅರಿಯಲು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿರುತ್ತಾರೆ. ವಾರಕ್ಕೆ ಇಷ್ಟು ಎಂದು ಸ್ಪರ್ಧಿಗಳಿಗೆ ಸಂಭಾವನೆ ಸಿಕ್ಕಿರುತ್ತದೆ.
Vijaya Karnataka Web chandana ananthakrishna remuneration in bigg boss kannada season 7
12ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನಾಗೆ ಸಿಕ್ಕ ಸಂಭಾವನೆ ಎಷ್ಟು?

84 ದಿನ ಬಿಗ್ ಬಾಸ್ ಮನೆಯಲ್ಲಿದ್ದ ಚಂದನಾ

ಕಳೆದ ಸೀಸನ್‌ನಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿತ್ತು, ಆದರೆ ಈ ಸೀಸನ್‌ನಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಳೆದ ವಾರ ಅಂದರೆ 12ನೇ ವಾರ ಬಿಗ್ ಬಾಸ್ ಮನೆಯಿಂದ ಚಂದನಾ ಅನಂತಕೃಷ್ಣ ತಮ್ಮ 84 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಹೋಗುವ ಮುಂಚೆಯೇ ಅವರು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ ರಾಣಿ' ಧಾರಾವಾಹಿಯಲ್ಲಿ ನಟಿಸಿದ್ದರು. ಹೀಗಾಗಿ ಒಂದುಮಟ್ಟದ ಖ್ಯಾತಿ ಚಂದನಾಗಿತ್ತು.

ಪ್ರತಿ ವಾರ ಚಂದನಾಗೆ ಸಿಗುತ್ತಿದ್ದ ಸಂಭಾವನೆ ಎಷ್ಟು?

ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನಾಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು? ಎಂಬ ಪ್ರಶ್ನೆ ಹಲವರಿಗೆ ಕಾಡಿರಬಹುದು. ಮೂಲಗಳ ಪ್ರಕಾರ ಚಂದನಾಗೆ ವಾರಕ್ಕೆ 59000 ರೂಪಾಯಿ ಸಿಕ್ಕಿದೆಯಂತೆ. ಆದರೆ ಈ ಬಗ್ಗೆ ಪ್ರೊಡಕ್ಷನ್ ಹೌಸ್‌ನವರಾಗಲೀ ಅಥವಾ ಚಂದನಾ ಆಗಲೀ ಇದರ ಬಗ್ಗೆ ಎಲ್ಲಿಯೂ ಹೇಳಿಲ್ಲ. 12 ವಾರ ಚಂದನಾ ಬಿಗ್ ಬಾಸ್ ಮನೆಯೊಳಗೆ ಇದ್ದರು. ವಾರಕ್ಕೆ 59 ಸಾವಿರ ರೂಪಾಯಿ ಹಣ ಸಿಕ್ಕಿದೆ ಎಂದಾದರೆ ಎಷ್ಟು ಹಣ ಸಿಕ್ಕಿದೆ ಎಂದು ನೀವೇ ಲೆಕ್ಕಹಾಕಿಕೊಳ್ಳಿ.

'ಕಪ್ಪುಚುಕ್ಕಿ' ಹಾಡು ಹಾಡಿ ಫೇಮಸ್ ಆದ ಚಂದನಾ

ಹಾಡು, ನೃತ್ಯದ ಮೂಲಕ ಚಂದನಾ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇವರ ವಿಚಾರದಲ್ಲಿ ಹೆಚ್ಚು ಅತ್ತಿದ್ದೇ ತುಂಬ ಸುದ್ದಿಯಾಯಿತು. ಈ ಬಾರಿಯ ಬಿಗ್ ಬಾಸ್‌ನಲ್ಲಿ ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ಚಂದನಾ ವಯಸ್ಸಿನಲ್ಲಿ ತುಂಬ ಚಿಕ್ಕವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ