ಆ್ಯಪ್ನಗರ

Bigg Boss 7 Kannada: ಸಂಚಲನ ಸೃಷ್ಟಿ ಮಾಡಿತು ಕಿಶನ್ ಮತ್ತು ದೀಪಿಕಾ ದಾಸ್ ಸ್ವಿಮ್ಮಿಂಗ್‌ಪೂಲ್‌ ರೋಮ್ಯಾಂಟಿಕ್ ಡಾನ್ಸ್

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ರೋಮ್ಯಾಂಟಿಕ್ ಆಗಿ ಡಾನ್ಸ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಈಗ ಕಿಶನ್ ಮತ್ತು ದೀಪಿಕಾ ದಾಸ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಡಾನ್ಸ್ ಮಾಡಿ ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೆ ಶಾಕ್ ನೀಡಿದ್ದಾರೆ.

Vijaya Karnataka Web 3 Jan 2020, 3:09 pm
ದೀಪಿಕಾ ತಾಯಿ ಬಿಗ್ ಬಾಸ್ ಮನೆಗೆ ಬಂದು ಮಗಳು ದೀಪಿಕಾಗೆ ಹುಷಾರಾಗಿರು, ನನ್ನ ಮರ್ಯಾದೆ ಉಳಿಸು ಅಂತೆಲ್ಲ ಎಚ್ಚರಿಕೆ ಕೊಟ್ಟುಹೋಗಿದ್ದರು. ಅವರು ಈ ರೀತಿ ಮಾತನಾಡಲು ಕಾರಣ ಶೈನ್ ಶೆಟ್ಟಿ ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಶೈನ್ ಶೆಟ್ಟಿ ಜೊತೆಗೆ ದೀಪಿಕಾ ತಾಯಿ ಪದ್ಮಾ ಸರಿಯಾಗಿ ಮಾತನಾಡಿಲ್ಲ.
Vijaya Karnataka Web deepika das and kishen bilagali dance in swimming pool bigg boss kannada season 7
Bigg Boss 7 Kannada: ಸಂಚಲನ ಸೃಷ್ಟಿ ಮಾಡಿತು ಕಿಶನ್ ಮತ್ತು ದೀಪಿಕಾ ದಾಸ್ ಸ್ವಿಮ್ಮಿಂಗ್‌ಪೂಲ್‌ ರೋಮ್ಯಾಂಟಿಕ್ ಡಾನ್ಸ್


ಶೈನ್ ಶೆಟ್ಟಿ ದೀಪಿಕಾ ಹಿಂದೆ ಬಿದ್ದಿರೋದೇಕೆ?

ಶೈನ್ ಶೆಟ್ಟಿ ಅವರು ಫೂಟೇಜ್ ಪಡೆದುಕೊಳ್ಳಲು ಅಥವಾ ಬಿಗ್ ಬಾಸ್ ಸೀಕ್ರೇಟ್ ಟಾಸ್ಕ್ ಆಧಾರದ ಮೇಲೋ ಅಥವಾ ತಮಾಷೆಗಾಗಿಯೋ ದೀಪಿಕಾ ದಾಸ್ ಪ್ರೀತಿ ಮಾಡುತ್ತಿರಬಹುದು. ಇದಕ್ಕೆ ನಿಜವಾದ ಕಾರಣವನ್ನು ಶೈನ್ ಶೆಟ್ಟಿಯೇ ಹೇಳಬೇಕು. ಆದರೆ ಶೈನ್ ಶೆಟ್ಟಿ ಈ ನಡವಳಿಕೆ ದೀಪಿಕಾ ಮತ್ತು ಶೈನ್ ಮಧ್ಯೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಹರಡಲು ದೊಡ್ಡ ಕಾರಣವಾಯಿತು. ಸುದೀಪ್ ನಿರೂಪರಣೆಯ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದೀಪಿಕಾ ತನ್ನನ್ನು ಇಷ್ಟಪಡುತ್ತಾರೆ ಎಂದು ಶೈನ್ ಶೆಟ್ಟಿ ಅತಿಯಾಗಿ ಈ ಹಿಂದೆಯೇ ಬಿಂಬಿಸಿದ್ದರು. ಶೈನ್ ಒಳ್ಳೆಯ ವ್ಯಕ್ತಿ, ಆದರೆ ನಾನು ಶೈನ್ ಅವರನ್ನು ಇಷ್ಟಪಡುತ್ತಿಲ್ಲ ಎಂದು ದೀಪಿಕಾ ಪ್ರೀತಿಯಿಂದ ನಗುನಗುತ್ತಲೇ ಹೇಳಿ ವಿರೋಧಿಸಿದ್ದರು.

"ನನ್ನ ಮರ್ಯಾದೆ ಉಳಿಸು" ಎಂದು ತಾಯಿ ಪದ್ಮಾ ದೀಪಿಕಾ ದಾಸ್ ಬಳಿ ಮನವಿ ಮಾಡಿದ್ದೇಕೆ?

ಸ್ವಿಮ್ಮಿಂಗ್‌ಫೂಲ್‌ನಲ್ಲಿ ಡಾನ್ಸ್ ಮಾಡಿದ ದೀಪಿಕಾ ಮತ್ತು ಕಿಶನ್

ಹೊಸ ವರ್ಷವನ್ನು ಬಿಗ್ ಬಾಸ್ ಸ್ಪರ್ಧಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಸ್ಕಿಟ್, ಡಾನ್ಸ್, ಹಾಡುಗಳು ಆ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಆದರೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು ದೀಪಿಕಾ ಮತ್ತು ಶೈನ್ ಶೆಟ್ಟಿ ಡಾನ್ಸ್. ಇವರಿಬ್ಬರ ರೋಮ್ಯಾಂಟಿಕ್ ಡಾನ್ಸ್ ಎಲ್ಲರ ಕಣ್ಣುಕುಕ್ಕುವಂತೆ ಮಾಡಿತ್ತು. ದೀಪಿಕಾ ತಾಯಿ ಪರೋಕ್ಷವಾಗಿ ಟಾಂಗ್ ಕೊಟ್ಟಮೇಲೂ ಇವರಿಬ್ಬರು ಡಾನ್ಸ್ ಮಾಡಿದ್ದಾರಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈ ನಡುವೆ ಕಿಶನ್ ಮತ್ತು ದೀಪಿಕಾ ದಾಸ್ "ಸ್ವಾತಿ ಮುತ್ತಿನ ಮಳೆ ಹನಿಯೇ" ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇವರಿಬ್ಬರ ರೋಮ್ಯಾಂಟಿಕ್ ಕುಣಿತ ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೇನೇ ಆಶ್ಚರ್ಯ ಉಂಟುಮಾಡಿಸಿದೆ. ಇಷ್ಟೊಂದು ಬೋಲ್ಡ್ ಆಗಿ ಡಾನ್ಸ್ ಮಾಡಿದ್ದನ್ನು ಕಂಡು ಪ್ರೇಕ್ಷಕರು ಕೂಡ ಕಂಗಾಲಾಗಿದ್ದಾರೆ. ಡಾನ್ಸ್ ಮಾಡಿದ್ದರೆ ಪರವಾಗಿರಲಿಲ್ಲ, ಸ್ವಿಮ್ಮಿಂಗ್‌ಪೂಲ್‌ಗೆ ಧುಮುಕಿ ಸ್ಟೆಪ್ ಹಾಕಿರೋದು ಸಾಕಷ್ಟು ಚರ್ಚೆಯಾಗುತ್ತಿದೆ. ನಾಳೆ ಎಲ್ಲರೂ ನಮ್ಮ ಡಾನ್ಸ್ ಬಗ್ಗೆಯೇ ಮಾತನಾಡುತ್ತಿರಬಹುದಲ್ಲವೇ? ಎಂದು ಸ್ವತಃ ದೀಪಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿರೋದು ವಿಶೇಷ.
Episode 82 Highlights: ಬಿಗ್ ಬಾಸ್ ಮನೆಯಲ್ಲಿ ವಿಲನ್ ಯಾರು ಗೊತ್ತಾ?
Episode 81 Highlights: ಶೈನ್ ಶೆಟ್ಟಿಗೆ ಕಣ್ಣಲ್ಲೇ ವಾರ್ನಿಂಗ್ ಕೊಟ್ರಾ ದೀಪಿಕಾ ತಾಯಿ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ