ಆ್ಯಪ್ನಗರ

BBK OTT: ನನ್ನಷ್ಟು ಯಾರೂ ಫ್ಲರ್ಟ್ ಮಾಡಿರಲ್ಲ, ನಾನು ಸಂಜಯ್ ದತ್ ಅವರನ್ನ ತುಂಬಾ ಫಾಲೋ ಮಾಡ್ತೀನಿ ಎಂದ ಅರ್ಜುನ್ ರಮೇಶ್!

‘’ನನ್ನ ಜೀವನದಲ್ಲಿ ನಾನು ಫ್ಲರ್ಟ್ ಮಾಡಿರೋಷ್ಟು ಬಹುಶಃ ಯಾರೂ ಮಾಡಿರೋಲ್ಲ. ನಂಬರ್ಸ್ ಇಲ್ಲ… ನಂಬರ್ಸ್ ಇಟ್ಟಿಲ್ಲ. ನಾನು ಸಂಜಯ್ ದತ್ ಅವರನ್ನ ತುಂಬಾ ಫಾಲೋ ಮಾಡ್ತೀನಿ. ಸಿನಿಮಾ ಅಷ್ಟೇ ಅಲ್ಲ.. ನನ್ನ ಲೈಫ್‌ನಲ್ಲೂ ಅವರನ್ನ ತುಂಬಾ ಫಾಲೋ ಮಾಡ್ತೀನಿ’’ ಎಂದಿದ್ದಾರೆ ನಟ ಅರ್ಜುನ್ ರಮೇಶ್

Authored byಹರ್ಷಿತಾ ಎನ್ | Vijaya Karnataka Web 9 Aug 2022, 5:59 pm

ಹೈಲೈಟ್ಸ್‌:

  • ‘ಬಿಗ್ ಬಾಸ್’ ಮನೆಯಲ್ಲಿ ಅರ್ಜುನ್ ರಮೇಶ್ ಸ್ಪರ್ಧಿ
  • ಎರಡು ಮದುವೆಯಾಗಿರುವ ನಟ ಅರ್ಜುನ್ ರಮೇಶ್
  • ಸಂಜಯ್ ದತ್ ಅವರನ್ನ ತುಂಬಾ ಫಾಲೋ ಮಾಡ್ತಾರಂತೆ ಅರ್ಜುನ್ ರಮೇಶ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web i have flirted with many i follow sanjay dutt says arjun ramesh in bigg boss kannada ott 1
BBK OTT: ನನ್ನಷ್ಟು ಯಾರೂ ಫ್ಲರ್ಟ್ ಮಾಡಿರಲ್ಲ, ನಾನು ಸಂಜಯ್ ದತ್ ಅವರನ್ನ ತುಂಬಾ ಫಾಲೋ ಮಾಡ್ತೀನಿ ಎಂದ ಅರ್ಜುನ್ ರಮೇಶ್!
ಬಾಲಿವುಡ್ ನಟ ಸಂಜಯ್ ದತ್ ಅವರಿಗೆ 308 ಗರ್ಲ್‌ ಫ್ರೆಂಡ್ಸ್ ಇದ್ದರಂತೆ. ಈ ವಿಚಾರ ಸಂಜಯ್ ದತ್ ಅವರ ಜೀವನಚರಿತ್ರೆ ಆಧಾರಿತ ‘ಸಂಜು’ ಸಿನಿಮಾದಲ್ಲಿ ಬಹಿರಂಗವಾಗಿತ್ತು. ಇದೀಗ ಸಂಜಯ್ ದತ್ ಅವರ ಬಗ್ಗೆ ಹೇಳುವುದಕ್ಕೂ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ಸಂಜಯ್ ದತ್ ಅವರ ಅಭಿಮಾನಿಯೊಬ್ಬರು ಈ ಬಾರಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದಾರೆ. ಅದ್ಯಾರು ಅಂದ್ರೆ.. ಕನ್ನಡ ನಟ ಅರ್ಜುನ್ ರಮೇಶ್..!
ಹೌದು.. ನಟ ಅರ್ಜುನ್ ರಮೇಶ್ ಅವರು ಸಂಜಯ್ ದತ್ ಅವರ ಅಭಿಮಾನಿಯಂತೆ. ಸಿನಿಮಾ ವಿಷಯ ಮಾತ್ರವಲ್ಲ.. ನಿಜ ಜೀವನದಲ್ಲೂ ಸಂಜಯ್ ದತ್ ಅವರನ್ನ ಅರ್ಜುನ್ ರಮೇಶ್ ತುಂಬಾ ಫಾಲೋ ಮಾಡುತ್ತಿದ್ದಾರಂತೆ..! ಹಾಗಂತ ಸ್ವತಃ ಅರ್ಜುನ್ ರಮೇಶ್ ‘ಬಿಗ್ ಬಾಸ್’ ಮನೆಯಲ್ಲಿ ಹೇಳಿದ್ದಾರೆ.

BBK OTT: ‘ನಿನ್ನ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳ್ತೀನಿ’: ಎರಡನೇ ಮದುವೆ ವಿಚಾರಕ್ಕೆ ಮೊದಲ ಪತ್ನಿ ಬಗ್ಗೆ ನಟ ಅರ್ಜುನ್ ರಮೇಶ್ ಮಾತು!
ಅರ್ಜುನ್ ರಮೇಶ್ ಹೇಳಿದ್ದೇನು?
‘’ನಾನು ಇಲ್ಲಿ (ಬಿಗ್ ಬಾಸ್ ಮನೆಯಲ್ಲಿ) ಎಮೋಷನಲಿ ತುಂಬಾ ಡೌನ್ ಇದ್ದೀನಿ. ಯಾಕೆ ಅಂದ್ರೆ, ನಾನು ನಿಂತ್ರೆ, ಕೂತ್ರೆ ಫ್ಯಾಮಿಲಿ ಇರಲೇಬೇಕು. ನಾನು ಈ (ಮೊದಲ ಪತ್ನಿ ಮನೆ) ಮನೆಯಲ್ಲಿ ಇರಲಿ, ಆ ಮನೆಯಲ್ಲಿ (ಎರಡನೇ ಪತ್ನಿ ಮನೆ) ಇರಲಿ… ನಾನು ಒಂದು ಪೆನ್ ಮರೆತಿದ್ದರೂ, ನನ್ನ ಹೆಂಡತಿಯರು ಜ್ಞಾಪಿಸುತ್ತಾರೆ. ನನ್ನ ಲೈಫ್ ಅವರಿಲ್ಲದೆ ಅಪೂರ್ಣ. ಕಳೆದ ಎರಡು ವರ್ಷಗಳಲ್ಲಿ ನನ್ನ ಲೈಫ್‌ನಲ್ಲಿ ತುಂಬಾ ಚೇಂಜಸ್ ಆಗಿದೆ’’

‘’ನಾನಿಲ್ಲಿಗೆ ಬರೋಕೆ ಮುಂಚೆ ಫ್ಲಾಟ್‌ನಲ್ಲಿ ಮಿಲನ್ (ಮೊದಲ ಹೆಂಡತಿ) ಮತ್ತು ರವಿಕಾ (ಎರಡನೇ ಪತ್ನಿ) ಅಳೋಕೆ ಶುರು ಮಾಡಿಬಿಟ್ಟರು. ಇಬ್ಬರ ಅಳು ನೋಡಿ ನನಗೆ ಈ ಶೋ ಬೇಡವೇ ಬೇಡ.. ನಾನು ಹೋಗೋದೇ ಇಲ್ಲ ಅಂದುಬಿಟ್ಟೆ. ಯಾಕಂದ್ರೆ, ಅವರಿಬ್ಬರಿಗೂ ನನ್ನ ಬಿಟ್ಟು ಪ್ರಪಂಚವೇ ಇಲ್ಲ. ನನಗೂ ಅವರಿಬ್ಬರನ್ನು ಬಿಟ್ಟರೆ ಪ್ರಪಂಚ ಇಲ್ಲ’’

Bigg Boss Kannada OTT: ಬಿಗ್ ಬಾಸ್ ಕನ್ನಡ ಓಟಿಟಿ ಶೋನ 13ನೇ ಸ್ಪರ್ಧಿ 'ನಾಗಿಣಿ' ಧಾರಾವಾಹಿ ನಟ ಅರ್ಜುನ್ ರಮೇಶ್
‘’ರವಿಕಾ ಅಂತೂ ಅವರಪ್ಪ, ಅಮ್ಮನಿಗೂ ಅಷ್ಟು ಕನೆಕ್ಟ್ ಆಗಿಲ್ಲ. ನನಗೆ ತುಂಬಾ ಕನೆಕ್ಟ್ ಆಗಿದ್ದಾಳೆ. ಆರು ವರ್ಷ ನನ್ನ ಬಿಟ್ಟು ಬೇರೆ ಪ್ರಪಂಚವನ್ನು ರವಿಕಾ ನೋಡಿಲ್ಲ’’

‘’ನನ್ನ ಜೀವನದಲ್ಲಿ ನಾನು ಫ್ಲರ್ಟ್ ಮಾಡಿರೋಷ್ಟು ಬಹುಶಃ ಯಾರೂ ಮಾಡಿರೋಲ್ಲ. ನಂಬರ್ಸ್ ಇಲ್ಲ… ನಂಬರ್ಸ್ ಇಟ್ಟಿಲ್ಲ. ನಾನು ಸಂಜಯ್ ದತ್ ಅವರನ್ನ ತುಂಬಾ ಫಾಲೋ ಮಾಡ್ತೀನಿ. ಸಿನಿಮಾ ಅಷ್ಟೇ ಅಲ್ಲ.. ನನ್ನ ಲೈಫ್‌ನಲ್ಲೂ ಅವರನ್ನ ತುಂಬಾ ಫಾಲೋ ಮಾಡ್ತೀನಿ. ಅದೆಲ್ಲಾ ವಿವರಿಸಿದರೆ ಜಾಸ್ತಿ ಆಗುತ್ತೆ’’

‘’ಹಾಗ್ನೋಡಿದ್ರೆ, ರವಿಕಾನ ನಾನು 6 ವರ್ಷ ಕತ್ತಲೆಯಲ್ಲೇ ಇಟ್ಟಿದ್ದೆ. ಹೊರಗೆ ಕರ್ಕೊಂಡು ಹೋಗ್ಬೇಕಾದರೆ.. ಯಾರಾದರೂ ನೋಡಿಬಿಟ್ಟರೆ, ಮಿಲನ್‌ಗೆ ಹೇಳಿಬಿಟ್ಟರೆ ಅಂತೆಲ್ಲಾ ಭಯದಲ್ಲೇ ಇದ್ದೆ. ಆಮೇಲೆ ಯೋಚನೆ ಮಾಡಿದೆ.. ನಾನು ಮಾಡ್ತಿರೋದು ತಪ್ಪು ಅಂತ ಗೊತ್ತಾಯಿತು.’’

‘’ರವಿಕಾ ಪೇರೆಂಟ್ಸ್ ಕೂಡ ‘’ನಿಮ್ಮ ಜೀವನಕ್ಕೆ ಅರ್ಥ ಏನು?’’ ಎಂದು ನನಗೆ ಪ್ರಶ್ನೆ ಮಾಡಿದ್ದರು. ಅದ್ಯಾವ ಘಳಿಗೆಯಲ್ಲಿ ನಾನು ನನ್ನ ಮಗನಿಗೆ ಶಿವಿನ್ (ರವಿಕಾ-ಅರ್ಜುನ್ ಪುತ್ರ) ಅಂತ ಹೆಸರಿಟ್ನೋ.. ಎಲ್ಲವೂ ಬದಲಾಗಿ ಹೋಯ್ತು. ಶಿವಿನ್ ಹುಟ್ಟಿದ ಮೂರನೇ ದಿವಸಕ್ಕೆ ನಾನು ಮಿಲನ್‌ಗೆ ಎಲ್ಲಾ ವಿಷಯ ಹೇಳಿಬಿಟ್ಟೆ. ‘’ಎರಡನೇ ಮದುವೆಯಾಗಿದೆ. ಮಗು ಹುಟ್ಟಿದೆ’’ ಅಂತ ಹೇಳಿದೆ. ಆಗ ಅವಳು ಹೇಳಿದ್ದು ಒಂದೇ ಮಾತು ‘’ಮಗುನ ನೋಡಬೇಕು’’ ಅಂತ. ಆಗ ಮನೆಗೆ ಕರ್ಕೊಂಡು ಹೋದೆ. ಶಿವಿನ್‌ನ ಅವತ್ತು ಮಿಲನ್ ತುಂಬಾ ಮುದ್ದಾಡಿದಳು. ಆಗಾಗ ವಿಡಿಯೋ ಕಾಲ್ ಮಾಡಿ ಶಿವಿನ್‌ನ ಮಿಲನ್‌ಗೆ ತೋರಿಸುತ್ತಿದ್ದೆ. ನಾನೀಗ ಶಿವಿನ್ ಕೈಯಲ್ಲಿ ಮಿಲನ್‌ಗೆ ಅಮ್ಮ ಅಂತ ಕರೆಯಿಸುತ್ತಿದ್ದೇನೆ, ರವಿಕಾಗೆ ಮಮ್ಮ ಅಂತ ಕರೆಯಿಸುತ್ತಿದ್ದೇನೆ’’ ಎಂದು ‘ಬಿಗ್ ಬಾಸ್’ ಮನೆಯಲ್ಲಿ ಅರ್ಜುನ್ ರಮೇಶ್ ಹೇಳಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ