ಆ್ಯಪ್ನಗರ

Kishen Bilagali Elimination: ಬಿಗ್ ಬಾಸ್ ಮನೆಯಲ್ಲಿ ಅನಿರೀಕ್ಷಿತ ಬೆಳವಣಿಗೆ, ಕಿಶನ್ ಬಿಳಗಲಿ ಔಟ್

ಒಟ್ಟು 98 ದಿನಗಳ ಪಯಣ ಮುಗಿಸಿದ್ದರೆ ಕಿಶನ್. ಇಷ್ಟು ದಿನ ಹೇಗೆ ಮುಗೀತು ಎಂಬುದೇ ಗೊತ್ತಾಗಲಿಲ್ಲ ಎಂದರು. ಬಿಗ್ ಬಾಸ್ ಮನೆಯಲ್ಲದ್ದಾಗ ಎಲ್ಲರಿಗೂ ಕಿಸ್ ಕೊಡುತ್ತಾ, ಪ್ರೀತಿಯಿಂದ ತಬ್ಬಿಕೊಳ್ಳುತ್ತಾ ಲೈವ್ಲಿಯಾಗಿ ಇರುತ್ತಿದ್ದ ಕಿಶನ್ ಆಟ ಇಂದಿಗೆ ಮುಗಿದಿದೆ.

Vijaya Karnataka Web 19 Jan 2020, 12:04 am

ಬಿಗ್ ಬಾಸ್ ಮನೆಯಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಈ ವಾರ ಡಬಲ್ ಎಲಿಮಿನೇಷನ್ ಇದ್ದು ಮನೆಯಿಂದ ಹೊರಬೀಳುವ ಇಬ್ಬರು ಸ್ಪರ್ಧಿಗಳು ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಎಲ್ಲರ ನಿರೀಕ್ಷೆ ಉಲ್ಟಾ ಆಗುವಂತೆ ಕಿಶನ್ ಬಿಳಗಲಿ ಮನೆಯಿಂದ ಹೊರಬಿದ್ದಿದ್ದಾರೆ. ಇನ್ನೊಬ್ಬರ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ.
Vijaya Karnataka Web ಕಿಶನ್ ಬೆಳಗಲಿ


ಬಿಗ್ ಬಾಸ್ ಮನೆಯಿಂದ ಹೊರಬಂದ ಕಿಶನ್. ವೇದಿಕೆಯಲ್ಲಿ ಸುದೀಪ್ ಜೊತೆಗೆ ಮಾತನಾಡುತ್ತಾ, "ಸ್ವಲ್ಪ ಬೇಜಾರುತ್ತಿದೆ. ಪ್ರತಿಯೊಂದು ದಿನವೂ ಚೆನ್ನಾಗಿ ಆಡಿದ್ದೀನಿ ಎಂಬ ಖುಷಿ ಇದೆ. ನನ್ನನ್ನು ನಾನೇ ಅರ್ಥ ಮಾಡಿಕೊಂಡೆ. ಕುಟುಂಬ ಅಂದ್ರೆ ಏನು ಅಂತ ಅರ್ಥವಾಯಿತು. ಬಿಗ್ ಬಸ್ ಮನೆಯಲ್ಲಿ ಮಾತನಾಡುವುದು ತುಂಬಾ ಮುಖ್ಯ ಅನ್ನಿಸುತ್ತದೆ. ಹೇಗೆ ಮಾತಾಡ್ತಾರೆ ಎಂಬುದು ಮುಖ್ಯ ಆಗುತ್ತದೆ. ಅದು ಶೈನ್ ಶೆಟ್ಟಿಗೆ ಗೊತ್ತಿತ್ತು ಎಂದರು.

ಒಟ್ಟು 98 ದಿನಗಳ ಪಯಣ ಮುಗಿಸಿದ್ದರೆ ಕಿಶನ್. ಇಷ್ಟು ದಿನ ಹೇಗೆ ಮುಗೀತು ಎಂಬುದೇ ಗೊತ್ತಾಗಲಿಲ್ಲ ಎಂದರು. ಬಿಗ್ ಬಾಸ್ ಮನೆಯಲ್ಲದ್ದಾಗ ಎಲ್ಲರಿಗೂ ಕಿಸ್ ಕೊಡುತ್ತಾ, ಪ್ರೀತಿಯಿಂದ ತಬ್ಬಿಕೊಳ್ಳುತ್ತಾ ಲೈವ್ಲಿಯಾಗಿ ಇರುತ್ತಿದ್ದ ಕಿಶನ್ ಆಟ ಇಂದಿಗೆ ಮುಗಿದಿದೆ. ಫಿಸಿಕಲ್ ಟಾಸ್ಕ್‌ಗಳಲ್ಲಿ ಸ್ವಲ್ಪ ರ್‍ಯಾಶ್ ಆಗಿ ಆಡಿ ಕೆಲವರಿಗೆ ಪೆಟ್ಟೂ ಆಗಿತ್ತು. ಸುಜಾತಾ, ಭೂಮಿ ಶೆಟ್ಟಿ, ರಾಜು ತಾಳಿಕೋಟಿ ಗಾಯಗೊಂಡಿದ್ದರು.
"15 ಹುಡುಗಿಯರು ಬೇಕು, ನಾನು ಅವರಿಗೆ 1 ಸಾವಿರ ಮುತ್ತು ಕೊಡ್ತೀನಿ" ಎಂದ ಬಿಗ್ ಬಾಸ್ ಕಿಶನ್ ಬಿಳಗಲಿ

ಈ ಮನೆಗೆ ಏನು ಬೇಕೋ ಅದನ್ನು ಹಂಡ್ರಡ್ ಪರ್ಸೆಂಟ್ ಕೊಟ್ಟಿದ್ದೀನಿ. ತುಂಬಾನೆ ಅಚೀವ್ ಮಾಡಿದ್ದೀನಿ. ರಿಗ್ರೇಟ್ ಇಲ್ಲ ಎಂದರು. ಮನೆಯಲ್ಲಿ ನಾನು ನಾನಾಗಿದ್ದೆ. ಪ್ರಾಮಾಣಿಕವಾಗಿದ್ದೆ. ಈ ಮನೆಯಲ್ಲಿ ನಾನು ಎಲ್ಲರಿಗೂ ಪ್ರೀತಿ ಕೊಟ್ಟಿದೀನಿ. ಆದರೆ ಅವರಿಂದ ಅಷ್ಟೇ ಪ್ರೀತಿ ಸಿಕ್ಕಿಲ್ಲ. ನಮ್ಮ ತಂದೆ ಬಂದಿದ್ದು ನನಗೆ ಖುಷಿ ಆಯ್ತು. ನನಗೆ ಬಟ್ಟೆ ಎಂದರೆ ಇಷ್ಟ ಎಂದಾಗ, ಪ್ರಿಯಾಂಕಾಗೆ ಜರ್ಕಿನ್ ಕೊಟ್ಟಾಗ ಎಮೋಷನಲ್ ಆದೆ ಎಂದಾಗ ವೇದಿಕೆ ಮೇಲೆ ತಾವು ತೊಟ್ಟಿದ್ದ ಜರ್ಕಿನ್ ಬಿಚ್ಚಿ ಕೊಟ್ಟರು ಸುದೀಪ್. ಬಳಿಕ ಕಿಶನ್ ತೊಟ್ಟಿದ್ದ ಜರ್ಕಿನ್ ಸುದೀಪ್ ಹಾಕಿಕೊಂಡರು. ಒಂದು ರೀತಿ ಇದು ಭಾವನಾತ್ಮಕವಾಗಿ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ