ಆ್ಯಪ್ನಗರ

ಕಿಶನ್‌ಗೆ ತಮ್ಮ ಜಾಕೆಟ್‌ ನೀಡಿದ 'ಕಿಚ್ಚ' ಸುದೀಪ್‌! ವೇದಿಕೆ ಮೇಲೆ ಭಾವುಕರಾದ 'ಕಿಸ್ಸಿಂಗ್ ಬಾಯ್‌'

'ಬಿಗ್ ಬಾಸ್' ಮನೆಯಲ್ಲಿನ 98 ದಿನಗಳ ಕಾಲ ಇದ್ದು, ಇನ್ನೇನು 15 ದಿನಗಳಲ್ಲಿ ಶೋ ಎಂಡ್‌ ಆಗಲಿದೆ ಎನ್ನುವಾಗ ಕಿಶನ್‌ ಮನೆಯಿಂದ ಹೊರನಡೆದಿದ್ದಾರೆ. ಹೌದು, ಈ ವಾರದ ಸಂಚಿಕೆಯಲ್ಲಿ ಕಿಶನ್‌ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ.

Vijaya Karnataka Web 19 Jan 2020, 9:02 pm
'ಬಿಗ್ ಬಾಸ್' ಮನೆಯಲ್ಲಿನ 98 ದಿನಗಳ ಕಾಲ ಇದ್ದು, ಇನ್ನೇನು 15 ದಿನಗಳಲ್ಲಿ ಶೋ ಎಂಡ್‌ ಆಗಲಿದೆ ಎನ್ನುವಾಗ ಕಿಶನ್‌ ಮನೆಯಿಂದ ಹೊರನಡೆದಿದ್ದಾರೆ. ಹೌದು, ಈ ವಾರದ ಸಂಚಿಕೆಯಲ್ಲಿ ಕಿಶನ್‌ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ. ಮೂಲತಃ ಡಾನ್ಸರ್ ಆಗಿರುವ ಕಿಶನ್‌, ಅಷ್ಟೇನು ಪರಿಚಿತರಾಗಿರಲಿಲ್ಲ. ಆದರೆ, ಬಿಗ್‌ ಬಾಸ್‌ ಮನೆಯಿಂದಾಗಿ ಅವರೀಗ ಜನಪ್ರಿಯ ಸೆಲೆಬ್ರಿಟಿ ಆಗಿದ್ದಾರೆ. ಸದ್ಯ ಮನೆಯಿಂದ ಹೊರಬಂದಿರುವ ಕಿಶನ್‌, ವೇದಿಕೆ ಮೇಲೆ ಸುದೀಪ್ ಜೊತೆ ಏನೆಲ್ಲ ಹಂಚಿಕೊಂಡಿದ್ದಾರೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
Vijaya Karnataka Web kishen bilagali shares his experience at bigg boss kannada season 7
ಕಿಶನ್‌ಗೆ ತಮ್ಮ ಜಾಕೆಟ್‌ ನೀಡಿದ 'ಕಿಚ್ಚ' ಸುದೀಪ್‌! ವೇದಿಕೆ ಮೇಲೆ ಭಾವುಕರಾದ 'ಕಿಸ್ಸಿಂಗ್ ಬಾಯ್‌'


​ಪ್ರತಿಬಾರಿಯೂ ಎಫರ್ಟ್ ಹಾಕಿದ್ದೇನೆ

ಕಿಶನ್ ಮನೆಯಲ್ಲಿ ಇದ್ದಷ್ಟು ದಿನವು ಬಹಳ ಶ್ರಮದಿಂದ ಟಾಸ್ಕ್‌ಗಳಲ್ಲಿ ಆಡಿದ್ದಾರೆ. 'ಪ್ರತಿ ದಿನವೂ ಪೂರ್ಣಪ್ರಮಾಣದ ಎಫರ್ಟ್ ಹಾಕಿ ಆಡಿದ್ದೇನೆ. ಆ ಬಗ್ಗೆ ನನಗೆ ತುಂಬ ಸಂತೋಷವಿದೆ. ತುಂಬ ಒಳ್ಳೆಯ ಅನುಭವ ಬಿಗ್ ಬಾಸ್ ಮನೆಯಿಂದ ನನಗೆ ಸಿಕ್ಕಿದೆ. ಈ ಶೋನಿಂದಾಗಿ ನಾನು ನನ್ನನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಯ್ತು. ಕುಟುಂಬ ಎಂದರೆ ಏನು ಅಂತ ಗೊತ್ತಾಯ್ತು' ಎಂದಿದ್ದಾರೆ ಕಿಶನ್.

​ಮನೆಯಲ್ಲಿ ಮಾತು ಮುಖ್ಯ

ಬಿಗ್‌ ಬಾಸ್ ಮನೆಯೊಳಗೆ ಇರುವವರು ಉತ್ತಮವಾಗಿ ಮಾತನಾಡುವುದು ಮುಖ್ಯ ಎಂಬುದು ಕಿಶನ್‌ ಅಭಿಪ್ರಾಯ. 'ಬಿಗ್‌ ಬಾಸ್ ಮನೇಲಿ ಮಾತು ತುಂಬ ಮುಖ್ಯ ಎನಿಸುತ್ತದೆ. ನಾವು ಹೇಳುವುದನ್ನು ಹೇಗೆ ಹೇಳ್ತಿವಿ ಅನ್ನೋದು ಮುಖ್ಯ. ಕೆಲ ಬಾರಿ ಅದು ತಪ್ಪಾಗಿ ಅರ್ಥ ಆಗಬಹದು. ಇನ್ನು, 98 ದಿನ ಹೇಗಾಯ್ತು ಅಂತಾನೇ ಗೊತ್ತಾಗಿಲ್ಲ. ಎಲ್ಲವು ತುಂಬ ಚೆನ್ನಾಗಿ ಮುಗಿದು ಹೋಯ್ತು' ಎಂದಿದ್ದಾರೆ ಕಿಶನ್‌.

​ಜಾಕೆಟ್‌ ಕೊಟ್ಟ ಕಿಚ್ಚ

ವೇದಿಕೆ ಮೇಲೆಯೇ ತಾವು ತೊಟ್ಟಿದ್ದ ಜಾಕೆಟ್‌ ಅನ್ನು ಸುದೀಪ್‌, ಕಿಶನ್‌ಗೆ ನೀಡಿದರು. ಆಗ ಕಿಶನ್ ಕ್ಷಣಕಾಲ ಭಾವುಕರಾದರು. ಇದೇ ವೇಳೆ ಇತರೆ ಸ್ಪರ್ಧಿಗಳಿಗೆ ಕಿಶನ್‌ ಕಿಸ್‌ ಕೊಡುವ ವಿಡಿಯೋ ಪ್ಲೇ ಮಾಡಲಾಯಿತು. ಆಗ ವೇದಿಕೆ ಮೇಲೆ ನಗು ಮನೆ ಮಾಡಿತ್ತು. 'ಇಷ್ಟು ದಿನ ಇಲ್ಲಿರ್ತಿನಿ ಅಂದುಕೊಂಡಿರಲಿಲ್ಲ. ಇಡೀ ತಂಡಕ್ಕೆ ಥ್ಯಾಂಕ್ಸ್. ನಾನು ತುಂಬ ಜನರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆ ಮೈಕ್‌ಅನ್ನು ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಕಿಶನ್ ಹೇಳಿದರು.

​ಶೈನ್ ವಿನ್ನರ್‌

ಮನೆಯಿಂದ ಹೊರಬಿದ್ದ ಕಿಶನ್‌ಗೆ ಸುದೀಪ್‌, ಮುಂದಿನ ಸಂಚಿಕೆಯಲ್ಲಿ ಯಾರು ಹೊರಹೋಗಬಹುದು ಎಂದು ಕೇಳಿದರು. ಅದಕ್ಕೆ 'ಹರೀಶ್ ರಾಜ್' ಎಂಬ ಉತ್ತರ ಕಿಶನ್ ಕಡೆಯಿಂದ ಬಂತು. ಜೊತೆಗೆ ಟಾಪ್‌ 3 ಸ್ಪರ್ಧಿಗಳಾಗಿ ಕುರಿ ಪ್ರತಾಪ್, ಶೈನ್‌ ಶೆಟ್ಟಿ, ವಾಸುಕಿ ವೈಭವ್ ಅವರು ಬರಬಹುದು. ಅದರಲ್ಲಿ ಶೈನ್ ವಿನ್ ಆಗಬಹುದು ಎಂಬುದು ಕಿಶನ್‌ ಊಹೆ ಆಗಿದೆ.

​ಭಾವುಕರಾದ ಕಿಶನ್‌

ಕಿಶನ್‌ ವೇದಿಕೆಗೆ ಬರುತ್ತಿದ್ದಂತೆಯೇ 98 ದಿನ ಬಿಗ್‌ ಬಾಸ್ ಮನೆಯಲ್ಲಿ ಕಳೆದ ಕ್ಷಣಗಳ ವಿಡಿಯೋ ಪ್ರದರ್ಶನ ಮಾಡಲಾಯಿತು. ಆಗ ಕಿಶನ್ ಭಾವುಕರಾದರು. 'ರೇಸ್‌ನಲ್ಲಿ ಇನ್ನುಳಿದವರು ಮುಂದಿದ್ದಾರೆ. ನಾನು ನನ್ನ ಪ್ರಯತ್ನ ಮಾಡಿದ್ದೇನೆ. ಮನೆಯಲ್ಲಿ ನಾನು ತುಂಬ ಚೆನ್ನಾಗಿ ಪ್ರೀತಿ ನೀಡಿದ್ದೇನೆ. ಜೊತೆಗೆ ಮಂಗಾಟಗಳು ಜಾಸ್ತಿ ಆಗಿದ್ದವು' ಎಂದಿದ್ದಾರೆ ಕಿಶನ್‌.

Youtube-Who are Bigg Boss Kannada Season 7 Finale Contestants ? | Who Will Win Bigg Boss ? | Vijay Karnataka

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ