ಆ್ಯಪ್ನಗರ

"15 ಹುಡುಗಿಯರು ಬೇಕು, ನಾನು ಅವರಿಗೆ 1 ಸಾವಿರ ಮುತ್ತು ಕೊಡ್ತೀನಿ" ಎಂದ ಬಿಗ್ ಬಾಸ್ ಕಿಶನ್ ಬಿಳಗಲಿ

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ-ಪ್ರೇಮ-ಮುತ್ತಿನ ಕಥೆ ಎಲ್ಲ ಸೀಸನ್‌ಗಳಲ್ಲೂ ಇರುತ್ತದೆ. ಅಂತೇಯೇ ಈ ಬಾರಿ ಕಿಶನ್ ಇರೋ ಬರೋ ಹುಡುಗಿಯರಿಗೆಲ್ಲ ಮುತ್ತು ನೀಡುತ್ತಿರುವುದು ಗೊತ್ತೇ ಇದೆ. ಹಾಗೆಯೇ ಈಗ ಕಿಶನ್ ಆಡಿದ ಮಾತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.

Vijaya Karnataka Web 25 Dec 2019, 3:17 pm
ಬಿಗ್ ಬಾಸ್‌ನಲ್ಲಿ ಕಿಶನ್ ಮುತ್ತಿಗೆ ಹೆಸರಾಗಿದ್ದಾರೆ. ಪ್ರತಿಯೊಬ್ಬರು ಹೇಳೋದು ಕಿಶನ್ ಮುತ್ತಿನ ಬಗ್ಗೆಯೇ. ಚಂದನಾ, ದೀಪಿಕಾ, ಭೂಮಿ ಶೆಟ್ಟಿಗೂ ಕೂಡ ಬಲವಂತವಾಗಿ ಯಾಮಾರಿಸಿ ಕಿಶನ್ ಮುತ್ತು ನೀಡಿದ್ದಾರೆ. ಯಾವಾಗಲೂ ಮುತ್ತಿನ ಬಗ್ಗೆಯೇ ಕಿಶನ್ ಯೋಚನೆ ಮಾಡುತ್ತಿರುತ್ತಾರೆ, ರಾಜು ತಾಳಿಕೋಟೆಗೂ ಕೂಡ ಮುತ್ತು ಕೊಟ್ಟಿದ್ದರು ಕಿಶನ್.
Vijaya Karnataka Web kishen want girls and kiss in bigg boss house
"15 ಹುಡುಗಿಯರು ಬೇಕು, ನಾನು ಅವರಿಗೆ 1 ಸಾವಿರ ಮುತ್ತು ಕೊಡ್ತೀನಿ" ಎಂದ ಬಿಗ್ ಬಾಸ್ ಕಿಶನ್ ಬಿಳಗಲಿ


ರಕ್ಷಾ ಸೋಮಶೇಖರ್ ಮತ್ತು ಕಿಶನ್ ನಡುವೆ ಈ ಹಿಂದೆ ಲವ್ ಬ್ರೇಕಪ್ ಆಗಿರುವಂತೆ ನಾಟಕವಾಡಿ ಎಂದು ಬಿಗ್ ಬಾಸ್ ಸೀಕ್ರೇಟ್ ಟಾಸ್ಕ್ ನೀಡಿದ್ದರು. ಆ ಸಮಯದಲ್ಲಿ ಪ್ರಿಯಾಂಕಾ ಅವರು ಕಿಶನ್ ನಡವಳಿಕೆ ನೋಡಿ ಒಬ್ಬರನ್ನೇ ಮದುವೆಯಾಗಿ ಚೆನ್ನಾಗಿರು ಎಂದಿದ್ದರು.

ರಕ್ಷಾ ಟೈಮ್‌ಸ್ಪೆಂಡ್‌ ಮಾಡೋಕೆ ಓಕೆ ಎಂದಿದ್ದ ಕಿಶನ್
ಅಷ್ಟೇ ಅಲ್ಲದೆ ಆ ಟೈಮ್‌ಲ್ಲಿ ಕಿಶನ್‌ ಅವರಿಗೆ ನಿನಗೆ ಯಾರು ಬೇಕು ಅಂತ ಹೇಳು, ಮದುವೆ ಮಾಡಸ್ತೀನಿ ಎಂದಿದ್ದರು ಪ್ರಿಯಾಂಕಾ. ಆಗ ಕಿಶನ್‌ ನನಗೆ ರಕ್ಷಾ ಬೇಕು, ಆದರೆ ಇದಕ್ಕೆ ರಕ್ಷಾ ಓಕೆ ಎನ್ನಬೇಕು ಎಂದಿದ್ದಾರೆ. ಇವರೊಬ್ಬರೇನಾ ಲೈಫ್‌ಗೆ? ಇವರು ಬಿಟ್ರೆ ಬೇರೆ ಯಾರು ಬೇಡವಾ? ಅಂತ ಮರು ಪ್ರಶ್ನಿಸಿದ್ದರು ಪ್ರಿಯಾಂಕಾ. ಲೈಫ್‌ಗಲ್ಲ, ಟೈಮ್‌ಸ್ಪೆಂಡ್‌ ಮಾಡಿದ ನಂತರ ಒಳ್ಳೆಯದು ಆದ್ರೆ ಲೈಫ್‌ಗೆ ಎಂದಿದ್ದಾರೆ ಕಿಶನ್. ಈ ಮಾತು ಸ್ವಲ್ಪ ಚರ್ಚೆಗೆ ಒಳಪಟ್ಟಿತ್ತು. ಪ್ರೀತಿಯಾದ್ರೆ ಈಗಲೇ ಓಕೆ, ಮದುವೆ ಅಂದ್ರೆ ಬೇಡ ಎನ್ನುವಂತಿತ್ತು ಕಿಶನ್ ಮಾತಿನ ತಾತ್ಪರ್ಯ.

ಮುತ್ತು ಕೋಡೋದೆ ಕಿಶನ್‌ ಕಾಯಕ

ಪ್ರೀತಿ ಸಿಗುತ್ತಿಲ್ಲ ಎಂದ ವಾಸುಕಿ ವೈಭವ್
ತೆಂಗಿನಕಾಯಿ ಸಿಪ್ಪೆ ಸುಲಿಯುವ ಟಾಸ್ಕ್‌ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಲಾಗಿತ್ತು. ಆ ಸಮಯದಲ್ಲಿ ಮರದ ಕೆಳಗೆ ಕೂತಿದ್ದ ಕಿಶನ್ 'ಅನಾಥ ಮಗುವಾದೆ..ಅಪ್ಪನೂ ..ಅಮ್ಮನೂ ಇಲ್ಲ' ಎಂದು ಹಾಡು ಹಾಡಿದ್ದಾರೆ. "ಕಾಯಿನೂ ಇಲ್ಲ, ಗೋಣಿಚೀಲವೂ ಇಲ್ಲ, ಪ್ರೀತಿಯೂ ಹುಡುಗಿಯೂ ಇಲ್ಲ, ಏನು ಮಾಡೋಕೂ ಇಲ್ಲ" ಎಂದು ಕಿಶನ್ ಹಾಡು ಹಾಡಿದ್ದಾರೆ. ಆ ಸಮಯದಲ್ಲಿ ಅರ್ಧಂಬರ್ಧ ತೆಲುಗಿನಲ್ಲಿ ಮಾತನಾಡುತ್ತ ಬಂದ ಹರೀಶ್ ರಾಜ್ ಅವರು "ಏನು ಬೇಕು, ನಾನು ಇದ್ದೇನೆ, ಕೊಡ್ತೀನಿ, ಏನು ಪ್ರೀತಿ ಬೇಕೋ ಹೇಳು, ಆ ಪ್ರೀತಿ ನಾನು ಕೊಡ್ತೀನಿ" ಎಂದಿದ್ದಾರೆ.

ಹಲವಾರು ಹುಡುಗೀರ ಜೊತೆಗೆ ಡೇಟಿಂಗ್

15 ಹುಡುಗಿಯರು ಬೇಕು, 1 ಸಾವಿರ ಮುತ್ತು ಬೇಕು ಎಂದ ಕಿಶನ್
ಆಗ ಕಿಶನ್ "15 ಹುಡುಗಿಯರು ಬೇಕು, ನಾನು ಅವರಿಗೆ 1 ಸಾವಿರ ಮುತ್ತು ಕೊಡ್ತೀನಿ, ಅವರು ನನಗೆ ಪುನಃ ವಾಪಸ್ ಕೊಡಬೇಕು" ಎಂದಿದ್ದಾರೆ ಕಿಶನ್. ಆಗ ಹರೀಶ್ ರಾಜ್ ಅವರು ಬಿಗ್ ಬಾಸ್ ಮನೆಯ ಟ್ರಾನ್ಸ್‌ಪೋರ್ಟ್ ಕಂಪೆನಿ ಕಿಶನ್ ಎಂದಿದ್ದಾರೆ. ಆ ಸಂದರ್ಭದಲ್ಲಿ ಮಾತನಾಡಿದ ಚಂದನ್ "ನಮಗೆ ಕಾಯಿ ಚಿಂತೆ ಆದ್ರೆ, ನಮ್ಮ ಕ್ಯಾಪ್ಟನ್‌ಗೆ ಬೇರೆಯದ್ದೇ ಚಿಂತೆ" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ