ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಬಳಸಿದ ಪದ ಬಳಕೆಗೆ ಎಲ್ಲೆಡೆ ಆಕ್ರೋಶ; ಟ್ರೋಲ್ ಪೇಜ್‌ಗಳಿಗೆ ಆಹಾರವಾದ ವಾಸುಕಿ

ವಾಸುಕಿ ವೈಭವ್ ಬಿಗ್ ಬಾಸ್ ಮನೆಯಲ್ಲಿ ಆಡಿದ ಮಾತು ಈಗ ಹಲವರ ಟೀಕೆಗೆ ಗುರಿಯಾಗಿದೆ. ವಾಸುಕಿ ಬಾಯಿಂದ ಇಂಥ ಮಾತು ಹೊರಬರುತ್ತೆ ಎಂದು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಹಾಗಾದರೆ ವಾಸುಕಿ ವೈಭವ್ ಹೇಳಿದ ಮಾತು ಏನು? ಏಕೆ?

Vijaya Karnataka Web 1 Jan 2020, 7:19 pm
ವಾಸುಕಿ ವೈಭವ್ "ಮನಸಿಂದ ಯಾರೂನೂ ಕೆಟ್ಟೋರಲ್ಲ" ಎಂದು ಹಾಡನ್ನು ಬರೆದು ಕಿಚ್ಚ ಸುದೀಪ್‌ ಸೇರಿ ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡಿದ್ದರು. ಈಗಾಗಲೇ ಬಿಗ್ ಬಾಸ್‌ ಮನೆಯಲ್ಲಿಯೇ ಕುಳಿತು ಸಾಕಷ್ಟು ಹಾಡುಗಳ ಸಾಹಿತ್ಯ ಬರೆದು, ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಆದರೆ ಅದೇ ಮನೆಯಲ್ಲಿ ಕುಳಿತು ವಾಸುಕಿ ಆಡಿದ ಮಾತು ಸಾಕಷ್ಟು ವ್ಯಾಪಕ ಟೀಕೆಗೆ ಒಳಗಾಗಿದೆ. ಟ್ರೋಲ್‌ ಪೇಜ್‌ಗಳು ಕೂಡ ವಾಸುಕಿ ಮಾತನ್ನು ಖಂಡಿಸುತ್ತಿವೆ, ಆ ಮಾತಿಗೆ ತಕ್ಕ ಟಾಂಗ್ ಕೊಡುತ್ತಿವೆ.
Vijaya Karnataka Web netizens oppose vasuki vaibhav for using bad word in bigg boss kannada season 7
ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಬಳಸಿದ ಪದ ಬಳಕೆಗೆ ಎಲ್ಲೆಡೆ ಆಕ್ರೋಶ; ಟ್ರೋಲ್ ಪೇಜ್‌ಗಳಿಗೆ ಆಹಾರವಾದ ವಾಸುಕಿ


ವಾಸುಕಿ ವೈಭವ್‌ರಿಂದ ಈ ಮಾತನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ..
ವಾಸುಕಿ ವೈಭವ್ ಅವರು ಶೈನ್ ಶೆಟ್ಟಿ, ಭೂಮಿ, ಚಂದನಾ ಜೊತೆ ಕುಳಿತು ಮಾತನಾಡುವಾಗ ಚಂದನ್ ಆಚಾರ್‌ಗೆ ಮೆಟ್ ಮೆಟ್‌ನಲ್ಲಿ ಹೊಡೆದು ಎಬ್ಬಿಸುತ್ತೇನೆ ಎಂದಿದ್ದರು. ಈ ಮಾತಿಗೆ ಈಗ ಎಲ್ಲೆಡೆ ವಿರೋಧ ಕೇಳಿಬರುತ್ತಿದೆ. "ಮನಸಿಂದ ಯಾರೂನೂ ಕೆಟ್ಟೋರಲ್ಲ" ಎಂದು ಜಗತ್ತಿಗೆ ತತ್ವ ಹೇಳಿದ, ಕಿವಿಮಾತು ಹೇಳಿದ ವಾಸುಕಿ ಬಾಯಿಂದ ಇಂಥ ಮಾತು ಬರುತ್ತದೆ ಎಂದು ಯಾರೂ ಕೂಡ ಬಹುಶಃ ಊಹಿಸಲಿಕ್ಕಿರಲಿಲ್ಲ.

Episode 79 Highlights: ಚಂದನ್‌ಗೆ ಮೆಟ್ ಮೆಟ್‌ನಲ್ಲಿ ಒಡೆದು ಎಬ್ಬಿಸುತ್ತೀನಿ ಎಂದ ವಾಸುಕಿ

View this post on Instagram biggboss updates only Follow👉 @bigbosskannada7_official For more Updates Follow Now ❤️ ________________________________________ #biggboss #biggbosskannada #shrutiprakash #chandanshetty #ashikaranganath #kannadamovies #kannadafilmindustry #rachitaram #rashmikamandanna #kicchasudeep #rockingstaryash #puneethrajkumar #kannadaactress #tollywood #instagram #bollywood #cutipie #mylove #kgf #bbk7 #BBK7 #BiggBoss #ColorsKannada A post shared by ಬಿಗ್ ಬಾಸ್ ಕನ್ನಡ 👁️ 🔵 (@bigbosskannada7.official) on Dec 31, 2019 at 5:40am PST

ವಾಸುಕಿ ಬಾಯಲ್ಲಿ ಇಂಥ ಮಾತು ಬಂದಿದ್ದೇಕೆ?

ಶೈನ್ ಶೆಟ್ಟಿ, ವಾಸುಕಿ ವೈಭವ್, ಭೂಮಿ ಶೆಟ್ಟಿ, ಚಂದನಾ ಈ ನಾಲ್ವರು ಬಾತ್‌ರೂಮ್ ಏರಿಯಾದಲ್ಲಿ ಮಾತನಾಡುತ್ತಿದ್ದರು. ಆಗ ವಾಸುಕಿ ವೈಭವ್ ಅವರು ಚಂದನ್ ಎಲ್ಲಿ? ಬಾತ್‌ರೂಮ್ ತೊಳಿಬೇಕಿತ್ತು ನಾವು ಅವರೆಲ್ಲಿ? ಎಂದಿದ್ದಾರೆ. ಆಗ ಭೂಮಿ ಶೆಟ್ಟಿ ಚಂದನ್ ಮಲಗಿರಬೇಕು ಎಂದಿದ್ದಾರೆ. ಆಗ ವಾಸುಕಿ ವೈಭವ್ ಅವರು ಮೆಟ್‌ ಮೆಟ್‌ಲ್ಲಿ ಹೊಡೆದು ಎಬ್ಬಿಸ್ತೀನಿ ಎಂದಿದ್ದಾರೆ. ಅರ್ಧ ಗಂಟೆಯಲ್ಲಿ ಬರ್ತೀನಿ ಎಂದ ಚಂದನ್ ಬಂದಿಲ್ಲ, ಕಿಶನ್‌ಗೆ ಅವರು ಸಿಕ್ಕಾಪಟ್ಟೆ ಟಾಂಗ್ ಕೊಡುತ್ತಿದ್ದಾರೆ. ಚಂದನ್ ಎಲ್ಲರಿಗೂ ಆವಾಗಾವಾಗ ಟಾಂಗ್ ಕೊಡ್ತಾ ಇರ್ತಾನೆ, ಗ್ಯಾಪ್‌ ಅಲ್ಲಿ ಹಾಡಿಕೊಂಡು ಹೋಗ್ತಾನೆ. ಆ ಹಾಡನ್ನು ಕೇಳಿದ್ರೆ ಮೂರು ದಿನ ಬಾತ್‌ರೂಮ್‌ಗೆ ಹೋಗೋದಿಲ್ಲ,ಚೈತ್ರಾ ಕೋಟೂರ್ ನಂತರ ಆ ರೀತಿ ಮಾತಾಡುತ್ತಿರುವವರು ಅಂದರೆ ಚಂದನ್ ಎಂದಿದ್ದಾರೆ ಶೈನ್. ಆಗ ಚಂದನಾ ಕೂಡ ಇದನ್ನು ಒಪ್ಪಿದ್ದಲ್ಲದೆ ಅವರ ಡೈಲಾಗ್‌ ಕೂಡ ಭಾರೀ ಇರುತ್ತವೆ ಎಂದಿದ್ದಾರೆ.
View this post on Instagram Opkothiraa...😂🤘🏻 Follow @biggbosskannada.trolls_7 for more posts #deepikadas #kishen #kuriprathap #kiccha #kicchasudeep #shineshetty #vasukivaibhav #harishraj #priyanka #chaitrakootor #chandanachar #chandana #bbk7 #biggbosskannada #bhoomishetty #biggbosstrolls #bbk #rashmikamandanna #vijaydevarakonda A post shared by Biggbosskannada.trolls_7 (@biggbosskannada.trolls_7) on Dec 31, 2019 at 10:21pm PST
View this post on Instagram #arumuga😎. #BBK7 #BiggBoss #asn Follow Us Exclusive Bbk Updates #biggbosskannada #bbk7 #colourskannada #biggbosskannadaseason7 #biggboss#biggbosskannadaofficial #BBK7 #BiggBoss #ColorsKannada #watchthispace #biggbosskannada #bbk7 #biggbosskannadaseason7 #biggboss#biggbosskannadaofficial7 #sandalwoodadda #ashikarangnath #RachitaRam #kannada #sandalwoodactress #nabhanatesh #Gorgeous #SouthIndian #Karnataka #KannadaActress #Indian #payalsharma #Tollywood #TollywoodActress #sandalwood #teluguactress #Mysore A post shared by ಬಿಗ್ ಬಾಸ್ ಕನ್ನಡ_s7🖊️ (@biggbosskannada_s7) on Dec 30, 2019 at 8:38am PST

ಚಂದನಾ ಹಾಟ್ ಲುಕ್ ಬಗ್ಗೆ ಮಾತನಾಡಿದ ವಾಸುಕಿ ವೈಭವ್; ಸ್ವತಃ ಐ ಆಮ್ ಬ್ಯಾಡ್ ಎಂದ ವಾಸುಕಿ
ಶೈನ್ ಹೇಳಿದ ಕಥೆ ಕೇಳಿ ಎಲ್ಲರೂ ಕಣ್ಣೀರು ಹಾಕಿದ್ರು! ಆ ನೋವಿನ ಕಹಾನಿಯಲ್ಲೂ ಇದೆ ಜೀವನ ಪಾಠ!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ