ಆ್ಯಪ್ನಗರ

'ಬಿಗ್ ಬಾಸ್' ಮನೆಯಿಂದ ಆಚೆ ಬಂದಮೇಲೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಜೀವ್!

ಬಿಗ್ ಬಾಸ್ ಕನ್ನಡ ಸೀಸನ್ 8ರ ಪ್ರಬಲ ಸ್ಪರ್ಧಿಯೆಂದೇ ರಾಜೀವ್ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅವರು ಕೆಲ ವಾರಗಳ ಹಿಂದಷ್ಟೇ ಮನೆಯಿಂದ ಎಲಿಮಿನೇಟ್‌ ಆದರು. ಆನಂತರ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 9 May 2021, 8:59 pm

ಹೈಲೈಟ್ಸ್‌:

  • ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಗಯಾಗಿ ಹೊರಹೊಮ್ಮಿದ್ದ ರಾಜೀವ್
  • ಕೆಲವು ವಾರಗಳ ಹಿಂದಷ್ಟೇ ರಾಜೀವ್ ಎಲಿಮಿನೇಷನ್‌ ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು!
  • ಮನೆಯಿಂದ ಆಚೆ ಬಂದಮೇಲೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಾಜೀವ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rajeev
ಈ ಬಾರಿಯ 'ಬಿಗ್ ಬಾಸ್' ಶೋನಲ್ಲಿ ಸಖತ್ ಜನಪ್ರಿಯರಾಗಿದ್ದ ಸ್ಪರ್ಧಿಗಳಲ್ಲಿ ರಾಜೀವ್ ಕೂಡ ಒಬ್ಬರು. ಅವರನ್ನು ಟಾಪ್‌ 5ರಲ್ಲಿ ನೋಡಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಯಾಕೆಂದರೆ, ಟಾಸ್ಕ್‌ ಸೇರಿದಂತೆ ಎಲ್ಲ ವಿಚಾರದಲ್ಲೂ ಅವರು ಸದಾ ಮುಂದಿರುತ್ತಿದ್ದರು. ಆದರೆ, ಅವರನ್ನು ಕೆಲ ವಾರಗಳ ಹಿಂದೆ ಮನೆಯಿಂದ ಎಲಿಮಿನೇಟ್ ಮಾಡಲಾಗಿತ್ತು. ಮನೆಯಿಂದ ಆಚೆ ಬಂದ ಬಳಿಕ ರಾಜೀವ್ ಯಾರ ಕೈಗೂ ಸಿಕ್ಕಿರಲಿಲ್ಲ, ಯವುದೇ ರೀತಿ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಿಗ್ ಬಾಸ್ ಅರ್ಧಕ್ಕೆ ಸ್ಥಗಿತಗೊಳ್ಳುತ್ತಿರುವುದರ ಕುರಿತು ಎಮೋಷನಲ್ ಆಗಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಬಿಗ್ ಬಾಸ್ ನಿಂತಿದ್ದು ಬೇಜಾರ್ ಆಯ್ತು!
'ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರಿಗೆ ಕನ್ನಡಿಗನಾದ ರಾಜೀವನ ನಮಸ್ಕಾರ, ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಲೂ ಇಷ್ಟು ಬೇಜಾರಾಗಿರಲಿಲ್ಲ. ಆದರೆ ಇವತ್ತು ಬಿಗ್ ಬಾಸ್‌ ಕಾರ್ಯಕ್ರಮವೇ ನಿಂತುಹೋಗಿರುವುದು ತುಂಬಾ ಬೇಜಾರ್ ಆಗ್ತಿದೆ. ಎಲ್ಲೋ ಒಂದು ಕಡೆ ನನ್ನ ಪಾಡಿಗೆ ನಾನಿದ್ದೆ. ನನ್ನನ್ನು ಸ್ವಾಗತಿಸಿ, ಗೌರವಿಸಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಇವತ್ತು ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳ ಅಭಿಮಾನಕ್ಕೆ ಒಳಗಾಗುವಂತೆ ಮಾಡಿದ್ದಾರೆ, ಇದಕ್ಕೆ ನಾನೆಂದಿಗೂ ಆಭಾರಿ' ಎಂದು ರಾಜೀವ್ ಹೇಳಿದ್ದಾರೆ.

ಬಿಗ್ ಬಾಸ್ ಶೋ ಹೊಗಳಿದ ರಾಜೀವ್
'ಅದೆಷ್ಟೋ ಪ್ರತಿಭೆಗಳನ್ನು ಹುಡುಕಿ, ಗುರುತಿಸಿ, ಸಾಧನೆಯ ಹಾದಿಯಲ್ಲಿ ಮೆರೆಸಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಕೂರಿಸಿ, ಅಚ್ಚಳಿಯದ ಉತ್ತುಂಗಕ್ಕೆ ಏರಿಸಿ, ಸಂಭ್ರಮಪಡುವ ಬಿಗ್ ಬಾಸ್‌ನಂತಹ ಕಾರ್ಯಕ್ರಮದಲ್ಲಿ, ನನ್ನ ಹೆಜ್ಜೆಯ ಗುರುತುಗಳು ಸಹ ಆ ಮನೆಯಲ್ಲಿ ಓಡಾಡಿರುವುದನ್ನು ನೆನೆದು ನಾನು ಕಾಲಕಾಲಕ್ಕೂ ಹೆಮ್ಮೆಪಡುತ್ತೇನೆ, ನನ್ನನ್ನು ತಮ್ಮನಿಗಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿನಯ ಚಕ್ರವರ್ತಿ ಕನ್ನಡಗರ ಆಸ್ತಿ 'ಕಿಚ್ಚ ಸುದೀಪ್ ಅವರಿಗೆ ನನ್ನ ಹೃದಯಾಳದ ವಂದನೆಗಳು. ನನ್ನನ್ನು ಹ೦ಬಲದಿಂದ ಸದಾ ಬೆ೦ಬಲಿಸುವ ಪರಮ್ ಸರ್ ಅವರಿಗೆ ಪ್ರೀತಿಯ ಅಪ್ಪುಗೆ, ಕಲರ್ಸ್ ವಾಹಿನಿಯ ಮೂಲಕ ಮನೆ ಮನೆಯಲ್ಲೂ ಮನೆ ಮಾತಾಗಲು ಕಾರಣವಾದ ಪ್ರತಿಯೊಬ್ಬ ಕಾರ್ಮಿಕ ಹಾಗೂ ತಂತ್ರಜ್ಞರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು' ಎಂದು ಹೇಳಿದ್ದಾರೆ ಅವರು.

ಸ್ಪರ್ಧಿಗಳೆಲ್ಲಾ 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಡಲು 'ಕೌಂಟ್‌ಡೌನ್' ಶುರು!

ಜನರೇ ನನ್ನ ಸರ್ವಸ್ವ,
'ಮನೆಯಲ್ಲಿ ಇದ್ದ ಪ್ರತಿಯೊಂದು ದಿನವು ನನ್ನನ್ನು ಪ್ರೀತಿಯಿಂದ ನಡೆಸಿಕೊಂಡು ಬ೦ದಿದ್ದಾರೆ. ಮನೆಯಿಂದ ನನ್ನನ್ನು ಹೊರಗೆ ಕಳಿಸುವಾಗಲು ಅವರ ಔಪಚಾರಿಕತೆಯ ಬೀಳ್ಕೊಡುಗೆಯನ್ನು ಕೊಟ್ಟು ಗೌರವಯುತವಾಗಿ ನನ್ನನ್ನು ಕಳಿಸಿಕೊಡುವ ಉದ್ದೇಶ ಅವರದ್ದಾಗಿತ್ತು. ಆದರೆ ಸುದೀಪ್ ಸರ್ ಅವರ ಅನುಪಸ್ಥಿತಿ ಹಾಗೂ ನನ್ನ ಮನಸ್ಥಿತಿ ಎರಡು ಸದ್ದಿಲ್ಲದೇ ನನ್ನನ್ನು ಸ್ತಬ್ಧನಾಗುವಂತೆ ಮಾಡಿತ್ತು. ಮೊದಲಿಗೆ ನನ್ನ ಅಭಿಮಾನಿಗಳ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಮನೆಯಿಂದ ಹೊರಗೆ ಬಂದಮೇಲೆ, ಯಾರ ಕಣ್ಣಿಗೂ ಕಾಣಿಸದೇ, ಯಾವ ಚಾನಲ್‌ಗೂ ಸಿಗದೆ, ಸಂದರ್ಶನ ಕೊಡದೆ ಇದ್ದ ಒಂದೇ ಕಾರಣ, ಕೊರೊನಾದಿಂದ ಇಡೀ ದೇಶವೇ ಕಣ್ಣೀರಿನಲ್ಲಿ ತತ್ತರಿಸುತ್ತಿರುವಾಗ ನಾನು ಮಾತ್ರ ಹೇಗೆ ನೆಮ್ಮದಿಯಾಗಿರಲು ಸಾಧ್ಯ? ಪರಿಸ್ಥಿತಿ ಎಲ್ಲವೂ ಸರಿಯಾಗಲಿ, ನನ್ನನ್ನು ನೆಚ್ಚಿಕೊ೦ಡ, ಮೆಚ್ಚಿಕೊಂಡ ಪ್ರತಿಯೊಬ್ಬ ಅಭಿಮಾನಿಯನ್ನು ಮುಖಾಮುಖೀ ಭೇಟಿಯಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜನರಿಗಾಗಿ ನಾನು, ಜನರಿಂದಲೇ ನಾನು, ಜನರೇ ನನ್ನ ಸರ್ವಸ್ವ, ಜನರೇ ನನ್ನ ಮೊದಲ ಆದ್ಯತೆ. ನಿಮ್ಮ ಮನೆಯವನಂತೆ ನನ್ನನ್ನು ಪ್ರೀತಿಸಿದ್ದೀರಿ ನಿಮ್ಮ ಪ್ರೀತಿಗೆ ನಾನು ಎಂದಿಗೂ ಚಿರಋಣಿ. ನಿಮ್ಮ ಮನದಲ್ಲಿ ನಾನು, ನನ್ನ ಉಸಿರುಸಿರಲು ನೀವು... ಸದಾ ಪ್ರೀತಿಯಿ೦ದ ನಿಮ್ಮ ರಾಜೀವ' ಎಂದು ಅವರು ಪೋಸ್ಟ್ ಮಾಡಿದ್ದಾರೆ.

'ಬಿಗ್ ಬಾಸ್ 8' ಶೋಗೆ ತೆರೆ: ಮನದಾಳದ ಮಾತು ಹಂಚಿಕೊಂಡ 'ಒಳ್ಳೇ ಹುಡುಗ' ಪ್ರಥಮ್‌!

View this post on Instagram A post shared by Rajeev Hanu (@rajeevhanuofficial)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ