ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲಿ ಚಂದನಾ ತಲೆಯಿಟ್ಟು ಒರಗಿ ಅಳೋದಿದ್ರೆ ವಾಸುಕಿ ವೈಭವ್ ಭುಜ ಫ್ರೀ ಇರತ್ತಂತೆ; ವಿಡಿಯೋ ನೋಡಿ

ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಶೀತಲ ಸಮರ ಸಣ್ಣದಾಗಿ ಶುರುವಾಗುತ್ತಿದೆ. ಈ ನಡುವೆ ವಾಸುಕಿ ವೈಭವ್ ಆಡಿದ ಮಾತಿನ ಬಗ್ಗೆ ವೀಕ್ಷಕರು ಬಗೆಬಗೆಯ ರೀತಿಯಲ್ಲಿ ಕಾಮೆಂಟ್ ಬಂದಿವೆ, ಅವು ಇಲ್ಲಿವೆ ನೋಡಿ

Vijaya Karnataka Web 15 Oct 2019, 8:07 pm
ಬಿಗ್‌ ಬಾಸ್ ಮನೆಯಲ್ಲಿ ಸೀಸನ್ 7 ಸ್ಪರ್ಧಿಗಳು ಎರಡು ದಿನ ಕಳೆದಿದ್ದಾರೆ. ಎಲಿಮಿನೇಶನ್ ನಾಮಿನೇಟ್ ಕೂಡ ಮಾಡಿದ್ದಾರೆ. ಎಲಿಮಿನೇಶನ್‌ನಲ್ಲಿ ನಾಮಿನೇಟ್ ಮಾಡಲು ಸ್ಪರ್ಧಿಗಳು ನೀಡಿದ ಕಾರಣ ಕೇಳಿದರೆ ಶೀತಲ ಸಮರ ನಡೆಯುವ ಸೂಚನೆ ಕಾಣಿಸುತ್ತಿದೆ. ಕೆಲವರ ಬಿಹೇವಿಯರ್ ಇನ್ನೊಬ್ಬರಿಗೆ ಇಷ್ಟವಾಗುತ್ತಿಲ್ಲ. ಒಬ್ಬರನ್ನು ಇನ್ನೊಬ್ಬರು ಮಾತನಾಡಿಸಲು ಅಹಂ ಅಡ್ಡಿಯಾಗುತ್ತಿದೆ. ಗೊರಕೆ ಕೆಲವರಿಗೆ ನಿದ್ದೆಗೆ ಅಡ್ಡಿಯಾಗುತ್ತಿದೆ. ಈ ಮಧ್ಯೆ ಚಂದನಾಗೆ ಮನೆಯ ನೆನಪಾಗುತ್ತಿದೆಯಂತೆ.
Vijaya Karnataka Web bigg boss 7


ಚಂದನಾ ಮತ್ತು ವಾಸುಕಿ ನಡುವೆ ನಡೆದ ಸಂಭಾಷಣೆ ಏನು?
ಇಂದು ಪ್ರಸಾರವಾಗುವ ಎಪಿಸೋಡ್‌ನಲ್ಲಿ ಚಂದನಾ ಸ್ವಲ್ಪ ಡಲ್ ಆಗಿ ಕಾಣಿಸುತ್ತಿದ್ದಾರೆ. ಇದಕ್ಕೆ ಹರೀಶ್ ರಾಜ್ ಕಾರಣ ಕೇಳಿದ್ದಾರೆ. ಆಗ ಚಂದನಾ ಮನೆಯ ನೆನಪಾಗುತ್ತಿದೆ ಎಂದಿದ್ದಾರೆ. ಚಂದನಾ ಹೀಗಂದಾಗ ವಾಸುಕಿ"ಭುಜ ಫ್ರಿ ಆಗಿದೆ, ಯಾವಾಗಾದ್ರೂ ತಲೆ ಇಟ್ಕೊಳ್ಳಿ" ಎಂದು ವಾಸುಕಿ ವೈಭವ್ ಹೇಳಿದ್ದಾರೆ. ಆಗ ಚಂದನಾ ನಗುತ್ತ ತಲೆ ಆಡಿಸಿದ್ದಾರೆ. ಈ ವಿಡಿಯೋವನ್ನು ಕಲರ್ಸ್ ವಾಹಿನಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ.

ಬಗೆ ಬಗೆಯ ಕಾಮೆಂಟ್ ಬಂತು ವಾಸುಕಿ ಮಾತಿಗೆ

ಈ ವಿಡಿಯೋ ನೋಡಿ ಹಲವರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರದು ಒಳ್ಳೆಯ ಜೋಡಿ, ಇನ್ಮೇಲೆ ಪ್ರೇಮ ಕಥೆ ಶುರು, ಚಂದನಾ ತುಂಬ ಸ್ಟ್ರಾಂಗ್ ಹುಡುಗಿ, ಇಂಥ ಚಿಕ್ಕ ವಿಷಯಗಳಿಗೆ ಅವಳು ಬೇಸರ ಮಾಡಿಕೊಳ್ಳೋದಿಲ್ಲ ಅಂತ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. " ಹಾಗಾದ್ರೆ ದಸರಾ ವೇದಿಕೆ ನಿಮ್ದೇ, ಈ ರೀತಿ ಹೇಳಿದ್ರೆ 8ರಿಂದ ಒಂಭತ್ತು ವಾರ ಬಿಗ್ ಬಾಸ್ ಮನೆಯಲ್ಲಿ ಇರಬಹುದು ಅಂತ ಪ್ಲ್ಯಾನ್ ಇರಬಹುದು, ಭುಜಾನೇನಾ ಖಾಲಿ ಇರೋದು ಏನೂ ಇಲ್ವಾ ಪಾ, ವಯಸ್ಕರ ಚಿತ್ರ ಫ್ರೀ ಆಗಿ" ಅಂತೆಲ್ಲ ಕಾಮೆಂಟ್ ಬಂದಿವೆ.

Bigg Boss Episode 1; ಖ್ಯಾತ ಕಲಾವಿದ ರಾಜು ತಾಳಿಕೋಟೆ ಬಗ್ಗೆ ರವಿ ಬೆಳಗೆರೆ ಇಂಥ ಮಾತು ಹೇಳಿದ್ರಾ!! ಪ್ರೇಕ್ಷಕರು ಗರಂ!

ಚಂದನಾ ಮತ್ತು ವಾಸುಕಿ ವೈಭವ್ ಹಿನ್ನಲೆ ಏನು?
ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಚಂದನಾ ತುಂಬ ಚಿಕ್ಕವರು. 'ರಾಜಾ ರಾಣಿ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದವರು. ಒಳ್ಳೆಯ ಸಿಂಗರ್, ಡಾನ್ಸರ್ ಕೂಡ ಹೌದು ಚಂದನಾ. ವಾಸುಕಿ ವೈಭವ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮುಂದೆ ಬಿಗ್‌ ಬಾಸ್‌ ಮನೆಯಲ್ಲಿ ಇಂತಹ ಘಟನೆಗಳು ಯಾವ ಸ್ವರೂಪ ಪಡೆದುಕೊಳ್ಳುತ್ತವೆಯೋ, ಗೊತ್ತಿಲ್ಲ.

Episode 1 Highlights: ಮೊದಲ ದಿನವೇ ಸ್ವಾಮೀಜಿ ಅಸಹನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ