ಆ್ಯಪ್ನಗರ

ಬಿಗ್‌ಬಾಸ್ ಗೆಲ್ಲೋದಿಕ್ಕೆ ಹೊಸ ಸ್ಪರ್ಧಿಗಳಿಗೆ ಸುದ್ದಿಗೋಷ್ಠಿಯಲ್ಲಿ ಟಿಪ್ಸ್ ಕೊಟ್ಟ ಸುದೀಪ್

ಕಿರುತೆರೆ ಲೋಕದಲ್ಲಿ 'ಬಿಗ್‌ಬಾಸ್' ರಿಯಾಲಿಟಿ ಶೋ ತನ್ನದೇ ಆದ ಛಾಪು ಮೂಡಿಸಿದೆ. ಈಗ 'ಬಿಗ್ ಬಾಸ್ ಕನ್ನಡ ಸೀಸನ್ 7' ಅಕ್ಟೋಬರ್ 13ರಿಂದ ಪ್ರಸಾರವಾಗಿದೆ. ಇದರ ನಿರೂಪಕ ಸುದೀಪ್ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Vijaya Karnataka Web 10 Oct 2019, 9:13 pm
ಬಿಗ್‌ಬಾಸ್ ಕನ್ನಡ ಸೀಸನ್ 7' ಅಕ್ಟೋಬರ್‌ 20ರಿಂದ ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ಕೂಡ ಬಂದಿದೆ. ಬಿಗ್‌ಬಾಸ್‌ ಬಗ್ಗೆ ಕೆಲವರಿಗೆ ಹಲವು ಪ್ರಶ್ನೆಗಳಿರುತ್ತವೆ. ಕೆಲ ಕುತೂಹಲಕಾರಿ ಪ್ರಶ್ನೆಗಳಿಗೆ ಸುದೀಪ್ ಹೇಳಿದ್ದೇನು?
Vijaya Karnataka Web sudeep tweet


ಯಾವ ಸೀಸನ್ ಸ್ಪರ್ಧಿಗಳು ನಿಮಗೆ ತುಂಬ ಇಷ್ಟ? ಬಿಗ್‌ಬಾಸ್ ಗೆಲ್ಲೋದಿಕ್ಕೆ ಟಿಪ್ಸ್ ಕೊಟ್ಟ ಕಿಚ್ಚ
ಮೊದಲ ಸೀಸನ್ ಸ್ಪರ್ಧಿಗಳು ನನಗೆ ಇಷ್ಟ. ಯಾಕೆಂದರೆ ಅವರು ತುಂಬ ಮುಗ್ಧರಾಗಿದ್ದರು. ಆ ಕಾರಣಕ್ಕಾಗಿಯೇ ಆ ಸೀಸನ್ ಚೆನ್ನಾಗಿ ಮೂಡಿಬಂತು. ನಂತರದ ಸೀಸನ್‌ಗಳಲ್ಲಿ ಭಾಗವಹಿಸಿದವರು ಇನ್ನೊಬ್ಬರನ್ನು ಅನುಕರಿಸಲು ಶುರು ಮಾಡಿದರು. ಅದು ನನಗೆ ಇಷ್ಟ ಆಗಲಿಲ್ಲ. ಯಾರೋ ಗೆದ್ದರು ಅಂತ ಅವರನ್ನು ಅನುಕರಿಸಬೇಡಿ, ಪ್ರಭಾವಿತರಾಗಬೇಡಿ. ನಾವು ಹಾಗಿದ್ರೆ ಗೆಲ್ತೀವಿ, ಹೀಗಿದ್ರೆ ಗೆಲ್ತೀವಿ ಅನ್ನೊದು ಸುಳ್ಳು. ಹೀಗೆ ಮಾಡಿದರೆ ಬಿಗ್‌ಬಾಸ್ ಗೆಲ್ಲಲಾಗೋದಿಲ್ಲ. ನೀವು ನೀವಾಗಿರಿ, ನಿಮ್ಮ ಹೊಸತನ ನೋಡಿ ಜನರು ಇಷ್ಟಪಡ್ತಾರೆ, ವೋಟ್ ಮಾಡ್ತಾರೆ.

ಕಳೆದ ಬಿಗ್‌ಬಾಸ್‌ ಸೀಸನ್‌ ಕಿಚ್ಚನಿಗೆ ಎಂಜಾಯ್ ಮಾಡುವಂತಿರಲಿಲ್ಲ; ಸುದ್ದಿಗೋಷ್ಠಿಯಲ್ಲಿ ಕಾರಣ ಬಿಚ್ಚಿಟ್ಟ ಸುದೀಪ್

ಅಂಬರೀಶ್ ಅವರು ನಿಧನದ ಸುದ್ದಿ ನಾನು ವೇದಿಕೆ ಮೇಲಿದ್ದಾಗ ಬಂದಿತ್ತು. ನಾನು ಶೂಟಿಂಗ್ ಮಾಡಲಿಲ್ಲ ಅಂದ್ರೆ ಕಷ್ಟ ಆಗ್ತಿತ್ತು. ಬೇರೆ ದಾರಿ ಇರಲಿಲ್ಲ. ಆದರೂ ನನ್ನ ಹತ್ತಿರ ನಿರೂಪಣೆ ಮಾಡಲಾಗಲಿಲ್ಲ. ಮಾಮನ ಸುದ್ದಿ ಕೇಳಿ ಶಾಕ್ ಆಗಿದ್ದೆ. ಹೀಗಾಗಿ ಒಂದು ಭಾನುವಾರ ನಿರೂಪಣೆ ಮಾಡಲಾಗಲಿಲ್ಲ. ಆ ಸುದ್ದಿ ತುಂಬ ವಾರಗಳ ಕಾಲ ನನಗೆ ಭಾವನಾತ್ಮಕವಾಗಿ ಬೇಸರ ತಂದಿತು.

ಬಿಗ್‌ಬಾಸ್‌ಗೆ ಸುದೀಪ್ ಅವರೇ ಯಾಕೆ ನಿರೂಪಕರಾಗಬೇಕು ಎನ್ನೋದಿಕ್ಕೆ ಪರಮೇಶ್ವರ್ ಗುಂಡ್ಕಲ್ ನೀಡಿದ್ರು 7 ಕಾರಣ

ಹೊಸ ಬಿಗ್‌ಬಾಸ್ ಮನೆ ನೋಡಿದ್ರಾ?

ಅಪರೂಪಕ್ಕೆ ನಮ್ಮ ಜೆ.ಪಿ.ನಗರದ ಮನೆಗೆ ಬಂದಿದ್ದೇನೆ. ಬಿಗ್‌ಬಾಸ್ ಮನೆಗೆ ಈಗಲೇ ಹೋಗಿಲ್ಲ. ಈ ಮನೆ ಬಹಳ ದೂರ. ಬಿಗ್‌ಬಾಸ್ ಮನೆಗೆ ಬನ್ನಿ, ಎಷ್ಟು ಸ್ರಿಫ್ಟ್? ಎಷ್ಟು ಸ್ಕ್ರಿಫ್ಟ್ ಅಲ್ಲ ಎಂದು ಗೊತ್ತಾಗತ್ತೆ. ಹೊರಗಡೆಯಿಂದ ನೋಡಿದಾಗ ಎಲ್ಲವೂ ಸರಿ ಕಾಣಿಸುತ್ತದೆ. ಸ್ಪರ್ಧಿಗಳ ಕಿರಿಕ್‌ ಇರುತ್ತವೆ. ಬಿಗ್‌ಬಾಸ್‌ ಮನೆ ಕೇವಲ ಮನೆಯಲ್ಲ.

ಮೊಟ್ಟ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಬಿಗ್‌ಬಾಸ್' ನೋಡೋ ಅವಕಾಶ!! 'ಬಿಗ್‌ಬಾಸ್' ನೀಡಿದ ಬಿಗ್ ಬ್ರೇಕಿಂಗ್ ನ್ಯೂಸ್‌ ಏನು?

ಬಿಗ್‌ಬಾಸ್‌ ಮನೆಯಿಂದ ಸುದೀಪ್ ಕಲಿತಿದ್ದೇನು?
ನನಗೇ ಗೊತ್ತಿಲ್ಲದಂತೆ ಬಿಗ್‌ಬಾಸ್‌ನಿಂದ ನನ್ನ ಬದುಕಿನಲ್ಲಿ ಹಲವು ಬದಲಾವಣೆ ಆಗಿದೆ. ತಾಳ್ಮೆ ಕಲಿಸಿದೆ. ಅನಿರೀಕ್ಷಿತ ಸಂದರ್ಭಗಳನ್ನು ಹೇಗೆ ನಿಭಾಯಿದಬೇಕು ಎಂಬುದನ್ನು ಈ ಕಾರ್ಯಕ್ರಮ ನನಗೆ ಕಲಿಸಿದೆ.
ಮೊಟ್ಟ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಬಿಗ್‌ಬಾಸ್' ನೋಡೋ ಅವಕಾಶ!! 'ಬಿಗ್‌ಬಾಸ್' ನೀಡಿದ ಬಿಗ್ ಬ್ರೇಕಿಂಗ್ ನ್ಯೂಸ್‌ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ