ಆ್ಯಪ್ನಗರ

ಮುಖವಾಡ ಧರಿಸಿ ದೊಡ್ಮನೆಗೆ ಎಂಟ್ರಿ ಕೊಟ್ರಾ 'ಬಿಗ್‌ಬಾಸ್‌'? ಅವರು ಯಾರು ಅಂತ ಗೊತ್ತಾದರೆ ಅಚ್ಚರಿ ಆಗೋದು ಖಚಿತ!

ಕಿರುತೆರೆ ಪ್ರೇಕ್ಷಕರನ್ನು ಮನರಂಜಿಸುತ್ತಿರುವ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ದಿನಕ್ಕೊಂದು ಟ್ವಿಸ್ಟ್‌ ಇದ್ದೇ ಇರುತ್ತದೆ. ಈಗ ದೊಡ್ಮನೆಯೊಳಗೊಬ್ಬ ಬಿಗ್‌ಬಾಸ್‌ ಎಂಟ್ರಿ ಕೊಟ್ಟಿದ್ದಾರೆ. ಆ ಬಿಗ್‌ಬಾಸ್ ಯಾರು?

Vijaya Karnataka Web 24 Dec 2019, 8:23 pm
ಬಿಗ್‌ಬಾಸ್‌ನಲ್ಲಿ ನೇರವಾಗಿ ಸ್ಪರ್ಧಿಸುವವರು ಮಾತ್ರವಲ್ಲದೆ, ಆಗೊಮ್ಮೆ ಈಗೊಮ್ಮೆ ವಿಶೇಷ ಅತಿಥಿಗಳೂ ದೊಡ್ಮನೆಯಲ್ಲಿ ಕಾಣಿಸಿಕೊಳ್ಳುವುದುಂಟು. ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ನೀಡುವವರ ಬಗ್ಗೆ ವೀಕ್ಷಕರ ಮನದಲ್ಲಿ ಸದಾ ಕೌತುಕ ಮೂಡಿರುತ್ತದೆ. ಅದೇ ರೀತಿ ಈಗೊಬ್ಬರು ವಿಶೇಷ ವ್ಯಕ್ತಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ನೇರವಾಗಿ ದರ್ಶನ ನೀಡಿಲ್ಲ.
Vijaya Karnataka Web ಸುದೀಪ್‌


ಯಾರಿಗೂ ಗೊತ್ತಾಗದ ರೀತಿಯಲ್ಲಿ ಜೋಕರ್‌ನ ಮುಖವಾಡ ಧರಿಸಿ ದೊಡ್ಮನೆ ಪ್ರವೇಶಿಸಿದ್ದಾರೆ. ಅವರು ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಸೃಷ್ಟಿಯಾಗಿದೆ. ಪ್ರತಿ ಎಪಿಸೋಡ್‌ನ ವಿಶೇಷತೆಗಳ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಪ್ರೊಮೋ ಹಂಚಿಕೊಳ್ಳುತ್ತದೆ. ಅದರಲ್ಲಿ ಕಾಣಿಸಿರುವಂತೆ ಈಗ ಬಿಗ್‌ಬಾಸ್‌ ಮನೆಯಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಜಾತ್ರೆಯ ರೀತಿಯಲ್ಲಿ ಸೆಟ್‌ ಹಾಕಲಾಗಿದ್ದು, ಅದರಲ್ಲಿ ಮನೆಯ ಎಲ್ಲ ಸದಸ್ಯರು ಎಂಜಾಯ್‌ ಮಾಡಿದ್ದಾರೆ.

ಹಲವು ಬಗೆಯ ಆಟವಾಡಿ, ಹಾಡಿ-ನಲಿದು ಕುಪ್ಪಳಿಸಿದ್ದಾರೆ. ಅವರ ನಡುವೆ ಜೋಕರ್‌ ವೇಷ ಧರಿಸಿದ ವ್ಯಕ್ತಿಯೊಬ್ಬರು ಹೈಲೈಟ್‌ ಆಗಿದ್ದಾರೆ. ಸ್ಪರ್ಧಿಗಳೊಂದಿಗೆ ಬೆರೆತು ವಾತಾವರಣದ ರಂಗೇರಿಸಿದ್ದಾರೆ. ಆದರೆ ಅವರು ಯಾರು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಜೋಕರ್‌ ಮುಖವಾಡದ ಒಳಗಿರುವ ಆ ವ್ಯಕ್ತಿಯ ಎತ್ತರ ಗಮನಿಸಿದರೆ ಅದು 'ಕಿಚ್ಚ' ಸುದೀಪ್‌ ಆಗಿರಬಹುದು ಎಂಬ ಗುಮಾನಿ ವೀಕ್ಷಕರಲ್ಲಿ ಮೂಡಿದೆ. ಇಂದಿನ ಎಪಿಸೋಡ್‌ನಲ್ಲಿ ಆ ಮುಖವಾಡ ಬಯಲಾಗಲಿದ್ದು, ಸ್ಪರ್ಧಿಗಳಿಗೆಲ್ಲ ಅಚ್ಚರಿಯೋ ಅಚ್ಚರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ