ಆ್ಯಪ್ನಗರ

'ಬಿಗ್‌ಬಾಸ್‌ ಕನ್ನಡ 7'ಕ್ಕೆ ಬರುವ ಮೊದಲ ಸ್ಪರ್ಧಿ ಇವರೇ ಅನ್ನೋದು ಫಿಕ್ಸ್!

ಅಕ್ಟೋಬರ್ 13ಕ್ಕೆ 'ಬಿಗ್‌ಬಾಸ್‌ ಕನ್ನಡ ಸೀಸನ್ 7' ಶುರುವಾಗುತ್ತಿದೆ. ಸಂಜೆ ಆರು ಗಂಟೆಗೆ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ವೇಳೆ ಬಿಗ್‌ಬಾಸ್‌ಗೆ ಹೋಗುವ ಮೊದಲನೇ ವ್ಯಕ್ತಿ ಯಾರು ಎಂದು ಬಹುತೇಕ ಕನ್ಫರ್ಮ ಆಗಿದೆ.

Vijaya Karnataka Web 12 Oct 2019, 8:06 pm
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹಾಕಿರುವ ಫೇಸ್‌ಬುಕ್ ಸ್ಟೇಟಸ್ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Vijaya Karnataka Web bigg boss

"ಪ್ರಿಯರೆ, ನಾನು ಕೆಲವಷ್ಟು ದಿನಗಳ ತನಕ ನಿಗೂಢ ಲೋಕಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಕೆಲಕಾಲ ನಾನು ಫೋನ್‌ಗೆ, ಫೇಸ್‌ಬುಕ್‌ಗೆ ಆಫೀಸಿನಲ್ಲಿನ ಭೇಟಿಗೆ ಸಿಗುವುದಿಲ್ಲ. ನಿಗೂಢವಾಸ ಮುಗಿದಮೇಲೆ ಸಿಗುತ್ತೇನೆ" ಎಂದಿದ್ದಾರೆ ರವಿ ಬೆಳಗೆರೆ. ಅಷ್ಟೇ ಅಲ್ಲದೆ ಈ ಪೋಸ್ಟ್ ಈಗ ಡಿಲೀಟ್ ಮಾಡಿದ್ದಾರೆ ರವಿ.

'ಕಿಚ್ಚ' ಸುದೀಪ್‌ ಸಾರಥ್ಯದ 'ಬಿಗ್‌ಬಾಸ್‌'ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

ಅಷ್ಟಕ್ಕೂ ರವಿ ಬೆಳಗೆರೆ ಹೋಗುತ್ತಿರುವುದೆಲ್ಲಿಗೆ? ಜೋಯಿಡಾದ ಎಸ್ಟೇಟ್‌ಗೆ ರವಿ ಹೋಗುತ್ತಿದ್ದಾರಾ? ಗೊತ್ತಿಲ್ಲ. ಕೆಲ ದಿನಗಳಿಂದ ರವಿ ಬೆಳಗೆರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 7ಗೆ ಹೋಗುತ್ತಾರೆ ಎಂದು ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಸಾಕಷ್ಟು ಚರ್ಚೆಗಳಾಗಿದ್ದವು. ಈ ಫೇಸ್‌ಬುಕ್ ಪೋಸ್ಟ್ ನೋಡಿದಮೇಲೆ ರವಿ ಬೆಳಗೆರೆ ಬಿಗ್‌ಬಾಸ್‌ಗೆ ಹೋಗೋದು ಪಕ್ಕಾ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಎಲ್ಲ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ಅಕ್ಟೋಬರ್ 13ರಂದು ಸಂಜೆ ಆರು ಗಂಟೆಗೆ ಬಿಗ್‌ಬಾಸ್‌ ಈ ಬಾರಿಯ ಸೀಸನ್‌ನ ಗ್ರ್ಯಾಂಡ್ ಓಪನಿಂಗ್ ಶುರುವಾಗಲಿದೆ. ಎಂದಿನಂತೆ ಸುದೀಪ್ ಕೂಡ ಈ ಬಾರಿ ನಿರೂಪಕರಾಗಿತ್ತಾರೆ. ಬಿಗ್‌ ಮನೆಯೊಳಗಡೆ 17ಮಂದಿ ಸೆಲೆಬ್ರಿಟಿಗಳು ಪ್ರವೇಶ ಮಾಡುತ್ತಾರೆ. ಬಿಡದಿ ಬಳಿಯಿರುವ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್‌ಬಾಸ್ ಮನೆಯಿದೆ. ಆ 17ಸ್ಪರ್ಧಿಗಳಾರು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ, ಅಷ್ಟೇ ಅಲ್ಲದೆ ಕೆಲ ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೂಡ ಕೇಳಿಬರುತ್ತಿದೆ.

ಬಿಗ್ ಬಾಸ್ ಮನೆಗೆ 'ಹಾಯ್' ಹೇಳಲಿದ್ದಾರಾ ಈ ಖ್ಯಾತ ಪತ್ರಕರ್ತ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ