ಆ್ಯಪ್ನಗರ

ರಾಧಾ ಕೃಷ್ಣ ಧಾರಾವಾಹಿಯ ಕೃಷ್ಣನನ್ನು ಹುಡುಕಿ ದೆಹಲಿಗೆ ಹೊರಟ ಬೆಂಗಳೂರಿನ 8ನೇ ತರಗತಿ ವಿದ್ಯಾರ್ಥಿನಿ!

ಕಲಾವಿದರು ಮಾಡುವ ಪಾತ್ರಗಳನ್ನು ಪಾತ್ರಗಳಾಗಿ ಸ್ವೀಕರಿಸದೆ ಕೆಲವರು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಅಂತೆಯೇ ರಾಧಾ ಕೃಷ್ಣ ಧಾರಾವಾಹಿಯನ್ನು ನೋಡಿ ಕೃಷ್ಣನನ್ನು ಅರಸಿ ಬೆಂಗಳೂರಿನ ಹುಡುಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾಳೆ.

THE TIMES OF INDIA NEWS SERVICE 3 Dec 2020, 12:16 pm
ಧಾರಾವಾಹಿ ಅಥವಾ ಸಿನಿಮಾ ನಟ-ನಟಿಯರ ಮೇಲೆ ಪ್ರೇಕ್ಷಕರು ಒಂದು ರೀತಿಯ ಪ್ರೀತಿ, ಮೋಹವನ್ನು ಬೆಳೆಸಿಕೊಳ್ಳುವುದಿದೆ. ಇನ್ನು ನಟರಿಗೋಸ್ಕರ ಎಷ್ಟೋ ಜನ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ನಮ್ಮಲ್ಲಿವೆ. ಇನ್ನು ರಕ್ತದಲ್ಲಿ ಕಲಾವಿದರಿಗೆ ಪ್ರೇಮ ಪತ್ರ ಬರೆದಿದ್ದಿದೆ. ಅದರಂತೆ ಬೆಂಗಳೂರಿನ ಹುಡುಗಿಯೊಬ್ಬಳು 'ರಾಧಾ ಕೃಷ್ಣ' ಧಾರಾವಾಹಿಯ ಕೃಷ್ಣನನ್ನು ನೋಡಲು ದೆಹಲಿಗೆ ಹೋಗಿದ್ದಾಳಂತೆ.
Vijaya Karnataka Web a bengaluru girl went to dehali to see radha krishna kannada serial krishna
ರಾಧಾ ಕೃಷ್ಣ ಧಾರಾವಾಹಿಯ ಕೃಷ್ಣನನ್ನು ಹುಡುಕಿ ದೆಹಲಿಗೆ ಹೊರಟ ಬೆಂಗಳೂರಿನ 8ನೇ ತರಗತಿ ವಿದ್ಯಾರ್ಥಿನಿ!


ದೆಹಲಿಗೆ ಹೋದ 13 ವರ್ಷದ ವಿದ್ಯಾರ್ಥಿನಿ

13 ವರ್ಷದ ಬೆಂಗಳೂರಿನ ಹುಡುಗಿಯನ್ನು ರೈಲ್ವೆ ಬುಧವಾರ (ಡಿ 2, 2020) ಸಂರಕ್ಷಣಾ ದಳ ರಕ್ಷಿಸಿದೆ. ಅತಿಯಾಗಿ ಮೊಬೈಲ್ ಬಳಸಿದ್ದಕ್ಕಾಗಿ ಪಾಲಕರ ಜೊತೆ ಮನಸ್ತಾಪ ಕಟ್ಟಿಕೊಂಡು ಆ ಹುಡುಗಿ ಈ ರೀತಿ ಮಾಡಿದ್ದಾಳೆಂದು ತಿಳಿದುಬಂದಿದೆ. ಬೆಂಗಳೂರಿನ 8ನೇ ತರಗತಿಯ ವಿದ್ಯಾರ್ಥಿನಿ ಸೋಮವಾರ ಬೆಂಗಳೂರಿನಿಂದ ಕರ್ನಾಟಕ ಎಕ್ಸ್‌ಪ್ರೆಸ್ ಸ್ಪೆಷಲ್‌ ಟ್ರೇನ್‌ನಲ್ಲಿ ದೆಹಲಿಗೆ ಹೊರಟಿದ್ದಾಳೆ. ಆಗ ಪತ್ರಕರ್ತರೊಬ್ಬರು ಈ ಹುಡುಗಿ ಒಬ್ಬಳೇ ಪ್ರಯಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಪತ್ರಕರ್ತನಿಗೆ ವಿದ್ಯಾರ್ಥಿನಿ ಮೇಲೆ ಸಂಶಯ
ವಿದ್ಯಾರ್ಥಿಯನ್ನು ಕೇಳಿದಾಗ ಆಕೆ, 'ದೆಹಲಿಯಲ್ಲಿ ಅಜ್ಜಿಯ ಜೊತೆ ಇದ್ದೇನೆ. ಅಲ್ಲಿಯೇ ಓದುತ್ತಿದ್ದೇನೆ, ಲಾಕ್‌ಡೌನ್‌ ಟೈಮ್‌ನಲ್ಲಿ ಊರಿಗೆ ಹೋಗಿ ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದೆ, ಈಗ ವಾಪಸ್ ಬಂದೆ. ರೈಲ್ವೆ ಸ್ಟೇಶನ್‌ಗೆ ಅಂಕಲ್ ಬಂದು ಕರೆದುಕೊಂಡು ಹೋಗುತ್ತಾರೆ' ಎಂದು ಹೇಳಿದ್ದಾಳೆ. ದೆಹಲಿ ತಲುಪಿದಾಗ ಆ ಹುಡುಗಿಯ ಅಂಕಲ್ ಬರುತ್ತಾರೋ ಇಲ್ಲವೋ ಎಂದು ನೋಡಲು ಅಲ್ಲಿಯೇ ಪತ್ರಕರ್ತರು ಕೂಡ ಕಾದಿದ್ದಾರೆ. ಆದರೆ ಯಾರೂ ಬರಲಿಲ್ಲ. ಆ ಹುಡುಗಿ ಯಾವುದೇ ಮೊಬೈಲ್ ಫೋನ್ ಕೂಡ ಇಟ್ಟುಕೊಂಡಿರಲಿಲ್ಲ. ಆದರೆ ಅವಳ ಹತ್ತಿರ ಇದ್ದ ಪುಸ್ತಕದಲ್ಲಿ ಪಾಲಕರ ನಂಬರ್ ಇತ್ತು. ಹೀಗಾಗಿ ರೈಲ್ವೆ ಅಧಿಕಾರಿಗಳು ಪಾಲಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

Also Read-'ಮಹಾಭಾರತ', 'ರಾಧಾಕೃಷ್ಣ' ಧಾರಾವಾಹಿಗಳ ವಿಲನ್ ಪಾತ್ರಕ್ಕೆ ಧ್ವನಿ ಕೊಟ್ಟ ಅಗ್ನಿಸಾಕ್ಷಿ ಸೀರಿಯಲ್ ನಟ ಯಾರು?
ಕೃಷ್ಣನನ್ನು ಹುಡುಕಿ ಹೊರಟ ವಿದ್ಯಾರ್ಥಿನಿ

ಆನ್‌ಲೈನ್‌ ಕ್ಲಾಸ್ ಹಾಜಾರಗಲು ನೀಡಿದ್ದ ಮೊಬೈಲ್‌ನ್ನು ಅತಿಯಾಗಿ ಬಳಸಿದ್ದಕ್ಕಾಗಿ ಹುಡುಗಿಗೂ ಹಾಗೂ ಪಾಲಕರಿಗೂ ಬೇಸರ ಬಂದಿದೆ. ಹೀಗಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪಾಲಕರು ಹೇಳಿದ್ದಾರೆ. ಬೆಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾದ ಕುರಿತು ದೂರು ಕೂಡ ನೀಡಲಾಗಿತ್ತು. ಇನ್ನು ಕನ್ನಡದ 'ರಾಧಾ ಕೃಷ್ಣ' ಧಾರಾವಾಹಿ ಕಂಡರೆ ಆ ಹುಡುಗಿಗೆ ತುಂಬ ಇಷ್ಟವಾಗಿತ್ತು. ರಾಧೆ ಕೃಷ್ಣನನ್ನು ಹುಡುಕುವ ಹಾಗೆ ಆ ಹುಡುಗಿ ಕೃಷ್ಣನನ್ನು ಹುಡುಕಲು ದೆಹಲಿಗೆ ಬಂದಿದ್ದಳು, ಮಥುರಾಗೆ ಹೋಗುವ ಪ್ಲ್ಯಾನ್ ಕೂಡ ಇತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ರಾಧಾ ಕೃಷ್ಣ ಧಾರಾವಾಹಿ ಮೂಲತಃ ಹಿಂದಿ ಭಾಷೆಯದ್ದಾಗಿದ್ದು, ಕನ್ನಡಕ್ಕೆ ಡಬ್ ಆಗಿ ಲಾಕ್‌ಡೌನ್‌ ಸಮಯದಿಂದ ಪ್ರಸಾರವಾಗುತ್ತಿತ್ತು.

Also Read-ರಾಧಾ ಕೃಷ್ಣ ಧಾರಾವಾಹಿ: ಮಲ್ಲಿಕಾ ಸಿಂಗ್, ರಾಧೆ ಪಾತ್ರಕ್ಕೆ ಆಡಿಶನ್ ನೀಡುವಾಗ ನಡೆದಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ