ಆ್ಯಪ್ನಗರ

'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ 'ಸ್ಪರ್ಶ' ರೇಖಾ; ಕಿರುತೆರೆಗೆ ಮರಳಿದ 'ಮೆಜೆಸ್ಟಿಕ್' ನಟಿ

ಸ್ಯಾಂಡಲ್‌ವುಡ್‌ ನಟಿ ರೇಖಾ ಕಿರುತೆರೆಗೆ ಕಾಲಿಡುತ್ತಿದ್ದು, ತಮ್ಮ ಹೊಸ ಸೀರಿಯಲ್‌ ಬಗ್ಗೆ ಮತ್ತು ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ರೇಖಾ ನಟಿಸುತ್ತಿದ್ದಾರೆ. ದಿವ್ಯಾ ಸುರೇಶ್, ಅಭಿನವ್ ವಿಶ್ವನಾಥನ್, ಚಿಲ್ಲರ್ ಮಂಜು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Vijaya Karnataka 24 Dec 2022, 10:34 am

ಹೈಲೈಟ್ಸ್‌:

  • ನಟಿ ಸ್ಪರ್ಶ ರೇಖಾ ಕಿರುತೆರೆಯತ್ತ ಹೆಜ್ಜೆ ಹಾಕಿದ್ದಾರೆ
  • ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ರೇಖಾ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ
  • ‘ಸ್ಪರ್ಶ’, ‘ಮೆಜೆಸ್ಟಿಕ್‌’ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ರೇಖಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rekha
ಲವಲವಿಕೆ ಸುದ್ದಿಲೋಕ
ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಈಗ ಸ್ಪರ್ಶ ರೇಖಾ ( Sparsha Rekha ) ಕಿರುತೆರೆಯತ್ತ ಹೆಜ್ಜೆ ಹಾಕಿದ್ದು, ಸದ್ಯದಲ್ಲೇ ಆರಂಭವಾಗಲಿರುವ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ( Tripura Sundari Serial ) ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ.

ಸೀರಿಯಲ್‌ನಲ್ಲಿ ನಟನೆ
‘ಸ್ಪರ್ಶ’, ‘ಮೆಜೆಸ್ಟಿಕ್‌’ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ರೇಖಾ ಮದುವೆ ಮಾಡಿಕೊಂಡು ಚಿತ್ರರಂಗದಿಂದ ದೂರ ಉಳಿದಿದ್ದರು. ಕೆಲ ವರ್ಷಗಳ ಹಿಂದೆ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಈಗ ಸೀರಿಯಲ್‌ನಲ್ಲಿ ಒಂದು ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ತ್ರಿಪುರ ಸುಂದರಿ ಧಾರಾವಾಹಿಗೆ ಮರಳಿದ ರೇಖಾ

ತ್ರಿಪುರ ಸುಂದರಿ ಕಥೆ ಏನು?
‘ನನಗೆ ಕಾಲ್ಪನಿಕ ಕಥೆಗಳೆಂದರೆ ಬಹಳ ಅಚ್ಚುಮೆಚ್ಚು. ತ್ರಿಪುರ ಸುಂದರಿ ಸೀರಿಯಲ್‌ ಕಥೆ ಬಹಳ ವಿಭಿನ್ನವಾಗಿದ್ದು, ಇದುವರೆಗೂ ಇಂತಹ ಕಥೆ ಕಿರುತೆರೆಯಲ್ಲಿ ಬಂದಿಲ್ಲ. ಸೀರಿಯಲ್‌ಗಳು ಕಲಾವಿದರನ್ನು ಪ್ರೇಕ್ಷಕರ ಮನೆ ಮತ್ತು ಮನ ಎರಡಕ್ಕೂ ರೀಚ್‌ ಮಾಡಿಸುತ್ತವೆ. ಹಾಗಾಗಿ ಇದನ್ನು ಒಪ್ಪಿಕೊಂಡೆ. ಈ ಸೀರಿಯಲ್‌ ತಾಯಿ ಸೆಂಟಿಮೆಂಟ್‌ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ’ಎಂದು ಹೇಳಿದ್ದಾರೆ ರೇಖಾ.

ಸಿನಿಮಾ, ಸೀರಿಯಲ್‌ಗೂ ವ್ಯತ್ಯಾಸ ಏನು?
‘ಇತ್ತೀಚಿನ ದಿನಗಳಲ್ಲಿ ಸಿನಿಮಾ ಮೇಕಿಂಗ್‌ ಮತ್ತು ಸೀರಿಯಲ್‌ಗಳ ಮೇಕಿಂಗ್‌ನಲ್ಲಿಅಂತಹ ವ್ಯತ್ಯಾಸವೇನು ಕಾಣುತ್ತಿಲ್ಲ. ಸೀರಿಯಲ್‌ಗಳಲ್ಲಿ ಕೆಲಸದ ಸಮಯ ಮಾತ್ರ ಹೆಚ್ಚಾಗಿರುತ್ತದೆ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಸೀರಿಯಲ್‌ನ ಕ್ವಾಲಿಟಿ ಬಹಳ ಚೆನ್ನಾಗಿರುತ್ತದೆ. ಕೆಲ ಸಿನಿಮಾಗಿಂತಲೂ ಉತ್ತಮ ಕ್ವಾಲಿಟಿಯಲ್ಲಿ ಸೀರಿಯಲ್‌ಗಳನ್ನು ಮಾಡಲಾಗುತ್ತಿದೆ’ ಎನ್ನುತ್ತಾರವರು.

ತ್ರಿಪುರ ಸುಂದರಿಯಾದ ದಿವ್ಯಾ ಸುರೇಶ್

ರೇಖಾ ನಟನೆಯ ಸಿನಿಮಾಗಳು
ರೇಖಾ ಬಹಳ ದಿನಗಳ ನಂತರ ಬಣ್ಣ ಹಚ್ಚಲು ಆರಂಭಿಸಿದರೂ ಪೋಷಕ ಪಾತ್ರಗಳಲ್ಲಿಅವರು ಖ್ಯಾತಿ ಪಡೆದುಕೊಂಡರು. ಪಾಪ್‌ ಕಾರ್ನ್‌ ಮಂಕಿ ಟೈಗರ್‌, ಬಡವ ರಾಸ್ಕಲ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ಅವರು ಮೂರ್ನಾಲ್ಕು ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ನಟಿಸುತ್ತಿದ್ದಾರೆ.

Divya Suresh: ಹೊಸ ಧಾರಾವಾಹಿಯ ಮೂಲಕ ನಿಮ್ಮೆಲ್ಲರ ಮುಂದೆ ಬರಲಿದ್ದಾರೆ ದಿವ್ಯಾ ಸುರೇಶ್!

ಚಿತ್ರರಂಗದಲ್ಲಿ ಸಕ್ರಿಯ

"ಒಳ್ಳೊಳ್ಳೆ ಪಾತ್ರಗಳು ಬಂದರೆ ನಾನು ಒಪ್ಪಿಕೊಳ್ಳುತ್ತೇನೆ. ಸಿನಿಮಾಗಳಲ್ಲಿಯೂ ಉತ್ತಮ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದಿವೆ. ಕಿರುತೆರೆ ನನಗೆ ಹೊಸದು. ಆ ಜರ್ನಿಯನ್ನು ಆರಂಭಿಸಲು ನಾನು ಬಹಳ ಉತ್ಸುಕಳಾಗಿದ್ದೇನೆ" ಎಂದಿದ್ದಾರೆ ನಟಿ ರೇಖಾ

ದಿವ್ಯಾ ಸುರೇಶ್, ಅಭಿನವ್ ವಿಶ್ವನಾಥನ್, ಚಿಲ್ಲರ್ ಮಂಜು ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಫ್ಯಾಂಟಸಿ ಆಧಾರಿತ ಕಥೆಯಿದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ