ಆ್ಯಪ್ನಗರ

'ಮಹಾಭಾರತ', 'ರಾಧಾಕೃಷ್ಣ' ಧಾರಾವಾಹಿಗಳ ವಿಲನ್ ಪಾತ್ರಕ್ಕೆ ಧ್ವನಿ ಕೊಟ್ಟ ಅಗ್ನಿಸಾಕ್ಷಿ ಸೀರಿಯಲ್ ನಟ ಯಾರು?

ಆರಕ್ಕಿಂತ ಹೆಚ್ಚು ಸಮಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದ ನಟರೊಬ್ಬರು ಮಹಾಭಾರತ ಧಾರಾವಾಹಿಯ ಧುರ್ಯೋಧನ, ರಾಧಾ ಕೃಷ್ಣ ಸೀರಿಯಲ್‌ನ ಕಂಸ ಪಾತ್ರಕ್ಕೆ ಧ್ವನಿ ನೀಡಿದ್ದರು ಎನ್ನಲಾಗಿದೆ. ಅವರು ಯಾರು?

Vijaya Karnataka Web 5 Nov 2020, 5:32 pm
ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಜಯ್ ಸೂರ್ಯ, ವೈಷ್ಣವಿ ಗೌಡ, ರಾಜೇಶ್ ಧ್ರುವ, ಮುಖ್ಯಮಂತ್ರಿ ಚಂದ್ರು, ಇಷಿತಾ ವರ್ಷ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ದೊಡ್ಡಮಟ್ಟದ ತಾರಾಗಣವಿತ್ತು. ಇದರಲ್ಲಿ ರೌಡಿ, ಚಂದ್ರಿಕಾಳ ಬಲಗೈ ಬಂಟ ಗರುಡ ಪಾತ್ರದಲ್ಲಿ ನಟಿಸಿದ್ದ ನಟ ಪುನೀತ್ ಬಾಬು ಅವರು ಕಂಠದಾನ ಕಲಾವಿದ ಎಂಬುದು ಅನೇಕರಿಗೆ ತಿಳಿದಿಲ್ಲ.
Vijaya Karnataka Web agnisakshi serial actor puneeth babu gave voice to mahabharata and radha krishna serial
'ಮಹಾಭಾರತ', 'ರಾಧಾಕೃಷ್ಣ' ಧಾರಾವಾಹಿಗಳ ವಿಲನ್ ಪಾತ್ರಕ್ಕೆ ಧ್ವನಿ ಕೊಟ್ಟ ಅಗ್ನಿಸಾಕ್ಷಿ ಸೀರಿಯಲ್ ನಟ ಯಾರು?


ಅಜಿತ್‌ ಸಿನಿಮಾಕ್ಕೆ ಪುನೀತ್ ಬಾಬು ಕಂಠದಾನ

ಚಿತ್ರರಂಗದ ಅನೇಕ ನಟರಿಗೆ ಪುನೀತ್ ಬಾಬು ಧ್ವನಿ ನೀಡಿದ್ದಾರೆ. ತಮಿಳು ನಟ ಅಜಿತ್ ಅಭಿನಯದ 'ವಿಶ್ವಾಸಂ' ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವಾಗ ಪುನೀತ್ ಅವರೇ ಅಜಿತ್‌ಗೆ ಧ್ವನಿ ನೀಡಿದ್ದರು. ಕೊರೊನಾ ವೈರಸ್ ಕಾರಣದಿಂದಾಗಿ ಆದ ಆರ್ಥಿಕ ನಷ್ಟದಿಂದ ಹೊಸದಾಗಿ ಧಾರಾವಾಹಿ ನಿರ್ಮಿಸುವುದು ಕಷ್ಟವಾಗಿದೆ. ಹೀಗಾಗಿ ಅನೇಕ ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿವೆ.

ಪೌರಾಣಿಕ ಧಾರಾವಾಹಿಗಳಿಗೆ ಪುನೀತ್ ಬಾಬು ಕಂಠದಾನ!

ಹಿಂದಿಯ ಮಹಾಭಾರತ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಿತ್ತು. ಈ ಪೌರಾಣಿಕ ಸೀರಿಯಲ್ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಇದರಲ್ಲಿ ಧುರ್ಯೋಧನ ಪಾತ್ರಕ್ಕೆ ಪುನೀತ್ ಧ್ವನಿ ನೀಡಿದ್ದರು. ಇದರ ಜೊತೆಗೆ 'ರಾಧಾ ಕೃಷ್ಣ' ಧಾರಾವಾಹಿಯ ಕಂಸ ಪಾತ್ರಕ್ಕೂ ಕೂಡ ಅವರೇ ಕಂಠದಾನ ಮಾಡಿದ್ದರು. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪುನೀತ್ ಬಾಬು, 'ಡಬ್ಬಿಂಗ್ ಧಾರಾವಾಹಿಯಾಗಿರಲೀ, ಸ್ವಮೇಕ್ ಆಗಿರಲೀ ವಾಹಿನಿ ಶೋಗಳ ಬಗ್ಗೆ ಹೆಚ್ಚು ಮಹತ್ವ ನೀಡುತ್ತದೆ. ಸ್ಥಳೀಯ ಭಾಷೆಗೆ ಮೊದಲ ಆದ್ಯತೆ ನೀಡಲಾಗುತ್ತದೆ' ಎಂದು ಹೇಳಿದ್ದರು.

Also Read-ಪ್ರೇಯಸಿ ಪರಿಚಯ ಮಾಡಿಕೊಟ್ಟ 'ಮಹಾಭಾರತ' ಧಾರಾವಾಹಿ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್!

ಡಬ್ಬಿಂಗ್ ಧಾರಾವಾಹಿ ಬೇಕೇ? ಬೇಡವೇ?
ಕನ್ನಡಕ್ಕೆ ಇನ್ನು ಡಬ್ಬಿಂಗ್ ಧಾರಾವಾಹಿಗಳು ಬೇಕೋ? ಬೇಡವೋ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಡಬ್ಬಿಂಗ್ ಧಾರಾವಾಹಿಗಳಿಂದ ಅನೇಕ ತಂತ್ರಜ್ಷರು, ಕಲಾವಿದರಿಗೆ ಕೆಲಸವಿರೋದಿಲ್ಲ. ಈಗಾಗಲೇ ಪ್ರಾಜೆಕ್ಟ್‌ಗಳು ಇಲ್ಲದೆ ಅನೇಕ ಕಲಾವಿದರು ಮನೆಯಲ್ಲಿ ಕೂತಿದ್ದಾರೆ. ಇನ್ನು ಡಬ್ಬಿಂಗ್ ಧಾರಾವಾಹಿಗಳಿಂದ ಕಂಠದಾನ ಕಲಾವಿದರಿಗೆ ಉದ್ಯೋಗ ಕೂಡ ಸಿಗುತ್ತಿದೆ. ಒಟ್ಟಿನಲ್ಲಿ ಈ ವಿಚಾರದಲ್ಲಿ ಸಾಧಕ-ಬಾಧಕಗಳು ಎರಡೂ ಇವೆ.

Also Read-'ನ್ಯಾಶನಲ್ ಕ್ರಶ್' ಕೃಷ್ಣ ಪಾತ್ರಧಾರಿ ಸೌರಭ್ ಜೈನ್ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ