ಆ್ಯಪ್ನಗರ

​'ಬಿಗ್‌ಬಾಸ್‌ ಸೀಸನ್‌ 5' ಮೊದಲ ಕ್ಯಾಪ್ಟನ್‌ ಅನುಪಮಾ

ಮನೆಯೊಳಗೆ ಪ್ರವೇಶಿಸಿರುವ ಎಲ್ಲ ಸ್ಪರ್ಧಿಗಳು ಮೊದಲ ದಿನ ಪರಸ್ಪರ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡು ಖುಷಿಯಿಂದ ಹರಟಿದರು.

Vijaya Karnataka Web 17 Oct 2017, 10:20 am
ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಬಿಗ್‌ಬಾಸ್‌ ಸೀಸನ್‌ 5 ಶುರುವಾಗಿದೆ. ಮನೆಯೊಳಗೆ ಪ್ರವೇಶಿಸಿರುವ ಎಲ್ಲ ಸ್ಪರ್ಧಿಗಳು ಮೊದಲ ದಿನ ಪರಸ್ಪರ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡು ಖುಷಿಯಿಂದ ಹರಟಿದರು.
Vijaya Karnataka Web akka serial actress become captain in bigg boss house
​'ಬಿಗ್‌ಬಾಸ್‌ ಸೀಸನ್‌ 5' ಮೊದಲ ಕ್ಯಾಪ್ಟನ್‌ ಅನುಪಮಾ


ಅದೇ ರೀತಿ ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನ ಕ್ಯಾಪ್ಟನ್‌ ಆಯ್ಕೆ ಪ್ರಕ್ರಿಯೆಯೂ ನಡೆಯಿತು. ಅದಕ್ಕಾಗಿ ಬಿಗ್‌ಬಾಸ್‌ ಒಂದು ಟಾಸ್ಕನ್ನೂ ನೀಡಿದ್ದರು. ಬಿಗ್‌ಬಾಸ್‌ ನೀಡಿದ ಟಾಸ್ಕ್‌ ಅನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಮನೆಯ ಸದಸ್ಯರು, ಒಮ್ಮತದಿಂದ ಅನುಪಮಾ ಅವರನ್ನು ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದರು. ಬಿಗ್‌ಬಾಸ್‌ನ ಮೊದಲ ದಿನವೇ ಅನುಪಮಾ ಒಂದೊಳ್ಳೆಯ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ತಮಗೆ ನೀಡಿದ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನು ಅದೇ ದಿನ ನಾಮಿನೇಶನ್ ಪ್ರಕ್ರಿಯೆ ಸಹ ಪ್ರಾರಂಭವಾಯಿತು. ಕ್ಯಾಪ್ಟನ್ ಅನುಪಮಾ ಹೊರತುಪಡಿಸಿ ಉಳಿದ ಸದಸ್ಯರ ಹೆಸರನ್ನು ನಾಮಿನೇಟ್ ಮಾಡಬಹುದಾಗಿತ್ತು. ಮನೆಯ ಸದಸ್ಯರು ನೀಡಿರುವ ವೋಟ್ ಪ್ರಕಾರ ದಿವಾಕರ್, ಜಗನ್ನಾಥ್, ಜಯರಾಮ್ ಕಾರ್ತಿಕ್, ಮೇಘಾ, ಜಯ ಶ್ರೀನಿವಾಸನ್ ಮತ್ತು ಸುಮಾ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದರೆ. ಇನ್ನು ಮೈಸೂರಿನ ನಿವೇದಿತಾ ಗೌಡ ಅವರನ್ನ ಕ್ಯಾಪ್ಟನ್ ಅನುಪಮಾ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ