ಆ್ಯಪ್ನಗರ

Anirudh: ಏನು.. ಬಿಗ್ ಬಾಸ್‌ಗೆ ಹೋಗ್ತಿದ್ದಾರಾ ಅನಿರುದ್ಧ್? ಸ್ಪಷ್ಟನೆ ಕೊಟ್ಟ ‘ಜೊತೆ ಜೊತೆಯಲಿ’ ನಟ

ನಟ ಅನಿರುದ್ಧ ಜತ್ಕರ್ ಅವರು ‘ಬಿಗ್ ಬಾಸ್’ ಮನೆಗೆ ಹೋಗ್ತಾರಂತೆ ಎಂಬ ಅಂತೆ ಕಂತೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಅನಿರುದ್ಧ ಜತ್ಕರ್ ಸ್ಪರ್ಧಿಸಲಿದ್ದಾರಂತೆ ಎಂಬ ಗಾಸಿಪ್ ಎಲ್ಲೆಡೆ ಕೇಳಿಬರುತ್ತಿದೆ. ಹಾಗಾದ್ರೆ, ‘ಬಿಗ್ ಬಾಸ್’ ಮನೆಯೊಳಗೆ ಅನಿರುದ್ಧ ಜತ್ಕರ್ ಕಾಲಿಡುತ್ತಾರಾ?

Authored byಹರ್ಷಿತಾ ಎನ್ | Vijaya Karnataka Web 13 Sep 2022, 6:06 pm

ಹೈಲೈಟ್ಸ್‌:

  • ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿಲ್ಲ ನಟ ಅನಿರುದ್ಧ ಜತ್ಕರ್
  • ‘ಬಿಗ್ ಬಾಸ್’ ಮನೆಗೆ ಕಾಲಿಡ್ತಾರಾ ನಟ ಅನಿರುದ್ಧ?
  • ‘ಬಿಗ್ ಬಾಸ್’ ಗಾಸಿಪ್ ಬಗ್ಗೆ ನಟ ಅನಿರುದ್ಧ ಸ್ಪಷ್ಟನೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aniruddha jatkar clarifies that he is not going to bigg boss
Anirudh: ಏನು.. ಬಿಗ್ ಬಾಸ್‌ಗೆ ಹೋಗ್ತಿದ್ದಾರಾ ಅನಿರುದ್ಧ್? ಸ್ಪಷ್ಟನೆ ಕೊಟ್ಟ ‘ಜೊತೆ ಜೊತೆಯಲಿ’ ನಟ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿಗಳ ಪೈಕಿ ‘ಜೊತೆ ಜೊತೆಯಲಿ’ ಕೂಡ ಒಂದು. ಇತ್ತೀಚೆಗಷ್ಟೇ ‘ಜೊತೆ ಜೊತೆಯಲಿ’ ಧಾರಾವಾಹಿ ವಿವಾದದ ಕೇಂದ್ರಬಿಂದುವಾಗಿತ್ತು. ‘ಜೊತೆ ಜೊತೆಯಲಿ’ ನಿರ್ಮಾಪಕ ಹಾಗೂ ನಿರ್ದೇಶಕ ಆರೂರು ಜಗದೀಶ್ ಮತ್ತು ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಜತ್ಕರ್ ಅವರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ ಜತ್ಕರ್ ಅವರನ್ನು ಕೈಬಿಡುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಆರೂರು ಜಗದೀಶ್ ಸ್ಪಷ್ಟ ಪಡಿಸಿದ್ದರು. ಇದೀಗ ‘ಜೊತೆ ಜೊತೆಯಲಿ’ ಧಾರಾವಾಹಿಗೆ ಮೆಗಾ ತಿರುವು ಸಿಕ್ಕಿದೆ. ಹೀಗಿರುವಾಗಲೇ, ಅನಿರುದ್ಧ ಜತ್ಕರ್ ಅವರ ಬಗ್ಗೆ ಹೊಸ ಗುಸುಗುಸು ಕೇಳಿಬರುತ್ತಿದೆ.
‘ಬಿಗ್ ಬಾಸ್‌’ಗೆ ಹೋಗ್ತಾರಾ ಅನಿರುದ್ಧ ಜತ್ಕರ್?
ನಟ ಅನಿರುದ್ಧ ಜತ್ಕರ್ ಅವರು ‘ಬಿಗ್ ಬಾಸ್’ ಮನೆಗೆ ಹೋಗ್ತಾರಂತೆ ಎಂಬ ಅಂತೆ ಕಂತೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಅನಿರುದ್ಧ ಜತ್ಕರ್ ಸ್ಪರ್ಧಿಸಲಿದ್ದಾರಂತೆ ಎಂಬ ಗಾಸಿಪ್ ಎಲ್ಲೆಡೆ ಕೇಳಿಬರುತ್ತಿದೆ. ಹಾಗಾದ್ರೆ, ‘ಬಿಗ್ ಬಾಸ್’ ಮನೆಯೊಳಗೆ ಅನಿರುದ್ಧ ಜತ್ಕರ್ ಕಾಲಿಡುತ್ತಾರಾ?

Jothe Jotheyali: ಈಡೇರದ ಅಭಿಮಾನಿಗಳ ಕೋರಿಕೆ: ಅನಿರುದ್ಧ ಜತ್ಕರ್ ಅವರ ಮಹತ್ವದ ಪೋಸ್ಟ್!

ಸ್ಪಷ್ಟನೆ ಕೊಟ್ಟ ನಟ ಅನಿರುದ್ಧ ಜತ್ಕರ್
ತಮ್ಮ ಬಗ್ಗೆ ಹಬ್ಬಿರುವ ‘ಬಿಗ್ ಬಾಸ್’ ಗಾಸಿಪ್ ಬಗ್ಗೆ ನಟ ಅನಿರುದ್ಧ ಜತ್ಕರ್ ಸ್ಪಷ್ಟನೆ ಕೊಟ್ಟಿದ್ದಾರೆ. ‘’ನಾನು ಬಿಗ್ ಬಾಸ್‌ಗೆ ಹೋಗ್ತಾಯಿಲ್ಲ’’ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡು ನಟ ಅನಿರುದ್ಧ ಜತ್ಕರ್ ಕ್ಲಾರಿಟಿ ಕೊಟ್ಟಿದ್ದಾರೆ.

‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ಅನಿರುದ್ಧ ಇಲ್ಲ: ಕೈ ಕೊಯ್ದುಕೊಂಡ ಅಭಿಮಾನಿ

ಉತ್ತಮ ನಿರ್ಧಾರ ಎಂದ ಅಭಿಮಾನಿಗಳು
‘’ನಾನು ಬಿಗ್ ಬಾಸ್‌ಗೆ ಹೋಗ್ತಾಯಿಲ್ಲ’’ ಎಂದು ನಟ ಅನಿರುದ್ಧ ಜತ್ಕರ್ ಸ್ಪಷ್ಟಪಡಿಸಿದ ಫೇಸ್‌ಬುಕ್ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ‘’ಇದು ಉತ್ತಮ ನಿರ್ಧಾರ’’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ ಔಟ್: ಓದುಗರು ಹೇಳಿದ್ದೇನು?

‘ಬಿಗ್ ಬಾಸ್ ಕನ್ನಡ 9’ ಶುರು ಯಾವಾಗ?
‘ಬಿಗ್ ಬಾಸ್ ಕನ್ನಡ 9’ ಟಿವಿ ಸೀಸನ್ ಪ್ರೋಮೋ ಅದಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಆರಂಭ ಯಾವಾಗ ಎಂಬುದನ್ನ ಕಲರ್ಸ್ ಕನ್ನಡ ವಾಹಿನಿ ಇನ್ನೂ ಬಹಿರಂಗ ಪಡಿಸಿಲ್ಲ.

‘ಬಿಗ್ ಬಾಸ್ ಕನ್ನಡ ಓಟಿಟಿ 1’ ಗ್ರ್ಯಾಂಡ್ ಫಿನಾಲೆ
ವೂಟ್‌ನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದ ಫಿನಾಲೆ ವೀಕ್ ಇದೀಗ ಜಾರಿಯಲ್ಲಿದೆ. ಇದೇ ವಾರಾಂತ್ಯದಲ್ಲಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಿಂದ ನಾಲ್ವರು ಸ್ಪರ್ಧಿಗಳು ‘ಬಿಗ್ ಬಾಸ್ ಕನ್ನಡ 9’ ಶೋಗೆ ಆಯ್ಕೆ ಆಗಲಿದ್ದಾರೆ. ಆ ನಾಲ್ವರು ಸ್ಪರ್ಧಿಗಳು ಯಾರ್ಯಾರು ಎಂಬುದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ