ಆ್ಯಪ್ನಗರ

'ಬಂಗಾರ' ಧಾರಾವಾಹಿಯ ಸುಂದರ ನಟಿ, ಡಾನ್ಸರ್ ರತಿ ಆರ್ಮುಗಂ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ ಏಕೆ?

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಂಗಾರ' ಧಾರಾವಾಹಿ ನಟಿ ರತಿ ಆರ್ಮುಗಂ ಅವರು ಕನ್ನಡದ ಜೊತೆಗೆ ಬೇರೆ ಭಾಷೆಯ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ ಈಗ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ

THE TIMES OF INDIA NEWS SERVICE 17 Sep 2020, 3:58 pm
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಂಗಾರ' ಧಾರಾವಾಹಿಯಲ್ಲಿ ನಟ ಶ್ರೀನಾಥ್, ಟಿ ಎಸ್ ನಾಗಾಭರಣ, ರತಿ ಆರ್ಮುಗಂ, ದಿಲೀಪ್ ರಾಜ್ ನಟಿಸಿದ್ದರು. ಈಗ ಈ ಕಲಾವಿದರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಈ ಧಾರಾವಾಹಿಯಲ್ಲಿ ಹೀರೋಯಿನ್ ಆಗಿ ನಟಿಸಿದ್ದ ರತಿ ಆರ್ಮುಗಂ ಯಾಕೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ? ಇಲ್ಲಿದೆ ಮಾಹಿತಿ
Vijaya Karnataka Web bangara kannada serial actress rathi arumugam serial cinema life
'ಬಂಗಾರ' ಧಾರಾವಾಹಿಯ ಸುಂದರ ನಟಿ, ಡಾನ್ಸರ್ ರತಿ ಆರ್ಮುಗಂ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ ಏಕೆ?


ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ರತಿ
ಬೆಂಗಳೂರಿನ ತಮಿಳು ಕುಟುಂಬದಲ್ಲಿ ಹುಟ್ಟಿದ ರತಿಗೆ ಅಕ್ಕ, ತಮ್ಮ ಇದ್ದಾರೆ. ಚೆನ್ನಾಗಿ ಓದಿಕೊಂಡಿದ್ದ ರತಿ, ಅದ್ಭುತವಾಗಿ ಡಾನ್ಸ್ ಮಾಡುತ್ತಿದ್ದರು. ಇದೇ ಅವರಿಗೆ ಮುಂದೆ ಸಿನಿಮಾಗಳಲ್ಲಿ ನಟಿಸಲು ವರದಾನವಾಯಿತು. ಕೆಲ ತಮಿಳು ಸಿನಿಮಾಗಳಿಗೆ ರತಿ ಕಂಠದಾನ ಕಲಾವಿದೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಜೆನಿಲಿಯಾ ಡಿಸೋಜಾ ಅವರ ಮೊದಲ ತಮಿಳು ಸಿನಿಮಾ 'ಬಾಯ್ಸ್‌'ಗೆ ರತಿ ಧ್ವನಿ ನೀಡಿದ್ದರು. 2002ರಲ್ಲಿ 'ಗುಮ್ಮಲಮ್ಮ' ಸಿನಿಮಾದಲ್ಲಿ ರತಿ ಮೊದಲ ಬಾರಿಗೆ ನಟಿಸಿದ್ದರು. ಆಮೇಲೆ ರತಿ ಅವರು ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ 'ಬಾಯ್‌ಫ್ರೆಂಡ್' ಸಿನಿಮಾದಲ್ಲಿ ರತಿ ಬಣ್ಣ ಹಚ್ಚಿದ್ದರು.

'ಬಂಗಾರ' ಧಾರಾವಾಹಿ ನಂತರದಲ್ಲಿ ರತಿ ಎಲ್ಲಿ ಮಾಯವಾದರು?
ತಮಿಳಿನ ಅಜಿತ್ ಸಿನಿಮಾದಲ್ಲಿ ರತಿ ಐಟಂ ಡಾನ್ಸ್ ಮಾಡಿದ್ದರು. ಇದು ತುಂಬ ಹಿಟ್ ಆಗಿತ್ತು. ರತಿ ನೋಡಲು ಸುಂದರವಾಗಿದ್ದರೂ, ಸಖತ್ ಆಗಿ ಡಾನ್ಸ್ ಮಾಡುತ್ತಿದ್ದರೂ ಕೂಡ ಅವರ ಸಿನಿಮಾಗಳು ಯಾವುವು ಅಷ್ಟೊಂದು ಕಮರ್ಷಿಯಲ್ ಆಗಿ ಹಿಟ್ ಆಗಲಿಲ್ಲ. ಆನಂತರ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ನಟಿ ರತಿ ಆರ್ಮುಗಂ ಕೆಲ ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದರು. 2013ರಿಂದ 2015ರವರೆಗೆ ರತಿ 'ಬಂಗಾರ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು.

Also Read-ಜೊತೆ ಜೊತೆಯಲಿ ಧಾರಾವಾಹಿ: ಆರ್ಯವರ್ಧನ್ ಕರಾಳಮುಖ ಬಯಲಾಗತ್ತಾ?

ಇದಾದ ನಂತರ ಮತ್ತೆ ಕಿರುತೆರೆಯಲ್ಲಾಗಲೀ, ಬೆಳ್ಳಿತೆರೆಯಲ್ಲಾಗಲೀ ಸಕ್ರಿಯರಾಗಲೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ರತಿ ಕಾಣಿಸುತ್ತಿಲ್ಲ. ಒಟ್ಟಾರೆಯಾಗಿ ಚಿತ್ರರಂಗದಿಂದ, ಸಾರ್ವಜನಿಕ ಲೈಫ್‌ನಿಂದ ರತಿ ತುಂಬ ದೂರವಾಗಿದ್ದಾರೆ. ಇದಕ್ಕೆ ಕಾರಣವನ್ನು ಅವರೇ ನೀಡಬೇಕಿದೆ.

Also Read-ಕನ್ನಡಕ್ಕೆ ಡಬ್ಬಿಂಗ್ ಧಾರಾವಾಹಿ ಬೇಕೋ? ಬೇಡವೋ? ಸ್ವಮೇಕ್‌ಗೆ ಎಲ್ಲಿದೆ ಆದ್ಯತೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ