ಆ್ಯಪ್ನಗರ

Bhagyalakshmi Serial: ಭಾಗ್ಯಲಕ್ಷ್ಮೀ: ವೈಷ್ಣವ್-ಲಕ್ಷ್ಮೀ ಮದುವೆಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ರೆಡಿಯಾದ ತಾಂಡವ್

Bhagyalakshmi Kannada Serial Today Episode: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಲಕ್ಷ್ಮೀಗೆ ವೈಷ್ಣವ್ ತನ್ನನ್ನು ಪ್ರೀತಿಸುತ್ತಿಲ್ಲ, ಅವನಿಗೆ ನನ್ನ ಮದುವೆಯಾಗಲು ಇಷ್ಟವಿಲ್ಲ ಎಂದು ಗೊತ್ತಾಗಿದೆ. ನನ್ನ ಮನಸ್ಸಿನಲ್ಲಿ ನೀನಿಲ್ಲ ಎಂದು ವೈಷ್ಣವ್‌ ನೇರವಾಗಿ ಲಕ್ಷ್ಮೀ ಹತ್ತಿರ ಹೇಳಿದ್ದಾನೆ. ಈಗ ಲಕ್ಷ್ಮೀ-ವೈಷ್ಣವ್ ಜೊತೆಗಿನ ಮದುವೆ ಬೇಡ ಎಂದು ನಿರ್ಧಾರ ಮಾಡಿದ್ದಾಳೆ. ಆದರೆ ತಾಂಡವ್ ಈಗ ಲಕ್ಷ್ಮೀ ಮನಸ್ಸಿನಲ್ಲಿ ಇಲ್ಲ ಸಲ್ಲದ ವಿಷಯವನ್ನು ತುಂಬುತ್ತಿದ್ದಾನೆ.

Authored byಪದ್ಮಶ್ರೀ ಭಟ್ | Vijaya Karnataka Web 8 Mar 2023, 11:13 pm

ಹೈಲೈಟ್ಸ್‌:


  • ಲಕ್ಷ್ಮೀಗೆ ನಿನ್ನ ಕಂಡ್ರೆ ಇಷ್ಟ ಇಲ್ಲ ಎಂದ ವೈಷ್ಣವ್
  • ವೈಷ್ಣವ್ ಜೊತೆಗೆ ಮದುವೆ ಆಗೋದು ಬೇಡ ಎಂದು ಫಿಕ್ಸ್ ಆದ ಲಕ್ಷ್ಮೀ
  • ಲಕ್ಷ್ಮೀ-ವೈಷ್ಣವ್ ಮದುವೆ ಮಾಡಿಸಲು ತಾಂಡವ್ ಯೋಜನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bhagyalakshmi kannada serial
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ (Bhagyalakshmi Kannada Serial) ವೈಷ್ಣವ್ ತನ್ನನ್ನು ಪ್ರೀತಿ ಮಾಡ್ತಿಲ್ಲ ಎನ್ನೋದು ಲಕ್ಷ್ಮೀಗೆ ಗೊತ್ತಾಗಿದೆ. ನಿಮಗೆ ಯಾರು ಇಷ್ಟ ಇದ್ದಾರೋ ಅವರ ಜೊತೆ ಮದುವೆ ಆಗಿ, ನನ್ನ ಜೊತೆ ಮದುವೆ ಆಗಬೇಡಿ ಎಂದು ಲಕ್ಷ್ಮೀ ವೈಷ್ಣವ್‌ಗೆ ಹೇಳಿದ್ದಾಳೆ. ಇದಕ್ಕೆ ತಾಂಡವ್ ಎಂಟ್ರಿಯಾಗಿದೆ.

ತಾಂಡವ್ ಎಂಟ್ರಿ

ವೈಷ್ಣವ್ ಹಾಗೂ ಕೀರ್ತಿ ಪ್ರೀತಿ ಮಾಡುತ್ತಿದ್ದರು. ಮನೆಯವರೆಲ್ಲ ಸೇರಿ ಇವರಿಬ್ಬರ ನಿಶ್ಚಿತಾರ್ಥ ನಿಕ್ಕಿ ಮಾಡಿದ ನಂತರದಲ್ಲಿ ನನಗೆ ವೈಷ್ಣವ್ ಜೊತೆ ಬದುಕೋಕೆ ಆಗಲ್ಲ ಅಂತ ಕೀರ್ತಿ ಅವನ ಜೊತೆ ಬ್ರೇಕಪ್ ಮಾಡಿಕೊಂಡಳು. ಮನೆಯವರ ಒತ್ತಾಯಕ್ಕೆ ಮಣಿದು ವೈಷ್ಣವ್ ಲಕ್ಷ್ಮೀಯನ್ನು ಮದುವೆಯಾಗಲು ಒಪ್ಪಿದ್ದಾನೆ. ಆದರೆ ಲಕ್ಷ್ಮೀಗೆ ಅವನು ಈಗ ನನಗೆ ನಿನ್ನ ಕಂಡರೆ ಇಷ್ಟ ಇಲ್ಲ ಎಂದು ಹೇಳಿದ್ದಾನೆ. ಲಕ್ಷ್ಮೀ ಈಗ ವೈಷ್ಣವ್‌ನ ಜೊತೆ ಮದುವೆ ಆಗೋದು ಬೇಡ ಎಂದುಕೊಂಡಿದ್ದಳು. ಆದರೆ ಈಗ ಲಕ್ಷ್ಮೀಯ ಗಂಡ ತಾಂಡವ್ ಈ ವಿಚಾರಕ್ಕೆ ಎಂಟ್ರಿ ಕೊಟ್ಟು ಮದುವೆ ಮಾಡಿಸಲೇಬೇಕು ಎಂದು ಹೇಳಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ: ಲಕ್ಷ್ಮೀಗೆ ಗೊತ್ತಾಗಬಾರದ ಸತ್ಯವೊಂದು ಗೊತ್ತಾಯ್ತು; ಬಾಯಿಬಿಟ್ಟ ವೈಷ್ಣವ್

ಪಾತ್ರಧಾರಿಗಳ ಪರಿಚಯ

ವೈಷ್ಣವ್ ಪಾತ್ರದಲ್ಲಿ ಶಮಂತ್ ಬ್ರೊ ಗೌಡ, ಕೀರ್ತಿ ಪಾತ್ರದಲ್ಲಿ ತನ್ವಿ ರಾವ್, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್, ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವೈಷ್ಣವ್‌-ಲಕ್ಷ್ಮೀ ಅವರು ಮದುವೆ ವಿಚಾರವನ್ನು ಮಾತನಾಡುತ್ತಿರೋದನ್ನು ತಾಂಡವ್ ಕೇಳಿಸಿಕೊಂಡಿದ್ದಾನೆ. ಆ ನಂತರ ಲಕ್ಷ್ಮೀ ಬಳಿ ಬಂದು ನೀನು ಈ ಮದುವೆ ಆಗಲೇಬೇಕು ಎಂದು ಗದರಿಸಿದ್ದಾನೆ.

ಲಕ್ಷ್ಮೀಯನ್ನು ತರಾಟೆ ತೆಗೆದುಕೊಂಡ ತಾಂಡವ್‌

"ನಿನಗೆ ವೈಷ್ಣವ್ ಸಿಕ್ಕಿರೋದು ಜಾಸ್ತಿ. ನಾನು, ನನ್ನ ತಾಯಿ ಮನಸ್ಸು ಮಾಡಿಕೊಂಡಿರೋದಿಕ್ಕೆ ನಿನಗೆ ವೈಷ್ಣವ್‌ನಂತಹ ಹುಡುಗ ಸಿಕ್ಕಿದ್ದಾನೆ. ಅವನೆಲ್ಲಿ? ನೀನೆಲ್ಲಿ? ನಿನಗೆ ಮನ್ಮಥ ಸಿಗ್ತಾನೆ ಅಂತ ಅಂದುಕೊಂಡಿದ್ಯಾ? ನಿನ್ನಂಥವಳಿಗೆ ವೈಷ್ಣವ್‌ ಸಿಕ್ಕಿದ್ದು ಜಾಸ್ತಿ ಆಯ್ತು. ನೀನು ನಿನ್ನ ಅಕ್ಕನ ತರ ಆಡಬೇಡ. ನೀನು ಈ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಮಾಡಿರೋದೆಲ್ಲ ಕೆಲಸ ಹಾಳಾಗತ್ತೆ, ಮನೆ ಮರ್ಯಾದೆ ಹಾಳಾಗತ್ತೆ" ಅಂತ ತಾಂಡವ್ ಎಮೋಶನಲ್ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ: ಕೀರ್ತಿಗೆ ತಾಳಿ ಕಟ್ಟಲು ರೆಡಿಯಾದ ವೈಷ್ಣವ್, ಇದೆಲ್ಲ 'ಕಾರುಣ್ಯ' ಮಹಿಮೆ!

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತಾಂಡವ್‌ಗೆ ವೈಷ್ಣವ್-ಲಕ್ಷ್ಮೀ ಮದುವೆ ಆಗಬೇಕು ಅಂತಿದೆ. ಲಕ್ಷ್ಮೀ ಒಳ್ಳೆ ಹುಡುಗಿ, ನನ್ನ ತಮ್ಮ ಚೆನ್ನಾಗಿರಲಿ ಎನ್ನೋದು ತಾಂಡವ್ ಉದ್ದೇಶವೇ ಅಲ್ಲ.

"ಎಲ್ಲರೂ ವೈಷ್ಣವ್‌ನನ್ನು ಹೊಗಳುತ್ತಾರೆ, ಅವನ ಮುಂದೆ ನನ್ನವನನ್ನು ಸಣ್ಣವರಾಗಿ ಮಾಡುತ್ತಾರೆ. ಈ ವೈಷ್ಣವ್ ಅವನಿಗೆ ಇಷ್ಟವಿಲ್ಲದ ಹುಡುಗಿ ಮದುವೆಯಾಗಿ ನನ್ನ ರೀತಿ ಆಗಬೇಕು. ನನಗೆ ಭಾಗ್ಯಾ ಇಷ್ಟ ಇಲ್ಲ ಅಂದ್ರೂ ಅವಳ ಜೊತೆ ಬದುಕ್ತಿದ್ದೇನೆ. ಹಾಗೆಯೇ ಹಳ್ಳಿ ಗುಗ್ಗು ಲಕ್ಷ್ಮೀ ಜೊತೆ ವೈಷ್ಣವ್ ಮದುವೆ ಆಗಬೇಕು. ವೈಷ್ಣವ್ ನಿತ್ಯ ಮನಸ್ಸಿನಲ್ಲಿ ಒದ್ದಾಡಬೇಕು. ಪ್ರೀತಿ ಮಾಡಿರುವ ಕೀರ್ತಿಯನ್ನು ಮದುವೆಯಾಗಲು ಆಗದೆ, ಲಕ್ಷ್ಮೀ ಜೊತೆ ಬದುಕಲು ಆಗದೆ ಒದ್ದಾಡಬೇಕು" ಎಂದು ತಾಂಡವ್ ಬಯಸುತ್ತಿದ್ದಾನೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ