ಆ್ಯಪ್ನಗರ

ಬಿಗ್‌ ಮಂದಿಗೆ ಶಾಕ್‌ ಕೊಟ್ಟ ಬಾರ್ಬೀ ಡಾಲ್‌ ನಿವೇದಿತಾ!

ಬಿಗ್‌ಬಾಸ್‌ ಮನೆಯಲ್ಲಿ ನಿವೇದಿತಾ ಗೌಡ ಅವರನ್ನು ಚಿಕ್ಕ ಹುಡುಗಿಯಂತಲೇ ಕೆಲವರು ಟ್ರೀಟ್‌ ಮಾಡುತ್ತಿದ್ದಾರೆ.

Vijaya Karnataka Web 21 Nov 2017, 10:39 am
ಬಿಗ್‌ಬಾಸ್‌ ಮನೆಯಲ್ಲಿ ನಿವೇದಿತಾ ಗೌಡ ಅವರನ್ನು ಚಿಕ್ಕ ಹುಡುಗಿಯಂತಲೇ ಕೆಲವರು ಟ್ರೀಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ಆಕೆ ಚಿಕ್ಕ ಹುಡುಗಿಯಲ್ಲ ತುಂಬಾ ಸ್ಮಾರ್ಟ್‌ ಎಂಬ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಇದಕ್ಕೂ ಹೆಚ್ಚಾಗಿ ಆಕೆ ದುರ್ಬಲ ಎಂದು ನಂಬಿದ್ದರು.
Vijaya Karnataka Web bigg boss barbie doll becomes the captain of the house
ಬಿಗ್‌ ಮಂದಿಗೆ ಶಾಕ್‌ ಕೊಟ್ಟ ಬಾರ್ಬೀ ಡಾಲ್‌ ನಿವೇದಿತಾ!


ಆದರೆ ಎಲ್ಲರ ಅಭಿಪ್ರಾಯಗಳನ್ನು ಸುಳ್ಳು ಮಾಡಿದ ಬಾರ್ಬೀ ಡಾಲ್‌ ಬಿಗ್‌ ಮನೆಯ 6ನೇ ಕ್ಯಾಪ್ಟನ್‌ ಆಗಿ ಅಧಿಕಾರ ವಹಿಸಿಕೊಂಡರು. ಸೋಮವಾರದ ಎಪಿಸೋಡ್‌ನಲ್ಲಿ ಕ್ಯಾಪ್ಟನ್‌ ಆಯ್ಕೆ ಪ್ರಕ್ರಿಯೆ ವಿಭಿನ್ನವಾಗಿ ನಡೆಯಿತು. ಈ ಪ್ರಕ್ರಿಯೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

ಬಿಗ್‌ಬಾಸ್‌ ಕೇಳಿದ ಪ್ರಶ್ನೆಗಳಿಗೆ ಉಳಿದವರಿಗಿಂತ ಹೆಚ್ಚು ಸರಿ ಉತ್ತರಗಳನ್ನು ನೀಡುವ ಮೂಲಕ ನಿವೇದಿತಾ ಗೌಡ 6ನೇ ವಾರದ ಕ್ಯಾಪ್ಟನ್‌ ಆಗಿ ಆಯ್ಕೆಯಾದರು. ಇನ್ನು ಬಿಗ್‌ಬಾಸ್‌ ಮನೆಯಲ್ಲಿ ಬಾರ್ಬೀ ಡಾಲ್‌ ಆಡಳಿತ ಯಾವ ರೀತಿ ಇರುತ್ತೆ ಅಂತ ಮುಂದಿನ ಎಪಿಸೋಡ್‌ಗಳಲ್ಲಿ ಗೊತ್ತಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ