ಆ್ಯಪ್ನಗರ

ಬಾಯ್‌ಫ್ರೆಂಡ್ ಜತೆ 'ಬಿಗ್ ಬಾಸ್' ಗೌತಮಿ ಗೌಡ ನಿಶ್ಚಿತಾರ್ಥ

ಕನ್ನಡ ಕಿರುತೆರೆ ನಟಿ ಗೌತಮಿ ಗೌಡ ಹಸೆಮಣೆ ಏರಲಿದ್ದಾರೆ. ಕನ್ನಡದ ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿಕೊಂಡ ಗೌತಮಿ ಗೌಡ ತನ್ನ ಚಿರಕಾಲದ ಮಿತ್ರ ಜಾರ್ಜ್ ಕ್ರಿಸ್ಟಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

TNN 3 May 2018, 2:56 pm
ಕನ್ನಡ ಕಿರುತೆರೆ ನಟಿ ಗೌತಮಿ ಗೌಡ ಹಸೆಮಣೆ ಏರಲಿದ್ದಾರೆ. ಕನ್ನಡದ ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿಕೊಂಡ ಗೌತಮಿ ಗೌಡ ತನ್ನ ಚಿರಕಾಲದ ಮಿತ್ರ ಜಾರ್ಜ್ ಕ್ರಿಸ್ಟಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Vijaya Karnataka Web gowthami-gowda


ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿಕೊಂಡಿರುವ ಗೌತಮಿ, "ಪ್ರೀತಿಪಾತ್ರರು ಸಿಗುವುದು ಅದೃಷ್ಟ. ಆದರೆ ಅವರನ್ನೇ ವರಿಸುತ್ತಿರುವುದು ನನ್ನ ಸೌಭಾಗ್ಯ. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ಮದುವೆ ದಿನಾಂಕ ಶೀಘ್ರ ತಿಳಿಸುತ್ತೇನೆ. ಎಂದಿನಂತೆ ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಇರಲಿ" ಎಂದಿದ್ದಾರೆ.

ಬಹಳಷ್ಟು ವರ್ಷಗಳಿಂದ ಗೆಳೆಯರಾಗಿದ್ದ ಗೌತಮಿ ಮತ್ತು ಜಾರ್ಜ್ ನಡುವೆ ಪ್ರೀತಿ ಅಂಕುರಿಸಿ ಈಗ ಮದುವೆ ಮೂಲಕ ಒಂದಾಗುತ್ತಿದ್ದಾರೆ. ಇವರಿಬ್ಬರದ್ದೂ ಅಂತರ್ ಧರ್ಮೀಯ ವಿವಾಹವಾದರೂ ಇವರ ಪ್ರೀತಿಗೆ ಯಾವುದೇ ಧರ್ಮ ಅಡ್ಡಬಂದಿಲ್ಲ. ಮದುವೆಗೆ ಇನ್ನೂ ಮುಹೂರ್ತ ಫಿಕ್ಸ್ ಆಗದಿದ್ದರೂ ಇದೇ ವರ್ಷ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ.

ಚಿ ಸೌ ಸಾವಿತ್ರಿ, ಮುತ್ತಿನ ಪಲ್ಲಕ್ಕಿ ಧಾರಾವಾಹಿಗಳಲ್ಲೂ ಗೌತಮಿ ಗೌಡ ಅಭಿನಯಿಸಿದ್ದಾರೆ. ಪೂರ್ಣ ಸತ್ಯ, ಶಾದಿ ಭಾಗ್ಯ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅದರೆ ಗೌತಮಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಬಿಗ್ ಬಾಸ್ ಸೀಸನ್ 3. ಇಂಜಿನಿಯರ್ ಆಗಿರುವ ಅವರು ಶಾಸ್ತ್ರೀಯ ನೃತ್ಯ ಪಟುವೂ ಹೌದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ