ಆ್ಯಪ್ನಗರ

Kuri Prathap: 'ಮಜಾ ಟಾಕೀಸ್‌' ಪ್ರಸಾರಕ್ಕೆ ಡೇಟ್ ಫಿಕ್ಸ್! ನಗಿಸಲು ಕುರಿ ಪ್ರತಾಪ್‌ ರೆಡಿ

ಕನ್ನಡದ ಜನಪ್ರಿಯ ಕಾಮಿಡಿ ಶೋ 'ಮಜಾ ಟಾಕೀಸ್‌' ಪ್ರಸಾರಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಸೃಜನ್ ಲೋಕೇಶ್‌ ನಡೆಸಿಕೊಡುವ ಶೋ ಬಗ್ಗೆ ನಟ ಕುರಿ ಪ್ರತಾಪ್ ಮಾತನಾಡಿದ್ದು, ಆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 23 Aug 2020, 12:22 pm
ಕನ್ನಡ ಕಿರುತೆರೆಯ ಜನಪ್ರಿಯ ಶೋ 'ಮಜಾ ಟಾಕೀಸ್‌' ಮತ್ತೆ ಆರಂಭಗೊಳ್ಳಲಿದೆ. ಅದಕ್ಕಾಗಿ ಭರ್ಜರಿ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಆಗಸ್ಟ್ 29, ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಆಗಿ 'ಮಜಾ ಟಾಕೀಸ್‌' ಲಾಂಚ್ ಆಗಲಿದೆ. ಸೃಜನ್ ಲೋಕೇಶ್‌ ನಿರ್ಮಿಸಿ, ನಿರೂಪಣೆ ಮಾಡುವ ಈ ಶೋಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಹಾಸ್ಯವೇ ಈ ಶೋನ ಹೈಲೈಟ್ ಆಗಿದೆ. ಕೆಲ ವರ್ಷಗಳಿಂದ ನಟ ಕುರಿ ಪ್ರತಾಪ್ ಕೂಡ ಈ ಶೋನ ಭಾಗವಾಗಿದ್ದಾರೆ. ಇದೀಗ 'ಮಜಾ ಟಾಕೀಸ್‌' ಮತ್ತೆ ಆರಂಭಗೊಳ್ಳುತ್ತಿರುವುದು ಅವರಿಗೆ ಸಿಕ್ಕಾಪಟ್ಟೆ ಖುಷಿ ತಂದಿದೆ.
Vijaya Karnataka Web bigg boss fame kuri prathap speaks about majaa talkies
Kuri Prathap: 'ಮಜಾ ಟಾಕೀಸ್‌' ಪ್ರಸಾರಕ್ಕೆ ಡೇಟ್ ಫಿಕ್ಸ್! ನಗಿಸಲು ಕುರಿ ಪ್ರತಾಪ್‌ ರೆಡಿ


'ಈ ಶೋ ಮತ್ತೆ ಶುರುವಾಗಿರುವುದಕ್ಕೆ ವೈಯಕ್ತಿಕವಾಗಿ ತುಂಬ ಎಕ್ಸೈಟ್ ಆಗಿದ್ದೇನೆ. ಲಾಕ್‌ಡೌನ್‌ನಿಂದಾಗಿ ನಾನು ಕ್ಯಾಮೆರಾವನ್ನು ತುಂಬ ಮಿಸ್ ಮಾಡಿಕೊಂಡಿದ್ದೇನೆ. ಮತ್ತೆ ಸೆಟ್‌ಗೆ ಮರಳಲು ನಾನು ತುಂಬ ಥ್ರಿಲ್ ಆಗಿದ್ದೇನೆ. ಈ ಕೊರೊನಾ ಕಿರಿಕಿರಿಯಿಂದ ಬೇಸರಗೊಂಡಿರುವ ಜನರಿಗೆ 'ಮಜಾ ಟಾಕೀಸ್‌'ನ ಈ ಹೊಸ ಸೀಸನ್‌ ತುಂಬ ಮನರಂಜನೆ ನೀಡಲಿದೆ. ಅವರಲ್ಲಿ ನಗು ಮೂಡಿಸಲಿದೆ. ಈ ಬೇಸರದಿಂದ ಹೊರಬರಲು ನಗುವೇ ಮದ್ದು' ಎಂದು ಹೇಳಿದ್ದಾರೆ ಕುರಿ ಪ್ರತಾಪ್‌.

ಈಗಾಗಲೇ 'ಮಜಾ ಟಾಕೀಸ್‌' ಆರಂಭಗೊಳ್ಳುವ ಕುರಿತು ಪ್ರೋಮೋಗಳು ರಿಲೀಸ್‌ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿವೆ. ಸೃಜನ್‌ ಲೋಕೇಶ್‌, ಕುರಿ ಪ್ರತಾಪ್‌ ಜೊತೆಗೆ ಮಂಡ್ಯ ರಮೇಶ್‌, ವಿಶ್ವ, ಪವನ್‌, ವಿ. ಮನೋಹರ್, ಅಪರ್ಣಾ, ಮಿಮಿಕ್ರಿ ದಯಾನಂದ್ ಮುಂತಾದವರು ಇದ್ದಾರೆ. 'ಮಜಾ ಟಾಕೀಸ್'ನಲ್ಲಿ ಕುರಿ ಪ್ರತಾಪ್ ಅವರ ಕಾಮಿಡಿ ಅಭಿಮಾನಿಗಳಿಗೆ ತುಂಬ ಹಿಡಿಸಿತ್ತು. ಈ ಹೊಸ ಸೀಸನ್‌ನಲ್ಲಿ ಯಾವ ರೀತಿ ಅವರ ಪಾತ್ರ ಇರಲಿದೆ ಎಂದು ಕಾದು ನೋಡಬೇಕಿದೆ. ಅಂದಹಾಗೆ, ಈ ಹಿಂದೆ 'ಮಜಾ ಟಾಕೀಸ್‌' ಬರೋಬ್ಬರಿ 500ಕ್ಕೂ ಅಧಿಕ ಸಂಚಿಕೆಗಳಲ್ಲಿ ಪ್ರಸಾರ ಕಂಡಿರುವುದು ದಾಖಲೆಯೇ ಸರಿ.

'ಮಜಾ ಟಾಕೀಸ್‌' ಹೊಸ ಸೀಸನ್‌ ಸದ್ಯದಲ್ಲೇ ಶುರು! ಸೃಜನ್‌ ಮಾಡಿಕೊಂಡ ಸೂಪರ್‌ ಪ್ಲ್ಯಾನ್‌ ಇಲ್ಲಿದೆ!

ಇನ್ನು, 'ಬಿಗ್‌ ಬಾಸ್‌' ಶೋಗೆ ಹೋಗಿಬಂದ ಮೇಲೆ ಪ್ರತಾಪ್ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಅತ್ತ ಸಿನಿಮಾಗಳಲ್ಲೂ ಬ್ಯುಸಿ ಆಗಿರುವ ಪ್ರತಾಪ್ ಕೈಯಲ್ಲಿ ಅನೇಕ ಆಫರ್‌ಗಳಿವೆ. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ 'ಪೊಗರು' ಚಿತ್ರದಲ್ಲಿ ಕುರಿ ಪ್ರತಾಪ್‌ ಪ್ರಮುಖ ಪಾತ್ರ ಮಾಡಿದ್ದಾರೆ. 'ಯುವರತ್ನ', 'ಭಜರಂಗಿ 2' ಚಿತ್ರಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ.

'ಮಜಾ ಟಾಕೀಸ್‌'ನ ವರಲಕ್ಷ್ಮೀ ಪಾತ್ರಧಾರಿ ಅಪರ್ಣಾ ಕಾಮಿಡಿ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೇಕೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ