ಆ್ಯಪ್ನಗರ

ನಿಮ್ಮ ಪರಿಸ್ಥಿತಿಯು ಮತ್ತೊಬ್ಬರಿಗೆ ಲಾಭವಾಗದಂತೆ ಎಚ್ಚರವಹಿಸಿ: 'ಬಿಗ್ ಬಾಸ್ ಕನ್ನಡ ಸೀಸನ್ 7' ಚೈತ್ರಾ ಕೋಟೂರ್!

'ಲಗ್ನಪತ್ರಿಕೆ' ಧಾರಾವಾಹಿ ನಟಿ ಚೈತ್ರಾ ಕೋಟೂರ್, ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚೈತ್ರಾ ಕೋಟೂರ್ ಅವರು ಜನರು ಹೇಗೆಲ್ಲ ಬೇರೆಯವರನ್ನು ಅವರ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿಕೊಟ್ಟಿದ್ದಾರೆ. ಅವರ ಸುದೀರ್ಘ ಲೇಖನ ಇಲ್ಲಿದೆ.

Vijaya Karnataka Web 19 Nov 2020, 12:22 pm
'ಬಿಗ್ ಬಾಸ್ ಕನ್ನಡ ಸೀಸನ್ 7'ರ ಮೂಲಕ ಕರ್ನಾಟಕದ ಜನರಿಗೆ ಹತ್ತಿರವಾದ ನಟಿ ಚೈತ್ರಾ ಕೋಟೂರ್ ನಟನೆ ಜೊತೆಗೆ ಲೇಖನಗಳನ್ನೂ ಕೂಡ ಬರೆಯುತ್ತಾರೆ. ನಿರ್ದೇಶಕ ಯೋಗರಾಜ್ ಭಟ್ ಜೊತೆ ಅವರು ಕೆಲಸ ಮಾಡಿದ್ದರು. ಇನ್ನು ಸಿನಿಮಾ ನಿರ್ದೇಶನ ಕೂಡ ಮಾಡಬೇಕು ಎಂದುಕೊಂಡಿರುವ ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಅವರ ಯೋಚನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಮ್ಮನ್ನು ಬೇರೆಯವರು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
Vijaya Karnataka Web bigg boss kannada season 7 chaitra kotoor article about situation
ನಿಮ್ಮ ಪರಿಸ್ಥಿತಿಯು ಮತ್ತೊಬ್ಬರಿಗೆ ಲಾಭವಾಗದಂತೆ ಎಚ್ಚರವಹಿಸಿ: 'ಬಿಗ್ ಬಾಸ್ ಕನ್ನಡ ಸೀಸನ್ 7' ಚೈತ್ರಾ ಕೋಟೂರ್!


ಚೈತ್ರಾ ಕೋಟೂರ್ ಸೋಶಿಯಲ್ ಮೀಡಿಯಾ ಪೋಸ್ಟ್!

ನಿಮ್ಮ ಪರಿಸ್ಥಿತಿಯು ಮತ್ತೊಬ್ಬರಿಗೆ ಲಾಭವಾಗದಂತೆ ಎಚ್ಚರವಹಿಸಿ. ಬಹುತೇಕ ಸಮಯ ದುರ್ಬಲ ಪರಿಸ್ಥಿತಿಗಳಲ್ಲಿ ಗಂಡು ಮತ್ತೊಬ್ಬ ಹೆಣ್ಣಿನ ಮೊರೆ ಅಥವಾ ಹೆಣ್ಣು ಮತ್ತೊಬ್ಬ ಗಂಡಿನ ಮೊರೆ ಹೋಗುವುದು ಸಾಮಾನ್ಯ. ಅಂದರೆ ಅದು ಪ್ರೀತಿ, ಪ್ರೇಮವೇ ಆಗಿರಬೇಕಿಲ್ಲ! ಗೆಳೆತನದ ಆಸರೆ ಆಗಿರಬಹುದು. ಆದರೆ ಸಮಸ್ಯೆ ಹುಟ್ಟುವುದೇ ಅಲ್ಲಿ! ನಿಮ್ಮ ದುರ್ಬಲ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಯಾಗುವ ಆ ವ್ಯಕ್ತಿ ನಿಮಗೂ ತಿಳಿಯದಂತೆ ನಿಮ್ಮನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸಿರುತ್ತಾರೆ ಅಥವಾ ಬಳಸಿಕೊಂಡಿರುತ್ತಾರೆ ಅಥವಾ ಭಾವನಾತ್ಮಕವಾಗಿ ನಿಮ್ಮನ್ನು ಹೇಗೆ ಹಿಡಿದಿಟ್ಟಿರುತ್ತಾರೆ ಎಂಬುದು ನಿಮ್ಮ ಅರಿವಿಗೆ ಆ ಸಮಯದಲ್ಲಿ ಬರದ ವಿಚಾರ ಅದು. ಕಾರಣ ನಿಮ್ಮ ಸಮಸ್ಯಯೇ ನಿಮಗೆ ದೊಡ್ಡದಾಗಿರುತ್ತದೆ. ಅದರ ಹೊರತಾಗಿ ಬೇರೇನೂ ಕಾಣುವುದೇ ಇಲ್ಲ.

ಮತ್ತೊಂದು ಕೈಬಂದು ತಲೆಸವರಿದರೆ, ಹೆಗಲ ತಟ್ಟಿದರೆ ಸಾಕು... ಆದರೆ ನಿಜಕ್ಕೂ ಅದೆಷ್ಟು ಕೈಗಳು ನಿಷ್ಕಾಮವಾಗಿ ನಿಮ್ಮನ್ನು ಮುಟ್ಟುವುದೆಂದು ಪರೀಕ್ಷಿಸಿಕೊಳ್ಳಿ...? ಯಾವುದೋ ಬೇಸರ, ದುಮ್ಮಾನಗಳನ್ನು ಇನ್ಯಾರೋ ಇನ್ಯಾವುದೋ ರೂಪದಲ್ಲಿ ಲಾಭವಾಗಿ ಪಡೆದು ಹೋಗುತ್ತಿರುತ್ತಾರೆ. ಸಮಸ್ಯೆ ಮೇಲೆ ಬಗೆಹರಿಯುತ್ತಿದೆ ಎಂದು ಭಾವಿಸುತ್ತಿರುವಂತೆ, ಮತ್ತೊಂದು ಸಮಸ್ಯೆ ತಂತಾನೇ ಇನ್ನೊಂದು ರೀತಿಯಲ್ಲಿ ತಳುಕು ಹಾಕಿಕೊಂಡಿರುತ್ತದೆ. ಆ ಸಮಸ್ಯಯು ಒಂದು ಸಮಸ್ಯೆ ಎಂದು ಅರಿಯಲು ಮತ್ತೊಂದಿಷ್ಟು ಸಮಯ ಮತ್ತು ಅದರಿಂದ ಹೊರ ಬರಲು ಒಂದಷ್ಟು ಸಮಯ.
Also Read-ಚೈತ್ರಾ ಕೋಟೂರ್ ಅವರಿಂದ ಸ್ಕ್ರಿಪ್ಟ್‌ ಬರೆಸಬೇಕು ಎಂದುಕೊಂಡಿದ್ದರು ರವಿ ಬೆಳಗೆರೆ!

ನನ್ನ ಸಲಹೆ ಇಷ್ಟೇ. ನೀವು ಎಷ್ಟೇ ಖಿನ್ನರಾಗಿರು. ಪರಿಸ್ಥಿತಿ ಎಷ್ಟೇ ಬಿಗಡಾಯಿಸಿರಲಿ... ಎಂದಿಗೂ ನಿಮ್ಮ ಸ್ಥಿತಿಯ ಲಾಭ ಪಡೆಯಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರಿಗೂ ಅವಕಾಶ ಮಾಡಿಕೊಡಬೇಡಿ. ಎಂಥಾ ಸ್ಥಿತಿಯಲ್ಲೂ ನಿಮ್ಮ ಮೇಲೆ ನಿಮ್ಮ ಸುತ್ತಲಿನವರ ಮೇಲೆ ಒಂದು ಸಣ್ಣ ಎಚ್ಚರವಿರಲಿ. ನಿಮಗೆ ನೀವೇ ಸಮಯ ಕೊಡಿ, ತಾಳ್ಮೆವಹಿಸಿ... ಖಂಡಿತ ನಿಮ್ಮ ಪರಿಸ್ಥಿತಿಗಳು ಬದಲಾಗಿ ಎಲ್ಲವೂ ಸರಿಯಾಗುವುದು. ಆತುರದಲ್ಲಿ ತಿಳಿಯದಂತೆ ಮತ್ತೊಂದು ಸಮಸ್ಯೆಗೆ ಸಿಲುಕಬೇಡಿ

Also read-'ಲಗ್ನ ಪತ್ರಿಕೆ' ಧಾರಾವಾಹಿ: ನೆಗೆಟಿವ್ ಪೋಷಾಕು ಧರಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ