ಆ್ಯಪ್ನಗರ

ಗಂಡಿಗಾಗಿ ಪ್ರಯತ್ನಪಟ್ಟಿರಿ, 3 ಹೆಣ್ಣು ಅಂತ ಬಿಗ್ ಬಾಸ್ ಸ್ಪರ್ಧಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು!

ಬಿಗ್ ಬಾಸ್ ಸ್ಪರ್ಧಿಯೋರ್ವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ಮೂರನೇ ಮಗು ಹುಟ್ಟಿತ್ತು. ಆದರೆ ನೆಟ್ಟಿಗರು ಗಂಡು ಮಗುವಿಗೆ ಪ್ರಯತ್ನ ಪಡುತ್ತಿದ್ದರೂ ಕೂಡ ಸಾಧ್ಯವಾಗಲಿಲ್ಲ ಅಂತ ಟ್ರೋಲ್ ಮಾಡಿದ್ದಾರೆ. ಇದಕ್ಕೆ ಆ ಬಿಗ್ ಬಾಸ್ ಸ್ಪರ್ಧಿ ಉತ್ತರ ನೀಡಿದ್ದಾರೆ.

Authored byಟೀನಾ | Vijaya Karnataka 24 Dec 2020, 10:14 pm
ಹಿಂದಿ ಕಿರುತೆರೆಯ ನಟ ಕರಣ್‌ವೀರ್ ಬೊಹ್ರಾ ಪತ್ನಿ ತೀಜಯ್ ಸಿಧು ಅವರು ರವಿವಾರ (ಡಿ 20) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ಅವರ ಮೂರನೇ ಮಗು. ನೆಟ್ಟಿಗರು ಕರಣ್‌ ದಂಪತಿಯನ್ನು ಟ್ರೋಲ್ ಮಾಡುತ್ತಿದ್ದು, ಅದಕ್ಕೆ ಕರಣ್ ತಿರುಗೇಟು ನೀಡಿದ್ದಾರೆ.
Vijaya Karnataka Web bigg boss karanvir bohra replies troll because of three daughters
ಗಂಡಿಗಾಗಿ ಪ್ರಯತ್ನಪಟ್ಟಿರಿ, 3 ಹೆಣ್ಣು ಅಂತ ಬಿಗ್ ಬಾಸ್ ಸ್ಪರ್ಧಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು!


4 ವರ್ಷಗಳ ಹಿಂದೆ ತೀಜಯ್ ಅವಳಿ-ಜವಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿಗೋಸ್ಕರ ಈ ದಂಪತಿ ಪ್ರಯತ್ನಪಡುತ್ತಿದ್ದರು. ಆದರೂ ಸಾಧ್ಯವಾಗಲಿಲ್ಲ ಅಂತ ನೆಟ್ಟಿಗರು ವ್ಯಂಗ್ಯವಾಡಿದ್ದರು. ಈ ಕಾಮೆಂಟ್‌ಗಳಿಗೆ ಆರಂಭದಲ್ಲಿ ಉತ್ತರ ನೀಡದ ಕರಣ್‌ವೀರ್ ಬೊಹ್ರಾ ಅವರು ಸಂದರ್ಶನವೊಂದರಲ್ಲಿ ತಿರುಗೇಟು ನೀಡಿದ್ದಾರೆ.

'ನಾನು ಕಾಮೆಂಟ್‌ಗಳೆಲ್ಲವನ್ನು ಓದಿದ್ದೇನೆ. ನಾವು ಗಂಡು ಮಕ್ಕಳಿಗೋಸ್ಕರ ಪ್ರಯತ್ನಪಡುತ್ತಿದ್ದೇವೆ ಅಂತ ಕೆಲವರು ಹೇಳಿದ್ದಾರೆ. ಗಂಡು ಮಗುವಾಗಲೀ, ಹೆಣ್ಣಾಗಲೀ ನಮಗೆ ಏನೂ ವ್ಯತ್ಯಾಸ ಆಗೋದಿಲ್ಲ. ಆರೋಗ್ಯಕರವಾದ ಮಗು ಆಗೋದು ತುಂಬ ಮುಖ್ಯ. ಇಂದಿನ ಕಾಲದಲ್ಲಿ ಗಂಡು ಅಥವಾ ಹೆಣ್ಣು ಅಂತ ಮಹತ್ವ ನೀಡಬಾರದು. ಏಕೆಂದರೆ ಮಕ್ಕಳಾಗಬೇಕು ಅಂದರೆ ಪುಣ್ಯ ಮಾಡಿರಬೇಕು. ಆ ರೀತಿ ಜನರು ಯೋಚಿಸಬೇಕು. ಪುರಾಣ ಕಾಲದಲ್ಲಿ ರಾಜರು ಅವರ ಉತ್ತರಾಧಿಕಾರಿ ಬೇಕು ಅಂತ ಬಯಸುತ್ತಿದ್ದರು. ಅವರಿಗೆ ಸಾಕಷ್ಟು ಆಸ್ತಿಯಿರುತ್ತಿತ್ತು, ಇಡೀ ರಾಜ್ಯವನ್ನು ನೋಡಿಕೊಳ್ಳಲು ಮಗ ಬೇಕು ಅಂತ ಬಯಸುತ್ತಿದ್ದಾರೆ. ಆದರೆ ಈಗ ಹಾಗಿಲ್ಲ, ರಾಣಿಯರು ಕೂಡ ಆಳ್ವಿಕೆ ಮಾಡಬಹುದು' ಎಂದು ಕರಣ್‌ವೀರ್ ಬೊಹ್ರಾ ಹೇಳಿದ್ದಾರೆ.

'ಭಾರತದಲ್ಲಿ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ. ಈಗ ನಾವು ಖುಷಿಯಾಗಿದ್ದೇವೆ. ಇನ್ನೂ ಮಗುವಿಗೆ ಹೆಸರಿಟ್ಟಿಲ್ಲ. ನಾವು ಯೋಚನೆ ಮಾಡುತ್ತಿದ್ದೇವೆ. ನಮ್ಮ ಮಕ್ಕಳಾದ ಬೆಲ್ಲಾ ಹಾಗೂ ವಿಯೆನ್ನಾ ಹೆಸರಿಡಲು ಮೂರು ತಿಂಗಳು ತೆಗೆದುಕೊಂಡೆವು. ಸ್ವೀಟಿ, ಕ್ಯೂಟಿ ಅಂತ ಈಗ ಕರೆಯುತ್ತಿದ್ದೇವೆ, ಇನ್ನು ಒಂದು ವಾರದೊಳಗೆ ಹೆಸರಿಡುತ್ತೇವೆ' ಎಂದು ಕರಣ್‌ವೀರ್ ಬೊಹ್ರಾ ಹೇಳಿದ್ದಾರೆ.

Also Read-ಮೂವರು ಹೆಣ್ಣು ಮಕ್ಕಳ ತಂದೆಯಾಗಿ ಬಡ್ತಿ ಪಡೆದ ಬಿಗ್ ಬಾಸ್ ಸ್ಪರ್ಧಿ, ಪ್ರಖ್ಯಾತ ಕಿರುತೆರೆ ನಟ!

'ನಮ್ಮ ಮನೆಯಲ್ಲಿ ಈಗ ಲಕ್ಷ್ಮೀ, ಸರಸ್ವತಿ, ಪಾರ್ವತಿ ಎಂಬ ಮೂವರು ದೇವಿಯರು. ಮೂವರು ಸುಂದರ ಹೆಣ್ಣುಮಕ್ಕಳ ತಂದೆ ಎಂದುಕೊಳ್ಳಲು ಹೆಮ್ಮೆ ಪಡುತ್ತೇನೆ. ನನ್ನ ಹಾಗೂ ತೀಜಯ್ ಬದುಕಲ್ಲಿ ಇನ್ನೊಂದು ಗಂಧರ್ವ ಕನ್ಯೆ ಆಗಮನವಾಗಿದೆ. ಬೆಲ್ಲಾ ಹಾಗೂ ವಿಯೆನ್ನಾ, ಪುಟ್ಟ ತಂಗಿಯನ್ನು ಮನೆಗೆ ಸ್ವಾಗತಿಸಲು ತುಂಬ ಉತ್ಸಾಹದಿಂದಿದ್ದಾರೆ. ಮನೆ ತುಂಬಿರುವ ಖುಷಿಯಿದೆ' ಎಂದು ಹೇಳಿದ್ದಾರೆ. ಕರಣ್‌ವೀರ್ ಬೊಹ್ರಾ ಅನೇಕ ಧಾರಾವಾಹಿಗಳಲ್ಲಿ, ಬಿಗ್ ಬಾಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

Also Read-ಗರ್ಭಿಣಿಯಾದರೂ ಸಣ್ಣಗಿದ್ದೀರಾ ಎಂದಿದ್ದಕ್ಕೆ ಆ ಪ್ರಖ್ಯಾತ ನಟನ ಪತ್ನಿ ಹೇಳಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ