ಆ್ಯಪ್ನಗರ

ಇತ್ತೀಚೆಗೆ ಈ ಬಿಗ್ ಬಾಸ್ ಸ್ಪರ್ಧಿಯ 3ನೇ ಮದುವೆಯೂ ಮುರಿದು ಬಿತ್ತು; ಹೇರ್‌ಸ್ಟೈಲ್ ಬದಲಾಯ್ತು!

ಬಿಗ್ ಬಾಸ್ ಸ್ಪರ್ಧಿಯೋರ್ವರು ಲಾಕ್‌ಡೌನ್ ವೇಳೆ ಮೂರನೇ ಬಾರಿಗೆ ಮದುವೆಯಾಗಿದ್ದರು. ಈಗ ಆ ಮದುವೆ ಕೂಡ ಮುರಿದು ಬಿದ್ದಿದೆ. ಇನ್ನು ಅವರು ಹೇರ್‌ಸ್ಟೈಲ್ ಬದಲಿಸಿಕೊಂಡು, ಕುತ್ತಿಗೆ ಮೇಲೆ ಹಚ್ಚೆ ಹಾಕಿಸಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ.

THE TIMES OF INDIA NEWS SERVICE 2 Dec 2020, 5:45 pm
ಅತಿ ಹೆಚ್ಚು ವಿವಾದಗಳನ್ನು ಮಾಡಿಕೊಂಡು ಸುದ್ದಿಯಲ್ಲಿರುವ ನಟಿ, ಬಿಗ್ ಬಾಸ್ ತಮಿಳು ಸ್ಪರ್ಧಿ ವನಿತಾ ವಿಜಯ್‌ಕುಮಾರ್ ಅವರು ಈಗ ಹೊಸ ಹೇರ್‌ಸ್ಟೈಲ್‌ ಮಾಡಿಕೊಂಡು ಪ್ರೇಕ್ಷರಿಗೆ ಅಚ್ಚರಿ ಮೂಡಿಸಿದ್ದಾರೆ. ಕಳೆದ ಕೆಲ ತಿಂಗಳುಗಳ ಹಿಂದೆ ಅವರ ಮೂರನೇ ಮದುವೆ ಅತಿ ಕಡಿಮೆ ಅವಧಿಯಲ್ಲಿ ಮುರಿದಿತ್ತು.
Vijaya Karnataka Web bigg boss vanitha vijayakumar new hair style and tatto
ಇತ್ತೀಚೆಗೆ ಈ ಬಿಗ್ ಬಾಸ್ ಸ್ಪರ್ಧಿಯ 3ನೇ ಮದುವೆಯೂ ಮುರಿದು ಬಿತ್ತು; ಹೇರ್‌ಸ್ಟೈಲ್ ಬದಲಾಯ್ತು!


ಹೇರ್ ಸ್ಟೈಲ್ ಬದಲಾಯ್ತು, ಕುತ್ತಿಗೆ ಮೇಲೆ ಹಚ್ಚೆ ಬಂತು

ಕೂದಲಿಗೆ ವಿಧ ವಿಧವಾದ ಕಲರಿಂಗ್ ಮಾಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವನಿತಾ, 'ಇದು ಹಬ್ಬಗಳ ಸಮಯ. ಹೀಗಾಗಿ ನನ್ನ ಕೂದಲಿಗೆ ಇನ್ನಷ್ಟು ಬಣ್ಣ ಹಾಕಲು ಯೋಚಿಸಿದೆ. ಈ ಮೂಲಕ ಹಬ್ಬ ಆಚರಿಸಲು ಆರಂಭಿಸೋಣ ಅಂತ ಅಂದುಕೊಂಡೆ. ಕುತ್ತಿಗೆ ಹತ್ತಿರ ಹಾಕಿಸಿಕೊಂಡಿರುವ ಹೃದಯದ ಚಿಹ್ನೆ ಅರ್ಥವೆಂದರೆ-ಅಂತ್ಯದತ್ತ' ಎಂದು ಹೇಳಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಪೀಟರ್ ಪೌಲ್ ಹೆಸರನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು, ಪೀಟರ್ ಕೂಡ ವನಿತಾ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು.

ಪೀಟರ್ ಪೌಲ್ ಆರೋಗ್ಯಕ್ಕಾಗಿ 15 ಲಕ್ಷ ರೂ ಖರ್ಚು

ವನಿತಾ ವರ್ತನೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಮೂರನೇ ಮದುವೆ ಮುರಿದ ನಂತರದಲ್ಲಿ ಅವರು ಮತ್ತೆ ಚೇತರಿಸಿಕೊಂಡು ಖುಷಿಯಾಗಿರೋದು ಕೆಲವರಿಗೆ ಸಂತಸ ಮೂಡಿಸಿದೆ. ಇನ್ನು ಪೀಟರ್ ಪೌಲ್ ಅವರು ಸಿಕ್ಕಾಪಟ್ಟೆ ಕುಡಿಯುತ್ತಾರೆ, ದುಡ್ಡಿಗಾಗಿ ಕಂಡ ಕಂಡವರ ಹತ್ತಿರ ಬೇಡುತ್ತಾರೆ. 15 ಲಕ್ಷ ರೂಪಾಯಿಗಳಿಗೂ ಹೆಚ್ಚು ಖರ್ಚು ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಿದ್ದಾಗಿ ವನಿತಾ ಹೇಳಿದ್ದರು.

Also Read-ಬಿಗ್ ಬಾಸ್ ಸ್ಪರ್ಧಿಯ 3ನೇ ಮದುವೆ ಅಂತ್ಯ: ಸಂಬಂಧ ಸರಿಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರಾ ಆ ನಟಿ?

ತಾಯಿ ಮನೆಯವರಿಂದ ವನಿತಾ ದೂರ!

ಇನ್ನು ವನಿತಾ ಮೂರನೇ ಮದುವೆಯಾಗುತ್ತಿರುವ ವಿಚಾರ ಸಾಕಷ್ಟು ಸೌಂಡ್ ಮಾಡಿತ್ತು. ಮೂರು ಮಕ್ಕಳ ತಾಯಿ ಈ ವಯಸ್ಸಲ್ಲಿ ಮತ್ತೊಂದು ಮದುವೆಯಾಗುತ್ತಿರೋದನ್ನು ಹಲವರು ಅಣುಕಿಸಿದ್ದರು. ಪೀಟರ್ ಪೌಲ್ ಕೂಡ ಮೊದಲ ಪತ್ನಿಗೆ ವಿಚ್ಛೇದನ ಕೊಡದೆ ವನಿತಾರನ್ನು ಮದುವೆಯಾಗಿದ್ದರು. ಪೀಟರ್ ಮೇಲೆ ಅವರ ಮೊದಲ ಪತ್ನಿ ಈ ವಿಷಯಕ್ಕಾಗಿ ದೂರು ಕೂಡ ದಾಖಲಿಸಿದ್ದರು. ವನಿತಾ ಜೊತೆ ಅವರ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಅವರ ತಂದೆ-ತಾಯಿ, ಸಹೋದರ ಸಹೋದರಿಯರ ಜೊತೆ ವನಿತಾ ಸಂಬಂಧ ಚೆನ್ನಾಗಿಲ್ಲ.

Also Read-ಲಾಕ್‌ಡೌನ್‌ನಲ್ಲಿ ಮಾಡಿಕೊಂಡಿದ್ದ ಬಿಗ್ ಬಾಸ್ ಸ್ಪರ್ಧಿಯ 3ನೇ ಮದುವೆ ಅಂತ್ಯ: ನಡೆದಿದ್ದನ್ನು ವಿವರಿಸಿದ ನಟಿ ವನಿತಾ ವಿಜಯ್‌ಕುಮಾರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ