ಆ್ಯಪ್ನಗರ

ಇಂಥ ಕಷ್ಟದ ಟೈಮ್‌ನಲ್ಲೂ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಬ್ರಹ್ಮಗಂಟು' ಧಾರಾವಾಹಿ!

ಲಾಕ್‌ಡೌನ್ ನಡುವೆ ಸಾಕಷ್ಟು ಧಾರಾವಾಹಿಗಳು ಶಾಶ್ವತವಾಗಿ ತನ್ನ ಪ್ರಸಾರ ನಿಲ್ಲಿಸಿವೆ. ಹೀಗೆ ಅರ್ಧಕ್ಕೆ ನಿಂತ ಧಾರಾವಾಹಿಗಳನ್ನು ಲೆಕ್ಕ ಹಾಕಿ ನೋಡಿದರೆ 25ಕ್ಕೂ ಹೆಚ್ಚು ಸೀರಿಯಲ್ ಹೆಸರು ಸಿಗುತ್ತದೆ. ಆದರೆ ಇದರ ಮಧ್ಯೆ 'ಬ್ರಹ್ಮಗಂಟು' ಧಾರಾವಾಹಿ ಸಾಧನೆ ಮಾಡಿದೆ. ಏನದು?

Vijaya Karnataka Web 6 Jul 2020, 8:48 pm
ಪ್ರಖ್ಯಾತ ಕನ್ನಡ ಧಾರಾವಾಹಿ 'ಬ್ರಹ್ಮಗಂಟು' 800 ಎಪಿಸೋಡ್‌ಗಳನ್ನು ಪೂರ್ಣಗೊಳಿಸಿದೆ. ಈ ಧಾರಾವಾಹಿ ಹಲವರ ಮನಸ್ಸನ್ನು ಗೆದ್ದಿತ್ತು. 'ಬ್ರಹ್ಮಗಂಟು' ಸೀರಿಯಲ್ ಟಿಆರ್‌ಪಿಯಲ್ಲೂ ಕೂಡ ಒಳ್ಳೆಯ ಗಳಿಕೆ ಕಂಡಿತ್ತು.
Vijaya Karnataka Web bramhagantu kannada serial complete 800 episode
ಇಂಥ ಕಷ್ಟದ ಟೈಮ್‌ನಲ್ಲೂ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಬ್ರಹ್ಮಗಂಟು' ಧಾರಾವಾಹಿ!


'ಬ್ರಹ್ಮಗಂಟು' ಧಾರಾವಾಹಿಯ ಗೀತಾ ಅತಿಯಾದ ತೂಕ ಹೊಂದಿರುವಳು. ಇವಳನ್ನು ಹ್ಯಾಂಡ್‌ಸಮ್ ಹುಡುಗ ಲಕ್ಕಿ ಮದುವೆಯಾಗುತ್ತಾನೆ. ಮೊದಲು ಇವಳನ್ನು ತಿರಸ್ಕಾರದಿಂದ ನೋಡುತ್ತಿದ್ದ ಲಕ್ಕಿ ಆಮೇಲೆ ಇವಳನ್ನೇ ಪ್ರೀತಿ ಮಾಡುತ್ತಾನೆ. ಅವಳ ಜೊತೆ ಸೇರಿ ಆತ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ. ಕಬಡ್ಡಿಯಲ್ಲಿ ಚಾಂಪಿಯನ್ ಆಗಬೇಕು ಎಂದು ಆಸೆಯಿಟ್ಟುಕೊಂಡಿರುವ ಲಕ್ಕಿಗೆ ಸದಾ ಗೀತಾ ಪ್ರೋತ್ಸಾಹ ನೀಡುತ್ತಾಳೆ. ಆದರೆ ಗೀತಾಳನ್ನು ಸದಾ ಅಪರಾಧಿಯನ್ನಾಗಿ ಮಾಡಲು ದತ್ತನ ಪತ್ನಿ ಪ್ರಯತ್ನಪಡುತ್ತಿರುತ್ತಾಳೆ. ಹೀಗೆ ಎಲ್ಲ ಕಷ್ಟವನ್ನು ಗೀತಾ ಹೇಗೆ ಎದುರಿಸುತ್ತಾಳೆ ಎಂಬುದೇ ಈ ಧಾರಾವಾಹಿ ಕಥೆ.

ದೇಸಿ ಕ್ರೀಡೆ ಕಬಡ್ಡಿಯ ಮಹತ್ವದ ಬಗ್ಗೆ ಈ ಧಾರಾವಾಹಿ ಹೇಳುತ್ತದೆ. ಹಿಂದಿಯ 'ಬಡೋ ಬಹು' ಧಾರಾವಾಹಿಯ ರಿಮೇಕ್ 'ಬ್ರಹ್ಮಗಂಟು' ಆಗಿದೆ. ಗೀತಾ ಭಾರತಿ ಭಟ್ ಈ ಧಾರಾವಾಹಿಯಲ್ಲಿ ಗೀತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಗುಂಡಮ್ಮ ಎಂದು ಇವರಿಗೆ ಕರೆಯಲಾಗುತ್ತದೆ. ಗುಂಡಮ್ಮ ಪಾತ್ರಧಾರಿಯಾಗಿ ಗೀತಾ ನಟನೆ ಜೊತೆಗೆ ಹಾಡು ಕೂಡ ಹಾಡುತ್ತ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

Also Read-ಜನರಿಗೆ ರಿಯಾಲಿಟಿ ಶೋಗಳೆಂದರೆ ಯಾಕಿಷ್ಟು ಹುಚ್ಚು? ಇದರಿಂದ ಆಗುವ ಹಾನಿ ಬಗ್ಗೆ ನಿಮಗೆ ಮಾಹಿತಿ ಇದೆಯೇ?

ಭರತ್ ಬೋಪ್ಪಣ್ಣ ಅವರು ಲಕ್ಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ಧಾರೆ. ಬೆಂಗಳೂರು ಟೈಮ್ಸ್ ಏರ್ಪಿಡಿಸಿದ್ದ 'ಟಾಪ್ ಡಿಸೈರೇಬಲ್ ಮೆನ್ ಆಫ್ ಕನ್ನಡ ಟಿವಿ'ಯ ಸಾಲಿನಲ್ಲಿ ಅವರು ಸ್ಥಾನ ಪಡೆದುಕೊಂಡಿದ್ದರು. ಟಿ ಎಸ್ ನಾಗಾಭರಣ ಈ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದರು. 'ತೆನಾಲಿ ರಾಮ', 'ನಮ್ಮ ನಮ್ಮಲ್ಲಿ' ಮುಂತಾದ ಧಾರಾವಾಹಿಯನ್ನು ಇವರು ಈ ಹಿಂದೆ ನಿರ್ದೇಶನ ಮಾಡಿದ್ದರು. ನಟಿ ಸ್ವಾತಿ ಅವರು ಲಕ್ಕಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಾಯತ್ರಿ ಪ್ರಭಾಕರ್, ವನಿತಾ ವಾಸಯ, ಶೋಭಾ ಶಿವಣ್ಣ, ಹರ್ಷ, ಪ್ರಥಮಾ ಪ್ರಸಾದ್ ಈ ಧಾರಾವಾಹಿಯ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Also Read-'ಬ್ರಹ್ಮಗಂಟು' ಧಾರಾವಾಹಿಯ ಗೀತಾ ವೈಯಕ್ತಿಕ ಬದುಕಿನ ಹಿಂದಿದೆ ನೋವಿನ ಕಹಾನಿ !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ