ಆ್ಯಪ್ನಗರ

ಭತ್ತದ ನಾಡಿನಲ್ಲಿ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ ಶಿಪ್‌ ಫಿನಾಲೆ

ಕಾಮಿಡಿ ಕಿಲಾಡಿಗಳು ಚಾಂಪಿಯನ್‌ ಶಿಪ್‌ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮ ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಡೆದಿದೆ. ಈ ವರ್ಣರಂಜಿತ ಶೋನ ಪ್ರಸಾರ ಇದೇ ಭಾನುವಾರ (ಅ.14)ದಂದು ಸಂಜೆ 7.30ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Vijaya Karnataka 13 Oct 2018, 10:49 am
* ಶರಣು ಹುಲ್ಲೂರು
Vijaya Karnataka Web comedy-kiladigalu


ಜನಪ್ರಿಯ ಕಾಮಿಡಿ ಶೋ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು ಚಾಂಪಿಯನ್‌ ಶಿಪ್‌' ಶೋ ಭತ್ತದ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಿತು. ಈ ಶೋಗೆ ಅಸಂಖ್ಯಾತ ಪ್ರೇಕ್ಷಕರು ಸಾಕ್ಷಿಯಾಗಿದ್ದರು.

ಫಿನಾಲೆ ವೇದಿಕೆಯಲ್ಲಿ ಮರೆಗುಳಿ ಫ್ಯಾಮಿಲಿ, ಈಗೋ ಫ್ರೆಂಡ್ಸ್‌, ಮೊಬೈಲ್‌ ಅವಾಂತರ, ಇರುಳುಗಣ್ಣು ಫ್ಯಾಮಿಲೀಸ್‌, ಸಿನಿಮಾ ಶೂಟಿಂಗ್‌ ಮತ್ತು ಮಹಾನಟಿ.. ಹೀಗೆ ಹೊಸ ಬಗೆಯ ಸ್ಕಿಟ್‌ಗಳನ್ನು ಕಿಲಾಡಿಗಳು ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಮೆರಗು ಎನ್ನುವಂತೆ ಜ್ಯೂನಿಯರ್‌ ಬೀಚಿ ಎಂದೇ ಖ್ಯಾತರಾಗಿರುವ ಗಂಗಾವತಿ ಪ್ರಾಣೇಶ್‌ ಬಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಆರು ಕಿಲಾಡಿ ತಂಡಗಳ ನಡುವೆ ನಡೆದ ನೇರ ಹಣಾಹಣೆ ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿದೆ. ಜತೆಗೆ ಯೋಗರಾಜ್‌ ಭಟ್‌ ನಿರ್ದೇಶನದ ಪಂಚತಂತ್ರ ಸಿನಿಮಾ ತಂಡ ಏರ್ಪಡಿಸಿದ್ದ ಸೆಲ್ಫಿ ಸ್ಪರ್ಧೆಯಲ್ಲಿ ಗೆದ್ದವರಿಗೂ ಬಹುಮಾನ ನೀಡಲಾಯಿತು.

ಅಹೋರಾತ್ರಿ ನಡೆದ ಈ ಶೋ ಮುಕ್ತಾಯವಾಗಿದ್ದು ಮರುದಿನ ಬೆಳಗ್ಗೆ ಚಾಂಪಿಯನ್‌ ಶಿಪ್‌ ಪಟ್ಟ ಯಾರಿಗೆ ಒಲಿಯಿತು ಎಂಬುದನ್ನು ಘೋಷಣೆ ಮಾಡುವ ಮೂಲಕ. ಅಂದಹಾಗೆ ಗೆದ್ದ ಕಿಲಾಡಿ ತಂಡ ಯಾವುದು ಎಂಬ ಕುತೂಹಲಕ್ಕೆ ಇದೇ ಭಾನುವಾರ (ಅ.14) ತೆರೆ ಬೀಳಲಿದೆ. ಭಾನುವಾರ ಸಂಜೆ 7.30ರಿಂದ ಜೀ ಕನ್ನಡ ವಾಹಿನಿಯಲ್ಲಿ ಗ್ರಾ ್ಯಂಡ್‌ ಫಿನಾಲೆ ಶೋ ಪ್ರಸಾರವಾಗಲಿದೆ.

ಎಂದಿನಂತೆ ಕಾರ್ಯಕ್ರಮದ ತೀರ್ಪುಗಾರರಾಗಿರುವ ಜಗ್ಗೇಶ್‌, ನಿರ್ದೇಶಕ ಯೋಗರಾಜ್‌ ಭಟ್‌, ನಟಿ ರಕ್ಷಿತಾ ಅವರ ಮಾತಿನ ಕಚಗುಳಿಯೂ ಇದೆ. ಮಾಸ್ಟರ್‌ ಆನಂದ್‌ ಅವರ ಲವಲವಿಕೆಯ ನಿರೂಪಣೆ ಮತ್ತು ವೇದಿಕೆಗೆ ಆಗಮಿಸಲು ಮಾಡಿದ ಡಾನ್ಸ್‌ ಗಳು ಸಂಭ್ರಮವನ್ನು ಹೆಚ್ಚುವಂತೆ ಮಾಡಿವೆ.

ಕಿಲಾಡಿಗಳಿಗೆ ಮಾರ್ಗದರ್ಶಕರಾಗಿ ಒಂದೊಂದು ತಂಡವನ್ನು ಜ್ಯೂರಿ ಮೆಂಟರ್‌ಗಳಾಗಿ ಮುನ್ನೆಡೆಸಿರುವ ಹಾಸ್ಯ ಕಲಾವಿದರಾದ ಟೆನ್ನಿಸ್‌ ಕೃಷ್ಣ, ಸರಿಗಮವಿಜಿ, ರೇಖಾದಾಸ್‌ ಹಾಗೂ ಆರ್‌.ಟಿ. ರಮಾ ತಮ್ಮ ವೃತ್ತಿ ಜೀವನದ ಹಾಸ್ಯ ಸನ್ನಿವೇಶಗಳನ್ನು ಮೆಲುಕು ಹಾಕಿದ್ದಾರೆ.

ಗಂಗಾವತಿಯಲ್ಲಿ ನಡೆದ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ ಶಿಪ್‌ ಗ್ರಾ ್ಯಂಡ್‌ ಫಿನಾಲೆ ಹಲವು ದಾಖಲೆಗಳಿಗೆ ಸಾಕ್ಷಿ ಆಯಿತು. ಅಸಂಖ್ಯಾತ ಅಭಿಮಾನಿಗಳ ಮಧ್ಯೆ ನಡೆದ ಫಿನಾಲೆಯಲ್ಲಿ ಕಿಲಾಡಿಗಳು ಹೊಸ ಬಗೆಯ ಸ್ಕಿಟ್‌ಗಳಲ್ಲಿ ನಟಿಸಿದರು. ಭರ್ಜರಿ ಮನರಂಜನೆಯೊಂದಿಗೆ ಚಾಂಪಿಯನ್‌ ಶಿಪ್‌ ಪ್ರಸಾರವಾಗಲಿದೆ.
ರಾಘವೇಂದ್ರ ಹುಣಸೂರು, ಮುಖ್ಯಸ್ಥರು, ಜೀ ಕನ್ನಡ ವಾಹಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ