ಆ್ಯಪ್ನಗರ

Doresani: ಮೊದಲೇ ಪುರುಷೋತ್ತಮ್‌ಗೆ ಹಾರ್ಟ್‌ ವೀಕ್: ಅಂಥದ್ರಲ್ಲಿ ದೀಪಿಕಾ-ಆನಂದ್ ಲವ್ ಮ್ಯಾಟರ್ ಗೊತ್ತಾದ್ರೆ?

‘ದೊರೆಸಾನಿ’ ಧಾರಾವಾಹಿಯಲ್ಲಿ ಪುರುಷೋತ್ತಮ್ ಎದುರು ನಿಂತು ‘ಗೂಬೆ ಬಾಸ್’ ಆನಂದ್ ಕ್ಷಮೆ ಕೇಳಿದ್ದಾಯ್ತು. ‘ಗೂಬೆ ಬಾಸ್’ ಆನಂದ್‌ನ ಮನಸಾರೆ ಕ್ಷಮಿಸಿದ್ದೇನೆ ಅಂತ ಪುರುಷೋತ್ತಮ್ ಹೇಳಿದ್ದೂ ಆಯ್ತು. ಪುರುಷೋತ್ತಮ್ ಮಗಳು ದೀಪಿಕಾಳನ್ನ ನೋಡೋಕೆ ಬಂದಿರುವ ಗಂಡು ಆನಂದ್ ಎಂಬ ವಿಷಯ ಪುರುಷೋತ್ತಮ್‌ಗೆ ಇನ್ನೂ ಗೊತ್ತಾಗಿಲ್ಲ. ಮೊದಲೇ ಪುರುಷೋತ್ತಮ್‌ಗೆ ಹಾರ್ಟ್ ವೀಕು.. ಹೀಗಿರುವಾಗ, ದೀಪಿಕಾ ಮತ್ತು ಆನಂದ್‌ ಮದುವೆಗೆ ಪುರುಷೋತ್ತಮ್ ಗ್ರೀನ್ ಸಿಗ್ನಲ್ ಕೊಡುತ್ತಾರಾ?

Authored byಹರ್ಷಿತಾ ಎನ್ | Vijaya Karnataka Web 2 May 2022, 9:06 pm

ಹೈಲೈಟ್ಸ್‌:

  • ರೋಚಕ ಹಂತ ತಲುಪಿದ ‘ದೊರೆಸಾನಿ’ ಧಾರಾವಾಹಿ
  • ಪುರುಷೋತ್ತಮ್ ಮುಂದೆ ದೀಪಿಕಾ ಜೊತೆಗಿನ ಲವ್ ಮ್ಯಾಟರ್ ಬಿಚ್ಚಿಡುತ್ತಾರಾ ಆನಂದ್
  • ಆನಂದ್ - ದೀಪಿಕಾ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರಾ ಪುರುಷೋತ್ತಮ್?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web doresani serial written update will anand reveal his love story with deepika in front of purushottam
Doresani: ಮೊದಲೇ ಪುರುಷೋತ್ತಮ್‌ಗೆ ಹಾರ್ಟ್‌ ವೀಕ್: ಅಂಥದ್ರಲ್ಲಿ ದೀಪಿಕಾ-ಆನಂದ್ ಲವ್ ಮ್ಯಾಟರ್ ಗೊತ್ತಾದ್ರೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ದೊರೆಸಾನಿ’ ಕೂಡ ಒಂದು. ‘ದೊರೆಸಾನಿ’ ಧಾರಾವಾಹಿಯ ಕಥೆ ವೇಗವಾಗಿ ಸಾಗುತ್ತಿದ್ದು, ಇದೀಗ ರೋಚಕ ಹಂತ ತಲುಪಿದೆ. ಪುರುಷೋತ್ತಮ್ ಎದುರು ನಿಂತು ‘ಗೂಬೆ ಬಾಸ್’ ಆನಂದ್ ಕ್ಷಮೆ ಕೇಳಿದ್ದಾಯ್ತು. ‘ಗೂಬೆ ಬಾಸ್’ ಆನಂದ್‌ನ ಮನಸಾರೆ ಕ್ಷಮಿಸಿದ್ದೇನೆ ಅಂತ ಪುರುಷೋತ್ತಮ್ ಹೇಳಿದ್ದೂ ಆಯ್ತು. ಪುರುಷೋತ್ತಮ್ ಮಗಳು ದೀಪಿಕಾಳನ್ನ ನೋಡೋಕೆ ಬಂದಿರುವ ಗಂಡು ಆನಂದ್ ಎಂಬ ವಿಷಯ ಪುರುಷೋತ್ತಮ್‌ಗೆ ಇನ್ನೂ ಗೊತ್ತಾಗಿಲ್ಲ. ಮೊದಲೇ ಪುರುಷೋತ್ತಮ್‌ಗೆ ಹಾರ್ಟ್ ವೀಕು.. ಹೀಗಿರುವಾಗ, ದೀಪಿಕಾ ಮತ್ತು ಆನಂದ್‌ ಮದುವೆಗೆ ಪುರುಷೋತ್ತಮ್ ಗ್ರೀನ್ ಸಿಗ್ನಲ್ ಕೊಡುತ್ತಾರಾ?
ಸತ್ಯದ ದಾರಿ ಹಿಡಿದ ವಿಶ್ವನಾಥನ್ ಆನಂದ್!
ಇಷ್ಟು ದಿನ ಪರಿಸ್ಥಿತಿಯ ಒತ್ತಡದಿಂದ ‘ಗೂಬೆ ಬಾಸ್’ ಆನಂದ್ ಒಂದರ ಮೇಲೊಂದರಂತೆ ಸುಳ್ಳುಗಳನ್ನು ಹೇಳಿದ್ದರು. ಆದ್ರೀಗ, ಸುಳ್ಳಿನ ಮೂಟೆಯನ್ನ ಪಕ್ಕಕ್ಕೆ ಇಟ್ಟು ಸತ್ಯದ ದಾರಿಯನ್ನ ಹಿಡಿದು ದೀಪಿಕಾಳನ್ನ ಮದುವೆಯಾಗಲು ವಿಶ್ವನಾಥನ್ ಆನಂದ್ ನಿರ್ಧರಿಸಿದ್ದಾರೆ.

ತಮ್ಮ ಹಾಗೂ ಪುರುಷೋತ್ತಮ್ ನಡುವಿನ ಮನಸ್ತಾಪ, ಭಿನ್ನಾಭಿಪ್ರಾಯಕ್ಕೆ ಗಿರಿಧರ್ ಕಾರಣ ಎಂಬುದು ಆನಂದ್‌ಗೆ ಮನದಟ್ಟಾಯಿತು. ಹೀಗಾಗಿ, ಪುರುಷೋತ್ತಮ್‌ಗೆ ಇರುವ ಸತ್ಯವನ್ನ ಹೇಳಿದ ಆನಂದ್ ಮನಸಾರೆ ಕ್ಷಮೆ ಕೋರಿದರು. ಮೊದಮೊದಲು ವ್ಯಂಗ್ಯವಾಗಿ ಮಾತನಾಡಿದರೂ, ನಂತರ ಮನಸಾರೆ ಕ್ಷಮಿಸಿರುವುದಾಗಿ ಪುರುಷೋತ್ತಮ್ ತಿಳಿಸಿದರು.

Doresani: ಅಯ್ಯೋ.. ತಪ್ಪು ತಿಳಿದುಕೊಂಡ ದೀಪಿಕಾ: ಸಂಕಷ್ಟದಲ್ಲಿ ಆನಂದ್!
‘ವರ’ ಆನಂದ್‌ ಎಂದು ಗೊತ್ತಿಲ್ಲ!
ಮಗಳು ದೀಪಿಕಾಳನ್ನ ನೋಡಲು ಬಂದಿರುವ ‘ಗಂಡು’ ಆನಂದ್ ಎಂದು ಪುರುಷೋತ್ತಮ್‌ಗೆ ಇನ್ನೂ ಗೊತ್ತಿಲ್ಲ. ಈ ವಿಷಯ ಗೊತ್ತಾಗೋದು ಬೇಡ ಅಂತ ದೀಪಿಕಾ ಪ್ರಯತ್ನಿಸುತ್ತಿದ್ದಾಳೆ. ‘ಮುಖ್ಯವಾದ ವಿಷಯ’ವನ್ನು ಹೇಳಲೇಬೇಕು ಅಂತ ಆನಂದ್ ಪಣತೊಟ್ಟು ನಿಂತಿದ್ದಾರೆ. ಹಾಗಾದ್ರೆ, ದೀಪಿಕಾ ಜೊತೆಗಿನ ಮದುವೆ ಪ್ರಸ್ತಾಪವನ್ನು ಪುರುಷೋತ್ತಮ್ ಮುಂದಿಡುತ್ತಾರಾ ಆನಂದ್?

Doresani Serial: ದೀಪಿಕಾ ತಂದೆ ಪುರುಷೋತ್ತಮ್ ಎಂಬ ಸತ್ಯ ಆನಂದ್‌ಗೆ ಗೊತ್ತಾಯ್ತು!
ಸತ್ಯವತಿ ಕಿತಾಪತಿ ಮಾಡುತ್ತಾರಾ?
ಪುರುಷೋತ್ತಮ್ ಮತ್ತು ಕುಟುಂಬದ ಮೇಲೆ ಸತ್ಯವತಿಗೆ ದ್ವೇಷ ಇದೆ. ತಮ್ಮ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ದೀಪಿಕಾ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಾಳೆ ಅಂತ ಪದೇ ಪದೇ ಸತ್ಯವತಿ ಹೇಳಿದ್ದಾರೆ. ದೀಪಿಕಾ ಮತ್ತು ಆನಂದ್ ಲವ್ ಮಾಡುತ್ತಿರುವ ವಿಷಯ ಕೂಡ ಸತ್ಯವತಿಗೆ ಗೊತ್ತಿದೆ. ಆದರೆ, ಆನಂದ್ ‘ಬಾಸ್’ ಅಲ್ಲ ಡ್ರೈವರ್ ಅಂತ ಸತ್ಯವತಿ ನಂಬಿದ್ದಾರೆ.

Doresani: ಗೂಬೆ ಬಾಸ್‌ಗೆ ಮಗಳನ್ನ ಕೊಟ್ಟು ಮದುವೆ ಮಾಡುತ್ತಾರಾ ಪುರುಷೋತ್ತಮ್?
ಈಗ ಪುರುಷೋತ್ತಮ್ ಮನೆಗೆ ಬಂದಿರುವ ಗಂಡು ಆನಂದ್ ಹೌದೋ, ಅಲ್ವೋ ಎಂಬುದನ್ನ ತಿಳಿದುಕೊಳ್ಳಲು ಸತ್ಯವತಿ ಮುಂದಾಗಿದ್ದಾರೆ. ಆನಂದ್ ಮತ್ತು ಪುರುಷೋತ್ತಮ್ ನಡುವಿನ ಭಿನ್ನಾಭಿಪ್ರಾಯವೇನೋ ಬಗೆಹರಿದಿದೆ. ಆದ್ರೀಗ, ಸತ್ಯವತಿಯ ಕಿತಾಪತಿಯಿಂದ ಮತ್ತೆ ಆನಂದ್ ಹಾಗೂ ಪುರುಷೋತ್ತಮ್ ಮಧ್ಯೆ ಮನಸ್ತಾಪ ಶುರುವಾಗುತ್ತಾ? ಆನಂದ್ ವಿರುದ್ಧ ಮತ್ತೆ ದೀಪಿಕಾ ತಪ್ಪು ತಿಳಿದುಕೊಳ್ಳುತ್ತಾರಾ? ಎಂಬ ಕುತೂಹಲ ಸದ್ಯ ವೀಕ್ಷಕರಿಗೆ ಕಾಡುತ್ತಿದೆ.

ಅಂದ್ಹಾಗೆ, ‘ದೊರೆಸಾನಿ’ ಧಾರಾವಾಹಿಯಲ್ಲಿ ದೀಪಿಕಾ ಆಗಿ ನಟಿ ರೂಪಿಕಾ, ಆನಂದ್ ಆಗಿ ನಟ ಪೃಥ್ವಿರಾಜ್, ಪುರುಷೋತ್ತಮ್ ಆಗಿ ನಟ ಜೈದೇವ್ ಮೋಹನ್, ಸತ್ಯವತಿ ಆಗಿ ಭವಾನಿ ಪ್ರಕಾಶ್ ಅಭಿನಯಿಸುತ್ತಿದ್ದಾರೆ.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ