ಆ್ಯಪ್ನಗರ

ಒಂದೇ ವೇದಿಕೆಯಲ್ಲಿ ಡ್ರಾಮಾ ಜ್ಯೂನಿಯರ್ಸ್‌- ಸರಿಗಮಪ ಮಹಾಸಂಗಮ

ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್‌' ಮತ್ತು 'ಸರಿಗಮಪ' ರಿಯಾಲಿಟಿ ಶೋಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮನರಂಜನೆ ಹೆಚ್ಚಿಸಿದ್ದಾರೆ. ಈ ಮಹಾಸಂಗಮ ಕಾರ್ಯಕ್ರಮಕ್ಕೆ ಕರದಂಟು ನಾಡು ಗೋಕಾಕ್‌ ಸಾಕ್ಷಿಯಾಗಿದ್ದು ವಿಶೇಷ.

Vijaya Karnataka 24 Nov 2018, 9:21 am
* ಶರಣು ಹುಲ್ಲೂರು
Vijaya Karnataka Web drama-juniors


ಜನಪ್ರಿಯ ಕಾರ್ಯಕ್ರಮಗಳನ್ನು ಒಟ್ಟೊಟ್ಟಿಗೆ ಒಂದೇ ವೇದಿಕೆಯಲ್ಲಿ ಕರೆತರುವ ಮೂಲಕ ಡಬಲ್‌ ಮನರಂಜನೆ ನೀಡುತ್ತಲೇ ಬಂದಿರುವ ಜೀ ಕನ್ನಡ ವಾಹಿನಿ, ಮೊದಲ ಬಾರಿಗೆ 'ಡ್ರಾಮಾ ಜ್ಯೂನಿಯರ್ಸ್‌ ಸೀಸನ್‌-3' ಮತ್ತು 'ಸರಿಗಮಪ ಸೀಸನ್‌-15' ರಿಯಾಲಿಟಿ ಶೋಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಖತ್‌ ಮನರಂಜನೆ ನೀಡುವ ಕಾರ್ಯಕ್ರಮ ರೂಪಿಸಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್‌ನ ವಾಲ್ಮೀಕಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಒಂದೇ ವೇದಿಕೆ ಮತ್ತು ಇಬ್ಬರು ನಿರೂಪಕರು, ಎರಡೂ ಶೋಗಳ ತೀರ್ಪುಗಾರರು, 32 ಮಂದಿ ಸ್ಪರ್ಧಿಗಳು, ಡ್ರಾಮಾ ಮಕ್ಕಳ ಸ್ಕಿಟ್‌ಗಳು, ಸರಿಗಮನ ಕಂಟೆಸ್ಟಂಟ್‌ನ ಹಾಡು, ನೃತ್ಯ ಹೀಗೆ ನೋಡುಗರಿಗೆ ಹಬ್ಬದ ವಾತಾವರಣವೇ ಸೃಷ್ಟಿ ಮಾಡಿತ್ತು ಎಂದು ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಡ್ರಾಮಾ ಜ್ಯೂನಿಯರ್ಸ್‌ನ ಸ್ಪರ್ಧಿ ಡಿಂಪನಾಳ ಮಾತು, ಹನುಮಂತಪ್ಪನ ಮುಗ್ಧತೆ, ಮಧುರ ಕಂಠಗಳ ಹಾಡು, ಮಕ್ಕಳ ಮೃಧುವಾದ ಮಾತು ಇವೆಲ್ಲದರ ಜತೆಗೆ ಹಂಸಲೇಖರಚಿಸಿದ ಅಣ್ಣಾವ್ರು ಡಾ.ರಾಜ್‌ಕುಮಾರ್‌ ಹಾಡಿದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಸಂಭ್ರಮ, ಈ ನವೆಂಬರ್ ತಿಂಗಳಿಗೆ ಮತ್ತಷ್ಟು ಮೆರಗು ನೀಡಿತು ಈ ಗೀತೆ. ಹನುಮಂತಪ್ಪ ಹಾಡಿದ 'ಕುಲದಲ್ಲಿ ಕೀಳ್ಯಾವುದೋ' ಗೀತೆಗೆ ಜಡ್ಜಸ್‌ ವೇದಿಕೆ ಹತ್ತಿ ಕುಣಿದು ಕುಪ್ಪಳಿಸಿದರು. ವೀಕ್ಷ ಕರೂ ಕೂಡ ಅವರ ಹಾಡಿಗೆ ಹೆಜ್ಜೆ ಹಾಕಿದ್ದು ನೋಡುಗರ ಸಂಭ್ರಮವನ್ನು ಹೆಚ್ಚಿಸಿತು. ಹಳ್ಳಿಯ ಸುತ್ತಮುತ್ತಲಿನ ಜನ ಹನುಮಂತಪ್ಪನಂತೆ ಹೆಗಲ ಮೇಲೆ ಟವಲ್‌ ಹಾಕಿಕ್ಕೊಂಡು ತಮ್ಮ ಅಭಿಮಾನ ವ್ಯಕ್ತ ಪಡಿಸಿದ್ದು ವಿಶೇಷವಾಗಿತ್ತು ಎಂದು ಅವರು ಹೇಳಿದ್ದಾರೆ.

ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಮೈದಾನದಲ್ಲಿ ಸಂಗೀತ, ನಾಟಕ, ನೃತ್ಯ, ತಮಾಷೆಯ ಮಾತು ಮತ್ತು ಜಡ್ಜಸ್‌ ಗಳ ಕಾಮೆಂಟ್‌ಗಳು ಇಡೀ ಒಂದು ರಾತ್ರಿ ಮನರಂಜನೆಯನ್ನು ನೀಡಿದವು. ಈ ಸಂಭ್ರಮದ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಇದೇ ನ. 24 ಶನಿವಾರ ಮತ್ತು 25ರ ಭಾನುವಾರದಂದು ರಾತ್ರಿ 8ಕ್ಕೆ ಪ್ರಸಾರ ಆಗಲಿದೆ ಎಂಬುದಾಗಿ ಜೀ ಕನ್ನಡ ವಾಹಿನಿ ತಿಳಿಸಿದೆ.

ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್‌ ಮತ್ತು ಡಾನ್ಸ್‌ ಕರ್ನಾಟಕ ಡಾನ್ಸ್‌, ಸರಿಗಮಪ ಮತ್ತು ಡಾನ್ಸ್‌ ಕರ್ನಾಟಕ ಡಾನ್ಸ್‌, ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳ ಕಾಂಬಿನೇಷನ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮನರಂಜನೆ ನೀಡಿವೆ. ಈಗ ಮತ್ತೊಂದು ಮಹಾ ಸಂಗಮಕ್ಕೆ ಸಾಕ್ಷಿಯಾಗಿದೆ ಜೀ ಕನ್ನಡ ವಾಹಿನಿ.
ರಾಘವೇಂದ್ರ ಹುಣಸೂರು, ಮುಖ್ಯಸ್ಥ, ಜೀ ಕನ್ನಡ ವಾಹಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ