ಆ್ಯಪ್ನಗರ

ಜೀ ಕನ್ನಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ

ಈ ಎಲ್ಲ ಸಮಯ ಬದಲಾವಣೆಯೊಂದಿಗೆ ವೀಕೆಂಡ್‌ನಲ್ಲಿ ಸಂಜೆ 5.30ರಿಂದ ರಾತ್ರಿ 10.30 ಗಂಟೆವರೆಗೂ ನಿರಂತರ ಮನರಂಜನೆ ನೀಡಲು ಸಜ್ಜಾಗಿದೆ ಜೀ ಕನ್ನಡ ವಾಹಿನಿ. ಪ್ರೇಕ್ಷಕರಿಗೆ ವಾರಾಂತ್ಯದ ವೇಳೆಯಲ್ಲಿ ಪರಿಪೂರ್ಣ ಮನರಂಜನೆ ಸಿಗುವುದು ಖಚಿತ.

Vijaya Karnataka 18 Jan 2020, 5:02 pm

ಹೊಸ ರಿಯಾಲಿಟಿ ಶೋ ಸೇರ್ಪಡೆಯ ಜತೆಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಪ್ರಸಾರ ವೇಳೆಯಲ್ಲಿ ಹಲವು ಬದಲಾವಣೆಗಳು ಆಗಿವೆ. ಇಂದಿನಿಂದ (ಜ.18) ಈ ಸಮಯ ಬದಲಾವಣೆ ಪರ್ವ ಶುರುವಾಗಿದ್ದು, ನಿರಂತರ 5 ಗಂಟೆಗಳ ಕಾಲ ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಇರಲಿದೆ ಎಂದು ಜೀ ಕನ್ನಡ ವಾಹಿನಿಯ ಬಿಸ್ನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.
Vijaya Karnataka Web ಜೀ ಕನ್ನಡ


ಜನಪ್ರಿಯ ಧಾರಾವಾಹಿ 'ಉಘೇ ಉಘೇ ಮಾದೇಶ್ವರ' ಸಾಯಂಕಾಲ 5.30ಕ್ಕೆ ಪ್ರಸಾರವಾದರೆ, ಈ ವಾರದಿಂದ 'ಜೀನ್ಸ್‌' ಎಂಬ ವಿನೂತನ ರಿಯಾಲಿಟಿ ಶೋ ಶುರುವಾಗಲಿದೆ. 6.30ಕ್ಕೆ ಪ್ರಸಾರ ಆಗಲಿರುವ ಈ ಶೋದಲ್ಲಿ ರಕ್ತಸಂಬಂಧಿಗಳ ಹೊಸ ನೋಟ ಇರಲಿದೆ.

ಖ್ಯಾತ ನಟಿ, ನಿರೂಪಕಿ ಸುಷ್ಮಾ ರಾವ್‌ ಇದನ್ನು ನಡೆಸಿಕೊಡಲಿದ್ದಾರೆ. ಈ ಶನಿವಾರದಿಂದ ಜನಪ್ರಿಯ ಸಂಗೀತ ಶೋ 'ಸರಿಗಮಪ ಸೀಸನ್‌ 17' ಶುರುವಾಗಲಿದ್ದು, ರಾತ್ರಿ 7.30ಕ್ಕೆ ಗ್ರ್ಯಾಂಡ್‌ ಓಪನಿಂಗ್‌ ಸಂಚಿಕೆ ಪ್ರಸಾರ ಆಗಲಿದೆ. ರಾತ್ರಿ 9 ರಿಂದ ಭರ್ಜರಿ ಮನರಂಜನೆ ನೀಡುತ್ತಿರುವ 'ಕಾಮಿಡಿ ಕಿಲಾಡಿಗಳು' ಶೋ ನೋಡಬಹುದು.

ಕಿರುತೆರೆಯಲ್ಲಿ ಹೊಸ ಸೂಪರ್ ನ್ಯಾಚುರಲ್ ಧಾರಾವಾಹಿ 'ಅಮ್ನೋರು'

ಈ ಎಲ್ಲ ಸಮಯ ಬದಲಾವಣೆಯೊಂದಿಗೆ ವೀಕೆಂಡ್‌ನಲ್ಲಿ ಸಂಜೆ 5.30ರಿಂದ ರಾತ್ರಿ 10.30 ಗಂಟೆವರೆಗೂ ನಿರಂತರ ಮನರಂಜನೆ ನೀಡಲು ಸಜ್ಜಾಗಿದೆ ಜೀ ಕನ್ನಡ ವಾಹಿನಿ. ಪ್ರೇಕ್ಷಕರಿಗೆ ವಾರಾಂತ್ಯದ ವೇಳೆಯಲ್ಲಿ ಪರಿಪೂರ್ಣ ಮನರಂಜನೆ ಸಿಗುವುದು ಖಚಿತ.
'ಜೊತೆ ಜೊತೆಯಲಿ' ಆರ್ಯವರ್ಧನ್‌ ಮತ್ತು ಅನುಗೆ ಫ್ಯಾನ್ಸ್‌ ಕೊಟ್ಟ ಭರ್ಜರಿ ಗಿಫ್ಟ್‌ ಇದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ