ಆ್ಯಪ್ನಗರ

ಬಿಗ್‌ ಬಾಸ್‌ ಸ್ಪರ್ಧಿ ತಂದೆ ವಿರುದ್ಧ ಅತ್ಯಾಚಾರ ಆರೋಪ! 20ರ ಪ್ರಾಯದ ಯುವತಿ ಬಿಚ್ಚಿಟ್ಟ ಕಹಿ ಸತ್ಯವೇನು?

ಕೆಲವು ದಿನಗಳ ಹಿಂದೆಯೇ ಅತ್ಯಾಚಾರ ನಡೆದಿದ್ದರೂ ಯುವತಿ ದೂರು ನೀಡಿರಲಿಲ್ಲ. ಆದರೆ ಈಗ ಸ್ನೇಹಿತರ ಸಲಹೆ ಮೇರೆಗೆ ಧೈರ್ಯ ತಂದುಕೊಂಡು ನ್ಯಾಯಕ್ಕಾಗಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

Vijaya Karnataka Web 21 May 2020, 9:52 pm
ಹಿಂದಿ ಬಿಗ್‌ ಬಾಸ್‌ ಸ್ಪರ್ಧಿ ಶೆಹನಾಜ್‌ ಗಿಲ್‌ ತಂದೆ ಸಂತೋಖ್‌ ಸಿಂಗ್‌ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. 20ರ ಹರೆಯದ ಯುವತಿಗೆ ಬೆದರಿಕೆಯೊಡ್ಡಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ದೂರ ದಾಖಲಾಗಿದೆ.
Vijaya Karnataka Web ಶೆಹನಾಜ್‌ ಗಿಲ್‌ ತಂದೆ ಸಂತೋಖ್‌ ಸಿಂಗ್‌


ಮೇ 14ರಂದು ಈ ಹೀನಾಯ ಕೃತ್ಯ ನಡೆದಿದ್ದು, ಅದನ್ನು ಹೇಳಿಕೊಳ್ಳಲು ಭಯವಾಗಿದ್ದರಿಂದ ತಾನು ಇಷ್ಟು ದಿನ ಸುಮ್ಮನಿದ್ದೆ ಎಂದು ಯುವತಿಯು ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಈಗ ಸ್ನೇಹಿತರ ಸಲಹೆ ಮೇರೆಗೆ ದೂರು ನೀಡಲು ಅವರು ಮುಂದೆ ಬಂದಿದ್ದಾರಂತೆ. ಪಂಜಾಬ್‌ನಲ್ಲಿ ಈ ಘಟನೆ ನಡೆದಿದೆ.

ಆರೋಪಿಯ ಪುತ್ರಿ ಶೆಹನಾಜ್‌ ಗಿಲ್‌ ಅವರು ಹಿಂದಿ ಬಿಗ್‌ಬಾಸ್‌ ಸೀಸನ್‌ 13ರಲ್ಲಿ ಸ್ಪರ್ಧಿಸಿದ್ದರು. ಫೈನಲ್‌ವರೆಗೂ ಕಠಿಣ ಪೈಪೋಟಿ ನೀಡಿದ್ದರು. ಬಿಗ್‌ಬಾಸ್‌ ಮಾತ್ರವಲ್ಲದೆ ಕೆಲವು ಪಂಜಾಬಿ ಸಿನಿಮಾ ಮತ್ತು ಮ್ಯೂಸಿಕ್‌ ವಿಡಿಯೋಗಳಲ್ಲಿ ನಟಿಸುವ ಮೂಲಕ ಶೆಹನಾಜ್‌ ಫೇಮಸ್‌ ಆಗಿದ್ದರು. ಆದರೆ ಅವರ ತಂದೆ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿರುವುದರಿಂದ ಅವರ ಪ್ರತಿಷ್ಠೆಗೆ ಹೊಡೆತ ಬಿದ್ದಂತಾಗಿದೆ.

ಬಿಗ್‌ ಬಾಸ್‌ ಸ್ಪರ್ಧಿ ರಶ್ಮಿಗೆ ಎದುರಾಗಿದೆ ಬಹುದೊಡ್ಡ ಸವಾಲು! ನಟಿ ಆಗಿರುವುದು ಸುಲಭದ ಮಾತಲ್ಲ

'ಮೇ 14ರಂದು ನನ್ನ ಸ್ನೇಹಿತನನ್ನು ಭೇಟಿ ಮಾಡಲು ತೆರಳಿದ್ದಾಗ ಸಂತೋಖ್‌ ಸಿಂಗ್‌ ಕಾರಿನೊಳಗೆ ಕೂರುವಂತೆ ಬಲವಂತ ಮಾಡಿದರು. ಗನ್‌ ತೋರಿಸಿ ಬೆದರಿಸಿ, ನನ್ನ ಮೇಲೆ ಅತ್ಯಾಚಾರ ಮಾಡಿದರು. ಜೀವ ಬೆದರಿಕೆಯನ್ನೂ ಹಾಕಿದರು' ಎಂದು ಯುವತಿಯು ದೂರಿನಲ್ಲಿ ತಿಳಿಸಿದ್ದಾರೆ. ಮೇ 19ರಂದು ದೂರು ದಾಖಲಾಗಿದೆ.

ಅಂದು ಡೇಟಿಂಗ್‌ ಮಾಡ್ತೀವಿ ಎಂದಿದ್ದ ಜೋಡಿಯದ್ದು ಇಂದು ತಂದೆ-ಮಗಳ ಸಂಬಂಧ!

ಐಪಿಸಿ ಸೆಕ್ಷನ್‌ 376, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಆರಂಭಗೊಂಡಿದ್ದು, ಇನ್ನೂ ಆರೋಪಿ ಬಂಧನ ಆಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ