ಆ್ಯಪ್ನಗರ

ಯುಕೆಯಲ್ಲಿ ಹಿಂದಿ ಸಿನಿಮಾ ಚಾನೆಲ್‌ ಲಾಂಚ್‌

ಇಂಗ್ಲೆಂಡ್‌ನಲ್ಲಿ ಹಿಂದಿ ಸಿನಿಮಾ ವೀಕ್ಷಕರಿಗೆ ಇನ್ನು ಮುಂದೆ ಹಬ್ಬವೋ ಹಬ್ಬ. ಭಾರತದ ಖಾಸಗಿ ಚಾನೆಲ್‌ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಹಿಂದಿ ಸಿನಿಮಾಗಳ ಉಚಿತ ಚಾನೆಲ್‌ ಒಂದನ್ನು ಲಾಂಚ್‌ ಮಾಡಿದೆ.

Vijaya Karnataka Web 21 Oct 2016, 4:01 am
ಇಂಗ್ಲೆಂಡ್‌ನಲ್ಲಿ ಹಿಂದಿ ಸಿನಿಮಾ ವೀಕ್ಷಕರಿಗೆ ಇನ್ನು ಮುಂದೆ ಹಬ್ಬವೋ ಹಬ್ಬ. ಭಾರತದ ಖಾಸಗಿ ಚಾನೆಲ್‌ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಹಿಂದಿ ಸಿನಿಮಾಗಳ ಉಚಿತ ಚಾನೆಲ್‌ ಒಂದನ್ನು ಲಾಂಚ್‌ ಮಾಡಿದೆ. ದೇಶದ ಪ್ರಮುಖ ಚಾನೆಲ್‌ ಆಗಿರುವ ಈ ಸಂಸ್ಥೆ ತನ್ನ ನೆಟ್‌ವರ್ಕನ್ನು ಹಿಗ್ಗಿಸಿಕೊಳ್ಳುವ ಸಲುವಾಗಿ ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
Vijaya Karnataka Web hindi movie channel launch in uk
ಯುಕೆಯಲ್ಲಿ ಹಿಂದಿ ಸಿನಿಮಾ ಚಾನೆಲ್‌ ಲಾಂಚ್‌


ಮೊದಲಿಗೆ ಬಾಜೀರಾವ್‌ ಮಸ್ತಾನಿ, ಏರ್‌ ಲಿಫ್ಟ್‌ ಸಿನಿಮಾಗಳನ್ನು ಪ್ರಸಾರ ಮಾಡುವ ಮೂಲಕ ಈ ಖಾಸಗಿ ಚಾನೆಲ್‌ ಲಾಂಚ್‌ ಆಗಿದೆ. ಬರೀ ಸಿನಿಮಾಗಳಷ್ಟೇ ಅಲ್ಲದೆ ಫಿಲ್ಮ್‌ ಫೆಸ್ಟಿವಲ್‌, ಯುಕೆಯಲ್ಲಿ ನಡೆಯುವ ಇನ್ನಿತರ ಬಾಲಿವುಡ್‌ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳನ್ನು ಈ ಚಾನೆಲ್‌ ಕವರ್‌ ಮಾಡುತ್ತದೆ. ಈ ಮೊದಲು ಯೂರೋಪ್‌ ಮತ್ತು ಉತ್ತರ ಅಮೇರಿಕಾದಲ್ಲಿ ಈ ರೀತಿಯ ಉಚಿತ ಬಾಲಿವುಡ್‌ ಸಿನಿಮಾಗಳನ್ನು ಪ್ರಸಾರ ಮಾಡುವ ಚಾನೆಲ್‌ನ್ನು ಲಾಂಚ್‌ ಮಾಡಲಾಗಿತ್ತು. ಅಲ್ಲಿ ಯಶಸ್ವಿಯಾದ ನಂತರ ಯುಕೆಯಲ್ಲಿ ಆರಂಭಿಸಲಾಗಿದೆ. ಪ್ರಪಂಚದಾದ್ಯಂತ ಸಾಕಷ್ಟು ಮಂದಿ ಭಾರತೀಯರು ನೆಲೆಸಿರುವ ಕಾರಣ ಭಾರತೀಯ ಚಾನೆಲ್‌ಗಳ ಮಾರುಕಟ್ಟೆ ದೊಡ್ಡದಾಗಿ ಬೆಳೆಯುತ್ತಿದೆ. ಆ ನಿಟ್ಟಿನಲ್ಲಿ ಇಂತಹ ಹೊಸ ಹೊಸ ಚಾನೆಲ್‌ಗಳು ಲಾಂಚ್‌ ಆಗುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ