ಆ್ಯಪ್ನಗರ

ತಾತನ ಆಸೆ ಈಡೇರಿಸಲು ಸೀರಿಯಲ್‌ಗೆ ಬಂದೆ: 'ಅರಮನೆ ಗಿಳಿ' ನಟಿ ವರ್ಷಿಕಾ

’ಅರಮನೆ ಗಿಳಿ’ ನನ್ನ ನಿಜ ಬದುಕಿಗೆ ಬಹಳ ಹತ್ತಿರವಾದ ಸೀರಿಯಲ್‌. ನನ್ನ ನಟನೆಯನ್ನು ತಿದ್ದಿ ತೀಡಿದ ನನ್ನ ನಿರ್ದೇಶಕರು ಮತ್ತು ನಮ್ಮ ತಾಯಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ ನಟಿ ವರ್ಷಿಕಾ.

Vijaya Karnataka 19 Oct 2019, 11:33 am
ಅರಮನೆ ಗಿಳಿ ಸೀರಿಯಲ್‌ನಲ್ಲಿ ಮೀರಾ ಎಂಬ ಪಾತ್ರದ ಮೂಲಕ ಎಲ್ಲರ ಮನಗೆದ್ದಿರುವ ನಟಿ ವರ್ಷಿಕಾ ತನ್ನ ತಾತನ ಆಸೆಯನ್ನು ಈಡೇರಿಸಲು ಸೀರಿಯಲ್‌ಗೆ ಬಂದಿರುವುದಾಗಿ ಹೇಳಿದ್ದಾರೆ.
Vijaya Karnataka Web varshika


'ನಾನು ಮೂಲತಃ ಬೆಂಗಳೂರಿನವಳು, ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಿದ್ದೇನೆ. ಇಂದು ಸೀರಿಯಲ್‌ನಲ್ಲಿ ಜನ ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ತಾತ ತಾಂಡವಮೂರ್ತಿ. ಮೈಸೂರಿನಲ್ಲಿ ರಂಗಭೂಮಿ ಕಲಾವಿದರಾಗಿದ್ದ ಅವರಿಗೆ ನಾನು ನಟಿಯಾಗಬೇಕು ಎಂಬ ಆಸೆಯಿತ್ತು. ಹಾಗಾಗಿ ನಾನು ಸೀರಿಯಲ್‌ ಮೂಲಕ ನಟಿಯಾದೆ. ಆದರೆ ನನ್ನ ಸೀರಿಯಲ್‌ ನೋಡದೇ ಅವರು ಇಹ ಲೋಕ ತ್ಯಜಿಸಿದರು' ಎನ್ನುತ್ತಾರವರು. ಮಿನಾಕ್ಷಮ್ಮನ ಜನಪ್ರಿಯತೆಗೆ ಫಿದಾ ಆದ ಪವಿತ್ರಾ ಲೋಕೇಶ್‌

ವೀಣಾ ಪಾಣಿ ಎಂಬ ಸೀರಿಯಲ್‌ ಮೂಲಕ ವರ್ಷಿಕಾ ಕಿರುತೆರೆಗೆ ಎಂಟ್ರಿ ಕೊಟ್ಟರು. ಆ ಸೀರಿಯಲ್‌ನ ಯಶಸ್ಸಿನ ನಂತರ ಅರಮನೆ ಗಿಳಿ ಎಂಬ ಸೀರಿಯಲ್‌ ಆಫರ್‌ ಬಂದಿತಂತೆ. 'ಅರಮನೆ ಗಿಳಿಯಲ್ಲಿರುವ ಮೀರಾ ಪಾತ್ರದಂತೆಯೇ ನಾನು ನಿಜ ಜೀವನದಲ್ಲಿಯೂ ಇದ್ದೇನೆ. ಅಷ್ಟೇ ಬಬ್ಲಿ, ಜಾಲಿಯಾಗಿರುತ್ತೇನೆ. ಇನ್ನು ಜನ ಎಲ್ಲೇ ಹೋದರು 'ಸೀರಿಯಲ್‌ನಲ್ಲಿ ನಿಮ್ಮ ಗಂಡನಿಗೆ ಕಾಲು ಬರುತ್ತಾ, ನೀವು ನಿಮ್ಮ ಅತ್ತೆ ಯಾವಾಗ ಒಂದಾಗುತ್ತೀರಾ ಎಂದು ಕೇಳುತ್ತಾರೆ. ಅಂದರೆ ನಮ್ಮ ಸೀರಿಯಲ್‌ನ್ನು ಇಷ್ಟು ಜನ ನೋಡುತ್ತಿದ್ದಾರೆ ಎಂಬುದನ್ನು ತಿಳಿದು ನನಗೆ ಖುಷಿಯಾಗುತ್ತದೆ'ಎಂದು ಹೇಳುತ್ತಾರೆ ವರ್ಷಿಕಾ. ಕನ್ನಡ ಕಿರುತೆರೆಗೆ ಮರಳಿದ ಪವಿತ್ರಾ ಲೋಕೇಶ್

ಕಳೆದ ಐದು ವರ್ಷಗಳಿಂದ ನಾನು ಕಿರುತೆರೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಇದೊಂದು ವಿಭಿನ್ನ ಅನುಭವ. ಜನ ನಮ್ಮನ್ನು ಪಾತ್ರಗಳ ಮೂಲಕ ಗುರುತಿಸುವಾಗ ಏನೋ ಒಂದು ಪುಳಕ ಎಂದು ಹೇಳುತ್ತಾರವರು. ವರ್ಷಿಕಾ ನಟನೆಗೆ ಅವರ ತಾಯಿಯೇ ಟೀಚರ್‌ ಅಂತೆ. ಸಿನಿಮಾವೊಂದರಲ್ಲಿಯೂ ನಟಿಸಿರುವ ಅವರು ಇನ್ನು ಮೂರು ವರ್ಷದ ನಂತರ ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಕೆಲಸ ಮಾಡಲು ಆರಂಭಿಸುತ್ತೇನೆ ಎಂದು ಹೇಳಿ ಮಾತು ಮುಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ